ಪರ್ಲಿಯಾದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ : ಸಹೋದರರ ಬಂಧಿಸಿ ಜೈಲಿಗಟ್ಟಿದ ಬಂಟ್ವಾಳ ನಗರ ಪೊಲೀಸರು - Karavali Times ಪರ್ಲಿಯಾದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ : ಸಹೋದರರ ಬಂಧಿಸಿ ಜೈಲಿಗಟ್ಟಿದ ಬಂಟ್ವಾಳ ನಗರ ಪೊಲೀಸರು - Karavali Times

728x90

17 October 2022

ಪರ್ಲಿಯಾದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ : ಸಹೋದರರ ಬಂಧಿಸಿ ಜೈಲಿಗಟ್ಟಿದ ಬಂಟ್ವಾಳ ನಗರ ಪೊಲೀಸರು

ಬಂಟ್ವಾಳ, ಅಕ್ಟೋಬರ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಪರ್ಲಿಯಾ ಬಳಿಯ ಮದ್ದ ಜಂಕ್ಷ£್ನನಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದವರನ್ನು ಗಮನಿಸಿದ ಬಂಟ್ವಾಳ ನಗರ ಠಾಣಾ ಎಸ್ ಐ ಅವಿನಾಶ್ ನೇತೃತ್ವದ ಪೊಲೀಸರು ಪರ್ಲಿಯಾ ನಿವಾಸಿ ಮುಹಮ್ಮದ್ ಶರೀಫ್ ಅವರ ಪುತ್ರರಾದ ಉಮ್ಮರ್ ಸಿಯಾಫ್ (28) ಹಾಗೂ ಅಹಮ್ಮದ್ ಸೈಫ್ (23) ಎಂಬ ಸಹೋದರರನ್ನು ಬಂಧಿಸಿದ್ದಾರೆ.

ಸೋಮವಾರ ಬೆಳಿಗ್ಗೆ 10.30ರ ವೇಳೆಗೆ ಪೊಲೀಸರು ಗಸ್ತಿನಲ್ಲಿದ್ದ ವೇಳೆ ಬಿ ಮೂಡ ಗ್ರಾಮದ ಪರ್ಲಿಯ ಸಮೀಪದ ಮದ್ದ ಜಂಕ್ಷನ್ನಿನಲ್ಲಿ ಇಬ್ಬರನ್ನು ವಿಚಾರಿಸಿದಾಗ ಅವರು ಸಮರ್ಪಕವಾದ ಉತ್ತರವನ್ನು ನೀಡಲು ಅಸಮರ್ಥರಾಗಿದ್ದು ಯಾವುದೋ ಅಮಲು ಪದಾರ್ಥ ಸೇವಿಸಿದ ಘಾಟು ವಾಸನೆ ಬಂದಿರುತ್ತದೆ. ಇದರಿಂದ ಸಂಶಯಗೊಂಡು ಅವರನ್ನು ಪೊಲೀಸರು ಇನ್ನಷ್ಟು ವಿಚಾರಿಸಿದಾಗ ಮಾದಕ ದ್ರವ್ಯ ಸೇವಿಸಿದ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಮಾದಕ ದ್ರವ್ಯ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ತನಿಖೆ ನಡೆಸಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅದರಲ್ಲೂ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಗಳಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿದಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2022 ಕಲಂ 27(ಬಿ) ಎನ್ ಡಿ ಪಿ ಎಸ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಪರ್ಲಿಯಾದಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ : ಸಹೋದರರ ಬಂಧಿಸಿ ಜೈಲಿಗಟ್ಟಿದ ಬಂಟ್ವಾಳ ನಗರ ಪೊಲೀಸರು Rating: 5 Reviewed By: karavali Times
Scroll to Top