ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ “ಪ್ರೊಜೆಕ್ಟ್ ಮಂಗಳ” ಯೋಜನೆಗೆ ಕೆಪಿಟಿಯಲ್ಲಿ ಚಾಲನೆ - Karavali Times ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ “ಪ್ರೊಜೆಕ್ಟ್ ಮಂಗಳ” ಯೋಜನೆಗೆ ಕೆಪಿಟಿಯಲ್ಲಿ ಚಾಲನೆ - Karavali Times

728x90

13 October 2022

ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ “ಪ್ರೊಜೆಕ್ಟ್ ಮಂಗಳ” ಯೋಜನೆಗೆ ಕೆಪಿಟಿಯಲ್ಲಿ ಚಾಲನೆ

ಮಂಗಳೂರು, ಅಕ್ಟೋಬರ್ 13, 2022 (ಕರಾವಳಿ ಟೈಮ್ಸ್) : ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಚೆ ಇಲಾಖೆಯಿಂದ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೆÇೀಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆಯ ನೂತನ “ಪೆÇ್ರಜೆಕ್ಟ್ ಮಂಗಳ” ಯೋಜನೆಗೆ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ (ಕೆಪಿಟಿ) ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಎಲ್ಲಾ ರೀತಿಯ ಶೈಕ್ಷಣಿಕ ದಾಖಲೆಗಳು, ಅಂತಿಮ ಸೆಮಿಸ್ಟರ್ ಅಂಕಪಟ್ಟಿಗಳು, ಡಿಗ್ರಿ/ ಡಿಪೆÇ್ಲೀಮಾ ಸರ್ಟಿಫಿಕೇಟುಗಳನ್ನು ಸ್ಪೀಡ್ ಪೆÇೀಸ್ಟ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸುವ ಅಂಚೆ ಇಲಾಖೆಯ ನೂತನ ಯೋಜನೆ ಇದಾಗಿದೆ. 

ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಗಿರೀಶ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷ  ಶ್ರೀಹರ್ಷ ‘ಪ್ರಾಜೆಕ್ಟ್ ಮಂಗಳ’ ಲೋಗೊ ಅನಾವರಣಗೊಳಿಸಿದರು. 

ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಡಿಪೆÇ್ಲೀಮಾ ಕಾಲೇಜಿನ ಅಂಕ ಪಟ್ಟಿಗಳು, ಡಿಪೆÇ್ಲೀಮಾ ಡಿಗ್ರಿ ಸರ್ಟಿಫಿಕೇಟ್ ಗಳು ಇನ್ಮುಂದೆ ಸ್ಪೀಡ್ ಪೆÇೀಸ್ಟ್ ಮೂಲಕ ಮನೆಬಾಗಿಲಿಗೆ ತಲುಪಲಿದೆ. ಈ ಬಗೆಗಿನ ಒಪ್ಪಂದಕ್ಕೆ  ಇಂದು ಕೆಪಿಟಿಯಲ್ಲಿ ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರು ಕೆಪಿಟಿ ಪ್ರಭಾರ ಪ್ರಾಂಶುಪಾಲ ಗಿರೀಶ್ ಬಾಬು ಅವರಿಗೆ ಒಡಂಬಡಿಕೆ ಪತ್ರವನ್ನು ಹಸ್ತಾಂತರಿಸಿದರು. 

ಅಂಚೆ ಇಲಾಖೆ ಈಗಾಗಲೇ ವಿವಿಧ ಸರಕಾರಿ ದಾಖಲೆಗಳು, ಆಧಾರ್ ಕಾರ್ಡ್, ಪಾಸ್ ಪೆÇೀರ್ಟ್, ಪಾನ್ ಕಾರ್ಡ್, ಡೆಬಿಟ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್ ಬುಕ್ ಮುಂತಾದ ಲಕ್ಷಾಂತರ ದಾಖಲೆಗಳನ್ನು ಹಲವು ವರ್ಷಗಳಿಂದ ಪ್ರತಿದಿನ ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದು, ಈಗ ಎಲ್ಲಾ ಬಗೆಯ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೆÇೀಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳೂರು ಅಂಚೆ ವಿಭಾಗ  ಮೊದಲ ಹೆಜ್ಜೆ ಇಟ್ಟಿದೆ. 

ಪ್ರಸ್ತುತ ಪಿಯುಸಿ ಸೇರಿದಂತೆ, ಪದವಿ, ಉನ್ನತ ಪದವಿಗಳ ಅಂತಿಮ ಸೆಮಿಸ್ಟರ್ ಹಾಗೂ ಪದವಿಯ /ಉನ್ನತ ಪದವಿಯ  ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳು ಕಾಲೇಜು ಮುಗಿಸಿದ ಕೆಲ ತಿಂಗಳುಗಳ ನಂತರ ಮುದ್ರಣಗೊಂಡು ಕಾಲೇಜುಗಳಿಗೆ ರವಾನಿಸಲ್ಪಡುವುದರಿಂದ ವಿದ್ಯಾರ್ಥಿಗಳು ದೂರದ ಸ್ಥಳದಿಂದ ಇದನ್ನು ಪಡೆದುಕೊಳ್ಳುವುದಕ್ಕಾಗಿಯೇ ಕಾಲೇಜಿಗೆ ಕೆಲಸಕ್ಕೆ ರಜೆ ಹಾಕಿ ಬರಬೇಕಾದ ಅನಿರ್ವಾಯತೆಯಿದೆ. ಇದರಿಂದಾಗಿ ದೂರದ ಸ್ಥಳಗಳಿಂದ ಬರುವ ವಿದ್ಯಾರ್ಥಿಗಳು ಪ್ರಮಾಣ ಪತ್ರಗಳನ್ನು ಪಡೆಯಲು ಸಮಯ ಹಾಗೂ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ.  ವಿದ್ಯಾರ್ಥಿಗಳ ಈ ಅನಾನುಕೂಲತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆಯ ಈ ಹೊಸ ಯೋಜನೆ ಸಹಕಾರಿಯಾಗಲಿದೆ.

ಈ ಸೇವೆಯ ವಿಶೇಷತೆಗಳೇನೆಂದರೆ, ಈ ಪ್ರಮಾಣ ಪತ್ರ/ ಅಂಕ ಪಟ್ಟಿಗಳನ್ನು ಭಾರತದ ಯಾವುದೇ ಊರಿಗೂ ಸ್ಪೀಡ್ ಪೆÇೀಸ್ಟ್ ಸೇವೆಯ ಮೂಲಕ ತಲುಪಿಸಬಹುದು., ಬಟವಾಡೆಯಾಗಬೇಕಾಗಿರುವ ವಿಳಾಸವು ಕಾಲೇಜಿನ ಅರ್ಜಿಯಲ್ಲಿ ನಮೂದಿಸಲಾದ ವಿಳಾಸಕ್ಕಿಂತ ಬೇರೆ ಕೂಡಾ ಆಗಿರಬಹುದು., ವಿದ್ಯಾರ್ಥಿಗಳು ಪ್ರಮಾಣ ಪತ್ರವನ್ನು ಮನೆಯ ವಿಳಾಸದಲ್ಲಿ ಅಥವಾ ಕಛೇರಿಯ ವಿಳಾಸದಲ್ಲೂ ಪಡೆಯಬಹುದು., ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಯಾವುದೇ ಸದಸ್ಯರು ಬಟವಾಡೆ ಪಡೆದುಕೊಳ್ಳಬಹುದು., ಈ ಸರ್ಟಿಫಿಕೇಟ್/ ಅಂಕ ಪಟ್ಟಿಯನ್ನು  2 ರಿಂದ 5 ದಿನಗಳ ಒಳಗಾಗಿ ಸ್ಪೀಡ್ ಪೆÇೀಸ್ಟ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು.,  ರವಾನೆಯಿಂದ ಬಟವಾಡೆವರೆಗೆ ವಿವಿಧ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ ಎಸ್ ಎಂ ಎಸ್ ಮಾಹಿತಿ ನೀಡಲಾಗುವುದು.,  ಪ್ರಮಾಣ ಪತ್ರವನ್ನು ಒಳಗೊಂಡ ಸ್ಪೀಡ್ ಪೆÇೀಸ್ಟ್ ಬಟವಾಡೆಯ ಯಾವ ಹಂತದಲ್ಲಿದೆ ಎಂದು ಅಂಚೆ ಇಲಾಖೆಯ ವೆಬ್ ಸೈಟ್ ಮೂಲಕ ಟ್ರ್ಯಾಕ್ ಮಾಡಿ ನೋಡಬಹುದು.

ಅಂಚೆ ಇಲಾಖೆಯು ಈಗಾಗಲೇ ಮಂಗಳೂರಿನ ಇತರ ಎಲ್ಲಾ ಪಿಯುಸಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಗಳಿಂದ ಧನಾತ್ಮಕ ಉತ್ತರ ಬರುವ ನಿರೀಕ್ಷೆಯಿದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆದು ಮರಳುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಸೇವೆ ವರದಾನವಾಗಲಿದೆ. 

ಕೆಪಿಟಿ ಕಾಲೇಜಿನ ರಿಜಿಸ್ಟ್ರಾರ್ ಗುರುಬಸವರಾಜು, ಮಂಗಳೂರು ಸಹಾಯಕ ಅಂಚೆ ಅಧೀಕ್ಷಕ ಶ್ರೀನಾಥ್ ಎನ್ ಬಿ, ಮಂಗಳೂರು ಉತ್ತರ ಉಪ ವಿಭಾಗದ ಅಂಚೆ ನಿರೀಕ್ಷಕ ಮೆಲ್ವಿನ್ ಅರುಣ್ ಲೋಬೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಪಿಟಿ ಕಾಲೇಜಿನ ಅಬಜೆಕ್ಟ್ ಸಿಬ್ಬಂದಿ ಸೂರಜ್ ಪಿ ಎಚ್ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಇಲಾಖೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಮನೆಬಾಗಿಲಿಗೆ ತಲುಪಿಸುವ “ಪ್ರೊಜೆಕ್ಟ್ ಮಂಗಳ” ಯೋಜನೆಗೆ ಕೆಪಿಟಿಯಲ್ಲಿ ಚಾಲನೆ Rating: 5 Reviewed By: karavali Times
Scroll to Top