ಪುತ್ತೂರು, ಅಕ್ಟೋಬರ್ 30, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 67/17 ಕಲಂ 324 504, 506 ಐಪಿಸಿ ಹಾಗೂ ಕಲಂ 3(1)(ಆರ್) ಎಸ್ ಸಿ ಎಸ್ ಟಿ ಆಕ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಎಸ್ ಪಿ ಎಲ್ ಸಂಖ್ಯೆ 179/2017 ರಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಪುತ್ತೂರು ತಾಲೂಕು ನೆಟ್ಟಣಿಗೆಮುಡ್ನೂರು ಗ್ರಾಮದ ಬಸಿರಡ್ಕ ನಿವಾಸಿ ದಿವಂಗತ ಶ್ರೀನಿವಾಸ ಅವರ ಪುತ್ರ ಸಂದೇಶ್ ಕೆ ಎಸ್ (32) ಎಂಬಾತನನ್ನು ಅ 28 ರಂದು ವಿದೇಶದಿಂದ ಬರುತ್ತಿದ್ದ ವೇಳೆ ಮುಂಬೈಯ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದು ಪುತ್ತೂರು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದಂತೆ ಅ 29 ರಂದು 12.30 ಗಂಟೆಗೆ ಮುಂಬೈಯ ಸಹರ್ ಪೆÇಲೀಸ್ ಠಾಣೆಯಿಂದ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣಾ ಎಚ್ ಸಿ ದಯಾನಂದ ಹಾಗೂ ಪಿ ಸಿ ಗಿರೀಶ್ ಅವರು ವಶಕ್ಕೆ ಪಡೆದು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
30 October 2022
- Blogger Comments
- Facebook Comments
Subscribe to:
Post Comments (Atom)
0 comments:
Post a Comment