ಮಂಗಳೂರು, ಅಕ್ಟೋಬರ್ 09, 2022 (ಕರಾವಳಿ ಟೈಮ್ಸ್) : ಎ1 ಹೆಲ್ಪಿಂಗ್ ಫೌಂಡೇಶನ್ ಹಾಗೂ ಇಂಡಿಯನ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫಾರಂ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ (ಸ ಅ) ಅವರ ಜನ್ಮ ದಿನದ ಪ್ರಯುಕ್ತ ಸರ್ವ ಧರ್ಮೀಯರನ್ನು ಒಗ್ಗೂಡಿಸಿ ಮಿಲಾದ್ ಸೌಹಾರ್ದ ಕೂಟ ಭಾನುವಾರ ಅಡ್ಯಾರ್-ಕಣ್ಣೂರಿನಲ್ಲಿ ನಡೆಯಿತು.
ಎ ಒನ್ ರಿಯಾಝ್ ಹಾಗೂ ಇಕ್ಬಾಲ್ ಪರ್ಲಿಯಾ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವೀಣ್ ಕೊಂಚಾಡಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಸುನಿಲ್ ಕೊಡಕ್ಕಲ್, ದಿನೇಶ್ ಕಣ್ಣೂರು, ದಯಾನಂದ, ಪ್ರವೀಣ್, ರವಿರಾಜ್, ನಾಸಿರ್ ಸಾಮಣಿಗ, ಮೊಹಮ್ಮದ್ ಮೋನು, ಶರೀಫ್ ವಳಾಲ್, ನವೀನ್. ಎಸ್ ಡಿ ಶಾಕಿರ್ ಕಣ್ಣೂರು, ನಿಝಾರ್ ಕಣ್ಣೂರು ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕಣ್ಣೂರು ಜುಮಾ ಮಸೀದಿ ಖತೀಬ್ ಅನ್ಸಾರ್ ಫೈಝಿ ಹಾಗೂ ಹಿಂದೂ ಬಾಂಧವರನ್ನು ಸನ್ಮಾನಿಸಲಾಯಿತು. ವಸಂತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment