ಮಂಗಳೂರು, ಅಕ್ಟೋಬರ್ 13, 2022 (ಕರಾವಳಿ ಟೈಮ್ಸ್) : ಅಂಚೆ ಇಲಾಖೆಯ ಮಂಗಳೂರು ವಿಭಾಗದ ವತಿಯಿಂದ ಮಂಗಳೂರಿನಿಂದ ತಿರುವನಂತಪುರಕ್ಕೆ ಪ್ರತಿ ದಿನ ಪಾರ್ಸೆಲ್ ರವಾನೆಗೆ ವಿಶೇಷ ಅಂಚೆ ವಾಹನ ಸೌಕರ್ಯ ಶುಭಾರಂಭಗೊಂಡಿದೆ.
ಭಾರತೀಯ ಅಂಚೆ ಇಲಾಖೆಯು ಭಾರತದಾದ್ಯಂತ ತನ್ನದೇ ಆದ ಅಖಿಲ ಭಾರತ ರೋಡ್ ಟ್ರಾನ್ಸ್ ಪೋರ್ಟ್ ನೆಟ್ ವರ್ಕ್ ಹೊಂದುವತ್ತ ಹೆಜ್ಜೆ ಹಾಕುತ್ತಿದೆ. ಈ ನಿಟ್ಟಿನಲ್ಲಿ ಬುಧವಾರ (ಅ 12) ರಾತ್ರಿಯಿಂದ ಪ್ರತಿದಿನ ಮಂಗಳೂರು ಅಂಚೆ ಕೇಂದ್ರದಿಂದ ಕಣ್ಣೂರು, ಕ್ಯಾಲಿಕಟ್, ತ್ರಿಶೂರು, ಕೊಚ್ಚಿ ಮಾರ್ಗವಾಗಿ ತಿರುವನಂತಪುರಂಗೆ ಪಾರ್ಸೆಲ್ ರವಾನಿಸಲು ತನ್ನದೇ ಆದ ಪಾರ್ಸೆಲ್ ವಾಹನದ ಸೌಲಭ್ಯಕ್ಕೆ ಚಾಲನೆ ನೀಡಲಾಯಿತು. ಇದೇ ಸಮಯದಲ್ಲಿ ತಿರುವನಂತಪುರದಲ್ಲೂ ಮಂಗಳೂರು ಕಡೆಗೆ ಹೊರಡುವ ವಾಹನಕ್ಕೆ ಚಾಲನೆ ನೀಡಲಾಗಿದೆ.
ಈ ವಾಹನದ ಮೂಲಕ ಕೇರಳದ ವಿವಿಧ ಭಾಗಗಳಿಗೆ ಮಂಗಳೂರು, ಪುತ್ತೂರು ಹಾಗೂ ಉಡುಪಿಯಿಂದ ಕಳುಹಿಸಲ್ಪಡುವ ಪಾರ್ಸೆಲ್ ಗಳ ತ್ವರಿತ ಸಾಗಾಟ ಮತ್ತು ಡೆಲಿವರಿ ಸಾಧ್ಯವಾಗಲಿದೆ. ಅಲ್ಲದೆ ಕೇರಳದ ಯಾವುದೇ ಊರಿನಿಂದ ಮಂಗಳೂರಿಗೆ ಕಳುಹಿಸಲ್ಪಡುವ ಪಾರ್ಸೆಲ್ ಗಳೂ ಕ್ಲಪ್ತ ಸಮಯದಲ್ಲಿ ತಲುಪಲಿವೆ.
ಅಂಚೆ ಮೂಲಕ ಕೇರಳ ಕಡೆಗೆ ಪಾರ್ಸೆಲ್ ಕಳುಹಿಸಲು ಇಚ್ಛಿಸುವ ಉದ್ದಿಮೆದಾರರು, ಇ-ಕಾಮರ್ಸ್ ಕಂಪೆನಿಗಳು,ಸಣ್ಣ ಕೈಗಾರಿಕೆದಾರರು ಮಂಗಳೂರು ಅಂಚೆ ವಿಭಾಗದ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಗಳಾದ ಶಂಕರ್ (+91 9448869772) ಅಥವಾ ಸುಭಾಷ್ (+91 8073678509) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment