ಬಂಟ್ವಾಳ, ಅಕ್ಟೋಬರ್ 16, 2022 (ಕರಾವಳಿ ಟೈಮ್ಸ್) : ಪೋಷಕರು ತಮ್ಮ ಮಕ್ಕಳನ್ನು ವಿದ್ಯಾರ್ಥಿ ದಿಸೆಯಲ್ಲೇ ಧಾರ್ಮಿಕ ನೆಲೆಗಟ್ಟು ಕಲ್ಪಿಸಿ ಧರ್ಮದ ಚೌಕಟ್ಟಿನಲ್ಲೇ ಬೆಳೆಸಿದಾಗ ಮಕ್ಕಳು ಹಾದಿ ತಪ್ಪಿ ಭವಿಷ್ಯದಲ್ಲಿ ಸಮಾಜಕ್ಕೂ, ಸಮುದಾಯಕ್ಕೂ ಕಂಟಕವಾಗುವುದನ್ನು ತಪ್ಪಿಸಲು ಸಾಧ್ಯವಿದೆ. ಇದಕ್ಕೆ ಎಸ್ಕೆಎಸ್ಸೆಸ್ಸೆಫ್ ಅಧೀನದ ಕ್ಯಾಂಪಸ್ ವಿಂಗ್ ಗಳಂತಹ ವೇದಿಕೆಗಳು ಸಮರ್ಪಕ ಹಾದಿಯಾಗಬಲ್ಲುದು ಎಂದು ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಖಾಸಿಂ ದಾರಿಮಿ ಕಿನ್ಯ ಅಭಿಪ್ರಾಯಪಟ್ಟರು.
ಪಾಣೆಮಂಗಳೂರು ಸಮೀಪದ ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ಶನಿವಾರ (ಅ 15) ನಡೆದ ದ್ವಿಮಾಸಿಕ ಮಜ್ಲಿಸುನ್ನೂರ್ ಹಾಗೂ ಮೌಲಿದುನ್ನಬಿ ಮುಹಮ್ಮದ್ ಮುಸ್ತಫಾ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ) ಕಾರ್ಯಕ್ರಮದಲ್ಲಿ ಹುಬ್ಬುರ್ರಸೂಲ್ ಭಾಷಣಗೈದ ಅವರು, ನಮ್ಮ ಮಕ್ಕಳನ್ನು ವಿದ್ಯಾರ್ಥಿ ದಿಸೆಯಲ್ಲಿ ಅವರ ಪ್ರತಿ ಚಲನ ವಲನಗಳ ಮೇಲೆ ತೀವ್ರ ನಿಗಾ ಇರಿಸಿದಾಗ, ಅವರನ್ನು ಲೌಕಿಕಕ್ಕಿಂತ ಧಾರ್ಮಿಕ ಕಾರ್ಯಗಳ ಬಗ್ಗೆ ಹೆಚ್ಚಾಗಿ ಪ್ರೇರೇಪಿಸಿದಾಗ ಅವರಲ್ಲಿ ದೈವಭಕ್ತಿ ಹಾಗೂ ಧರ್ಮ ಚಿಂತನೆಗಳು ಉಂಟಾಗಿ ಅವರು ಸಮುದಾಯದ ಏಳಿಗೆಗಾಗಿ ಪೂರಕವಾಗಿ ಬೆಳೆದು ಬರುವರು. ಮಕ್ಕಳ ಭವಿಷ್ಯ ಉತ್ತಮವಾದಾಗ ಸಮುದಾಯ, ಸಮಾಜ ಜೊತೆಗೆ ದೇಶಕ್ಕೂ ಒಳಿತಾಗಿ ಪರಿಣಮಿಸುವರು. ಮಕ್ಕಳ ಬಗ್ಗೆ ಅಶ್ರದ್ದೆ ವಹಿಸಿದಾಗ ಕುಟುಂಬ, ಸಮುದಾಯ, ಸಮಾಜ ಹಾಗೂ ದೇಶಕ್ಕೂ ಅವರ ಕಳಂಕವನ್ನುಂಟು ಮಾಡಲಿದ್ದಾರೆ. ಇದು ಪೋಷಕರ ಪಾಲಿಗೆ ಇಹ ಹಾಗೂ ಪರಲೋಕ ನಷ್ಟಕ್ಕೆ ಹೇತುವಾದೀತು ಎಂದವರು ಎಚ್ಚರಿಸಿದರು.
ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ಹೆಸರಿನಲ್ಲಿ ನಡೆಸುವ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ನಾವು ತಿಳಿದುಕೊಳ್ಳುವ ಅವರ ಬಗೆಗಿನ ವ್ಯಕ್ತಿತ್ವ ಬಣ್ಣನೆಗಳು ಅದು ನಮ್ಮ ವ್ಯಕ್ತಿ ಜೀವನದಲ್ಲೂ ಅಳವಡಿಕೆಯಾದಾಗ ಜೀವನ ಧನ್ಯಗೊಳ್ಳುವುದರ ಜೊತೆಗೆ ಇಹ-ಪರ ವಿಜಯಕ್ಕೆ ಅದು ಕಾರಣವಾಗಲಿದೆ ಎಂದು ಖಾಸಿಂ ದಾರಿಮಿ ಹೇಳಿದರು.
ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ಖಾದರ್ ಮದನಿ ಉದ್ಘಾಟಿಸಿದರು. ಅಬೂಬಕರ್ ಮದನಿ ಮೌಲಿದ್ ನೇತೃತ್ವ ವಹಿಸಿದ್ದರು.
ಬಶೀರ್ ಬೇಕರಿ ಸ್ವಾಗತಿಸಿ, ಅಬ್ದುಲ್ ಅಝೀಝ ಪಿ ಐ ವಂದಿಸಿದರು. ಇದೇ ವೇಳೆ ಕ್ಯಾಂಪಸ್ ವಿಂಗ್ ಛೇರ್ಮನ್ ಆಗಿ ಆಯ್ಕೆಯಾದ ರಿಳ್ವಾನ್ ಹಾಗೂ ಕಲ್ಲಿಕೋಟೆ ಕ್ಯಾಂಪಸ್ ವಿಂಗ್ ಶಿಬಿರದಲ್ಲಿ ಪಾಲ್ಗೊಂಡ ಶಹೀರ್ ಅವರನ್ನು ಅಭಿನಂದಿಸಲಾಯಿತು.
ಶಾಖಾ ಗೌರವಾಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಉಪಾಧ್ಯಕ್ಷ ಅಬ್ದುಲ್ ಮಜೀದ್ ಬೋಳಂಗಡಿ, ಪದಾಧಿಕಾರಿಗಳಾದ ಮುಹಮ್ಮದ್ ಶಫೀಕ್, ಇಸಾಕ್ ಫ್ಯಾಷನ್ ವೇರ್, ಬಶೀರ್ ಕೆ4, ಅಬ್ದುಲ್ ಖಾದರ್ ಪೈಂಟರ್, ರಫೀಕ್ ಇನೋಳಿ, ಅಬೂಬಕರ್ ಮೆಲ್ಕಾರ್, ಹಾಜಿ ಅಬ್ದುಲ್ ರಝಾಕ್, ಹಾಜಿ ಅಬೂಬಕ್ಕರ್ ಎನ್ ಬಿ, ಅಶ್ರಫ್ ಪರ್ಲಿಯಾ, ಸಿದ್ದೀಕ್ ಕಲ್ಲಡ್ಕ, ಹನೀಫ್ ಎಲೆಕ್ಟ್ರಿಷಿಯನ್, ಅಶ್ರಫ್ ಪಿವಿಎಸ್, ಇಸ್ಮಾಯಿಲ್ ಕಿಡವಾಕ, ಹನೀಫ್ ಡ್ರೈಫಿಶ್, ಎಸ್ಕೆಎಸ್ಸೆಸ್ಸೆಫ್ ನಂದಾವರ ಶಾಖೆಯ ಫಾರೂಕ್ ನಂದಾವರ, ಹಾರಿಸ್ ನಂದಾವರ, ಮನ್ಸೂರ್ ಬಂಗ್ಲೆಗುಡ್ಡೆ, ಅಬೂಬಕರ್ ಬಂಗ್ಲೆಗುಡ್ಡೆ, ಅಯೂಬ್ ಆಲಡ್ಕ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment