ಬಂಟ್ವಾಳ, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ವಿಟ್ಲ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 172/2020 ಕಲಂ 8(1)20(ಬಿ)(11)(ಎ) ಎನ್ ಡಿ ಪಿಎಸ್ ಆಕ್ಟ್ 1985 ರ ನ್ಯಾಯಾಲಯದ ಸಿಸಿ ನಂಬ್ರ 949/2022 ರಲ್ಲಿ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಆರೋಪಿಯಾಗಿದ್ದು, ವರ್ಷದ ಹಿಂದೆ ತಲೆಮರೆಸಿಕೊಂಡ ಗಾಂಜಾ ಪ್ರಕರಣದ ಆರೋಪಿ ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ ಮುಹಮ್ಮದ್ ಹನೀಫ್ ಅವರ ಪುತ್ರ ಮಹಮ್ಮದ್ ಆಸಿಫ್ (23) ಎಂಬ ವಾರಂಟ್ ಆಸಾಮಿಯನ್ನು ಕೊನೆಗೂ ವಿಟ್ಲ ಪೊಲೀಸರು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಠಾಣಾ ಎಎಸ್ಸೈ ಜಯರಾಮ್ ಹಾಗೂ ಸಿಬ್ಬಂದಿಗಳು ಆರೋಪಿ ಆಸಿಫ್ ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment