ಬಂಟ್ವಾಳ, ನವೆಂಬರ್ 01, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಜಂಕ್ಷನ್ನಿನಲ್ಲಿರುವ ಬೆಸ್ಟ್ ಆಂಗ್ಲ ಮಾದ್ಯಮ ಶಾಲೆ ಆಶ್ರಯದಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಕ್ರೀಡಾಂಗಣದಲ್ಲಿ ಬಂಟ್ವಾಳ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಸಮಾರಂಭ ಮಂಗಳವಾರ ನಡೆಯಿತು.
ಬಂಟ್ವಾಳ ಏಜುಕೇಶನ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ ರಮಾನಾಥ ರೈ ಕ್ರೀಡಾಕೂಟ ಉದ್ಘಾಟಿಸಿದರು. ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕಿ ಧನಭಾಗ್ಯ ಆರ್ ರೈ ಕ್ರೀಡಾಕೂಟದ ಧ್ವಜಾರೋಹಣಗೈದರು. ಇನ್ಫೆಂಟ್ ಜೀಸಸ್ ಚರ್ಚ್ ಧರ್ಮಗುರು ಫಾದರ್ ವೆಲೇರಿಯನ್ ಡಿ’ಸೋಜಾ ಕ್ರೀಡಾಜ್ಯೋತಿ ಬೆಳಗಿದರು.
ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾಡಳಿತಾಧಿಕಾರಿ ಮಹಾಬಲ ಆಳ್ವ. ಟ್ರಸ್ಟಿಗಳಾದ ರಶ್ಮಿ ಎಸ್ ಪೂಜಾ, ಸುಮ ಎಂ ಆಳ್ವಾ, ಶಾಲಾ ಮುಖ್ಯೋಪಾಧ್ಯಾಯಿನಿ ಸುನಿತಾ ಬಿ ಟಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ ಪಿ, ಪ್ರಮುಖರಾದ ಸುಜಾತ, ಸುಧಾ. ವಿಷ್ಣು ನಾರಾಯಣ ಹೆಬ್ಬಾರ್, ನಂದಾ, ಪ್ರೇಮಲತಾ, ಪ್ರದೀಪ್, ರತ್ನಾವತಿ, ಶಿವಪ್ರಸಾದ್ ರೈ, ನವೀನ್, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, 3 ವಲಯಗಳ ದೈಹಿಕ ಶಿಕ್ಷಣ ಶಿಕ್ಷಕರು, ವ್ಯವಸ್ಥಾಪಕರು ಮೊದಲಾದವರು ಭಾಗವಹಿಸಿದ್ದರು.
ಬಿ ಸಿ ರೋಡು ರಕ್ತೇಶ್ವರಿ ದೇವಸ್ಥಾನದಿಂದ ದೀಪಿಕಾ ಪ್ರೌಢಶಾಲಾ ಕ್ರೀಡಾಂಗಣದವರೆಗೆ ಕ್ರೀಡಾ ಜ್ಯೋತಿಯನ್ನು ಮೆರವಣಿಗೆಯ ಮೂಲಕ ಸಾಗಿಸಿ, ಬಳಿಕ ಪಾರಿವಾಳಗಳನ್ನು ಹಾರಿ ಬಿಡುವುದರ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಲಾಯಿತು.
ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಹರ್ಷಿತ್ ಕ್ರೀಡಾ ಪ್ರತಿಜ್ಞೆ ವಾಚಿಸಿದರು. ಬೆಸ್ಟ್ ಆಂಗ್ಲ ಮಾಧ್ಯಮ ಶಾಲಾ ಸಹ ಶಿಕ್ಷಕಿಯರಾದ ಸನ್ಮಿತಾ ವಂದಿಸಿ, ಸುಮನಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment