ಬಂಟ್ವಾಳ, ಅಕ್ಟೋಬರ್ 17, 2022 (ಕರಾವಳಿ ಟೈಮ್ಸ್) : ಬಂಟ್ವಾಳ ತಾಲೂಕು ಪೊಸಳ್ಳಿ ಕುಲಾಲ ಸಂಘಕ್ಕೆ ಬೆಂಗಳೂರು ಕುಲಾಲ ಸಂಘದಿಂದ ಸುಮಾರು ಮೂರು ಲಕ್ಷ ರೂಪಾಯಿ ಮೊತ್ತದಷ್ಟು ಮೌಲ್ಯದ ಅಡುಗೆ ಪಾತ್ರೆಗಳನ್ನು ಶನಿವಾರ ಹಸ್ತಾಂತರಿಸಲಾಯಿತು.
ಬೆಂಗಳೂರು ಕುಲಾಲ ಸಂಘದ ಅಧ್ಯಕ್ಷ ಪುರುಷೋತ್ತಮ ಚೇಂಡ್ಲ, ಕಾರ್ಯದರ್ಶಿ ಶಂಕರ್ ಜನ್ನಾಡಿ, ಕೋಶಾಧಿಕಾರಿ ಸೇಸಪ್ಪ ಪೆÇಸಳ್ಳಿ, ಉಪಾಧ್ಯಕ್ಷ ಜೆ ಎನ್ ಮೂಲ್ಯ, ರಾಮ ಅಮ್ಮುಂಜೆ, ಮಧುಕಿರಣ್ ಚಂದ್ರಿಗೆ, ಕೇಶವ ಬಂಟ್ವಾಳ, ರಮೇಶ್ ಬಂಟ್ವಾಳ ಅವರುಗಳು ಬಂಟ್ಚಾಳ ಕುಲಾಲ ಸುಧಾರಕ ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ, ಕೋಶಾಧಿಕಾರಿ ನಾಗೇಶ್ ಬಾಳೆಹಿತ್ಲು, ಸಮಿತಿ ಸದಸ್ಯರುಗಳಾದ ಸತೀಶ್ ಕುಲಾಲ್, ಲಕ್ಷ್ಮಣ್ ಕುಲಾಲ್ ಅವರಿಗೆ ಹಸ್ತಾಂತರಿಸಿದರು.
0 comments:
Post a Comment