ಬಂಟ್ವಾಳ, ಅಕ್ಟೋಬರ್ 12, 2022 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಬೆಂಬಲದಿಂದ ಪಂಚಾಯತಿಗೆ ಆಯ್ಕೆಯಾಗಿ ಬಳಿಕ ಬಿಜೆಪಿ ಸೇರಿಕೊಂಡಿದ್ದ ಮಹಿಳಾ ಸದಸ್ಯೆ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡ ವಿದ್ಯಮಾನ ಬಂಟ್ವಾಳದಲ್ಲಿ ಬುಧವಾರ ನಡೆದಿದೆ.
ಕಾಂಗ್ರೆಸ್ ಬೆಂಬಲಿಸಿ ಅಮ್ಟಾಡಿ ಗ್ರಾಮ ಪಂಚಾಯತ್ ಸದಸ್ಯೆಯಾಗಿ ಜನರಿಂದ ಆಯ್ಕೆಯಾಗಿದ್ದ ಶ್ರೀಮತಿ ಸೌಮ್ಯ ಅವರನ್ನು ಬಳಿಕ ಬಿಜೆಪಿಗರು ಕೆಲವೊಂದು ಭರವಸೆ ಹಾಗೂ ಆಮಿಷಗಳನ್ನೊಡ್ಡಿ ಬಿಜೆಪಿಗೆ ಸೇರ್ಪಡೆಗೊಳಿಸಿಕೊಂಡಿದ್ದು, ಇದೀಗ ಬಿಜೆಪಿಗರು ಯಾವುದೇ ಭರವಸೆಗಳನ್ನು ಈಡೇರಿಸದೆ ವಂಚಿಸಿದ್ದರಿಂದ ನೊಂದುಕೊಂಡು ಬುಧವಾರ ಮತ್ತೆ ಕೈ ಪಾಳಯಕ್ಕೆ ಸೇರಿಕೊಂಡಿದ್ದಾರೆ.
ಬುಧವಾರ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್ ಅವರ ನೇತೃತ್ವದಲ್ಲಿ ಘರ್ ವಾಪ್ಸೀ ಆಗಿರುವ ಶ್ರೀಮತಿ ಸೌಮ್ಯ ಅವರು ಸುಳ್ಳು ಭರವಸೆ ಹಾಗೂ ಅನೇಕ ರೀತಿಯ ಅಮಿಷಗಳನ್ನು ಒಡ್ಡಿ ಬಲವಂತದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿತ್ತು. ಬಿಜೆಪಿ ಪಕ್ಷದ ಮುಖಂಡರು ಕೊಟ್ಟ ಯಾವುದೇ ಭರವಸೆ ಈಡೇರಿಸದೆ ಇರುವುದರಿಂದ ಮನ ನೊಂದು ಹಾಗೂ ಪಕ್ಷದಲ್ಲಿ ಕಡೆಗಣಿಸಿರುವುದನ್ನು ಖಂಡಿಸಿ ಬಿಜೆಪಿ ಪಕ್ಷಕ್ಕೆ ರಾಜಿನಾಮೆ ನೀಡಿ ಅಭಿವೃದ್ಧಿಯ ಹರಿಕಾರ ಮಾಜಿ ಸಚಿವ ಬಿ ರಮಾನಾಥ ರೈ ಅವರ ಮೇಲಿನ ವಿಶ್ವಾಸದಿಂದ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಳ್ಳುವುದಾಗಿ ಶ್ರೀಮತಿ ಸೌಮ್ಯ ಘೋಷಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿ ದುಡಿದು ಪಕ್ಷದ ಯಶಸ್ಸಿನಲ್ಲಿ ಪೂರ್ಣ ಪ್ರಮಾಣದಲ್ಲಿ ತೋಡಗಿಸಿಕೊಳ್ಳುವುದಾಗಿ ಇದೇ ವೇಳೆ ಅವರು ಭರವಸೆ ನೀಡಿದ್ದಾರೆ.
ಸೌಮ್ಯ ಸೇರ್ಪಡೆ ವೇಳೆ ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಜಿ ಪಂ ಮಾಜಿ ಸದಸ್ಯ ಬಿ ಪದ್ಮಶೇಖರ್ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾದರ ಪೂಜಾರಿ, ಪಕ್ಷ ಪ್ರಮುಖರಾದ ಜಗದೀಶ್ ಕೊಯಿಲ, ಮನೋಹರ್ ನೆರಂಬೋಳ್, ರಿಚಾರ್ಡ್ ಮಿನೇಜಸ್, ಸದಾನಂದ ಶೆಟ್ಟಿ, ಪ್ರವೀಣ್ ರೋಡ್ರಿಗಸ್, ಸುಧಾಕರ್ ಶೆಣೈ, ಮಾಣಿಕ್ಯರಾಜ್ ಜೈನ್, ಲವೀನಾ ವಿ ಮೋರಸ್, ಉಮಾನಾಥ ಶೆಟ್ಟಿ, ವಿಶ್ವನಾಥ ಪೂಜಾರಿ, ಬಿ ಆರ್ ಅಂಚನ್, ಜಗನ್ನಾಥ ತುಂಬೆ, ವೆಂಕಪ್ಪ ಪೂಜಾರಿ, ಅಮ್ಮು ಅರ್ಬಿಗುಡ್ಡೆ, ಪದ್ಮನಾಭ ಸಾಮಂತ್, ನಿತ್ಯಾನಂದ ಕಲಾಯಿ ಮೊದಲಾದವರು ಜೊತೆಗಿದ್ದರು.
0 comments:
Post a Comment