ಬಂಟ್ವಾಳ, ಅಕ್ಟೋಬರ್ 01, 2022 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀ ವೀರವಿಠಲ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಇವುಗಳ ಆಶ್ರಯದಲ್ಲಿ 98ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವವು ಅಕ್ಟೋಬರ್ 2 ರಿಂದ 5ರವರೆಗೆ ಶಾಲೆಯಲ್ಲಿ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಅ 2 ರ ಭಾನುವಾರ ಬೆಳಿಗ್ಗೆ 9ಕ್ಕೆ ಶ್ರೀ ದೇವತಾ ಪ್ರಾರ್ಥನೆ, ಶ್ರೀ ವೀರವಿಠಲ ವೆಂಕಟರಮಣ ಸ್ವಾಮಿ ದೇವಸ್ಥಾನದಿಂದ ಶ್ರೀ ದೇವಿಯ ಮೆರವಣಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 11 ಗಂಟೆಗೆ ಶ್ರೀ ದೇವಿಯ ಪ್ರತಿಷ್ಠೆ ನಡೆಯಲಿದೆ. ಬಳಿಕ ಪ್ರತಿದಿನ ಮಂಗಳಾರತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
ಅ 5 ರಂದು ರಾತ್ರಿ 9ಕ್ಕೆ ಮಹಾಪೂಜೆ, ಬಳಿಕ ಶ್ರೀ ದೇವಿಯ ವಿಸರ್ಜನಾ ಪೂಜೆ, ಪ್ರಸಾದ ವಿತರಣೆ, ಭವ್ಯ ಶೋಭಾಯಾತ್ರೆ ಹಾಗೂ ಜಲಸ್ಥಂಬನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.
0 comments:
Post a Comment