ಉಳ್ಳಾಲ, ಅಕ್ಟೋಬರ್ 11, 2022 (ಕರಾವಳಿ ಟೈಮ್ಸ್) : ಝಬೀನಾ ಅಬ್ದುಲ್ಲ ಪಡೀಲ್ ಮಾಲಕತ್ವದ ಲೀಡ್ ಟ್ಯೂಟರ್ ಸೆಂಟರ್ ಶೈಕ್ಷಣಿಕ ಸಂಸ್ಥೆಯು ಉಳ್ಳಾಲ ಸಮೀಪದ ಮುಕ್ಕಚ್ಚೇರಿ ಐಫಾ ಮೋಲ್ ಸಂಕೀರ್ಣದಲ್ಲಿ ಅಕ್ಟೋಬರ್ 10 ರಂದು ಸೋಮವಾರ ಲೋಕಾರ್ಪಣೆಗೊಂಡಿತು.
ಬೋಳಂಗಡಿ ಹವ್ವಾ ಜುಮಾ ಮಸೀದಿ ಖತೀಬ್ ಸಯ್ಯಿದ್ ಯಹ್ಯಾ ತಂಙಳ್ ಉದ್ಘಾಟಿಸಿದರು. ನಿಝಾಂ ಪಡೀಲ್, ಮಂಗಳೂರು ಎಂಪೈರ್ ಹೋಟೆಲ್ ಮಾಲಕ ಮುಸ್ತಫಾ, ಕಲ್ಲಾಪು ಅಲ್ ಬೈಕ್ ಬ್ರೂಸ್ಟೆಡ್ ಮಾಲಕ ಹಸನ್, ಪಡೀಲ್ ವಿಜಯ ನಗರ ಮಸೀದಿ ಅಧ್ಯಕ್ಷ ಯಾಕೂಬ್ ಅಫ್ನಾನ್, ರಝಾಕ್ ಪಡೀಲ್, ತೊಕ್ಕೊಟ್ಟು ಸಿಗ್ಮಾ ಟ್ಯೂಟೋರಿಯಲ್ ಪ್ರಾಂಶುಪಾಲ ಇಲ್ಯಾಸ್, ಮುಸಫ್ಫರ್ ನಂದಾವರ, ಅಶ್ಫಾಕ್ ಸಾಲೆತ್ತೂರು, ಹೋರಿಝೋನ್ ಜಿಮ್ ಮಾಸ್ಟರ್ ಶೆಟ್ಟಿ ಚಂದ್ರನಾಥ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಸ್ಥೆಯಲ್ಲಿ 1 ರಿಂದ 10ನೇ ತರಗತಿವರೆಗಿನ ಮಕ್ಕಳ ಸಹಿತ ಪಿಯುಸಿ ಹಾಗೂ ಪದವಿ ತರಗತಿ ವಿದ್ಯಾರ್ಥಿಗಳಿಗೂ ವಿಶೇಷ ಬೋಧನಾ ತರಗತಿ ನಡೆಸಲಾಗುವುದು. ಜೊತೆಗೆ ವಿದ್ಯಾರ್ಥಿಗಳಿಗೆ ಅಧ್ಯಯನ ಕೌಶಲ್ಯ, ಓದು ಹಾಗೂ ಬರವಣಿಗೆ ಕೌಶಲ್ಯ ಹಾಗೂ ಪ್ರತಿ ವಿದ್ಯಾರ್ಥಿಗೂ ವೈಯುಕ್ತಿಕ ಗಮನ £ೀಡಲಾಗುವುದು. ಈ ಬಗ್ಗೆ ವಿವರಗಳಿಗೆ ಮೊಬೈಲ್ ಸಂಖ್ಯೆ 9845432779 ಅಥವಾ 9731567192 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.
0 comments:
Post a Comment