ಬಾಲಕನ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ಪ್ರಕರಣ : ಆರೋಪಿ ರಿಕ್ಷಾ ಚಾಲಕ 5 ದಿನ ಪೊಲೀಸ್ ಕಸ್ಟಡಿಗೆ - Karavali Times ಬಾಲಕನ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ಪ್ರಕರಣ : ಆರೋಪಿ ರಿಕ್ಷಾ ಚಾಲಕ 5 ದಿನ ಪೊಲೀಸ್ ಕಸ್ಟಡಿಗೆ - Karavali Times

728x90

9 November 2022

ಬಾಲಕನ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ಪ್ರಕರಣ : ಆರೋಪಿ ರಿಕ್ಷಾ ಚಾಲಕ 5 ದಿನ ಪೊಲೀಸ್ ಕಸ್ಟಡಿಗೆ

ಬಂಟ್ವಾಳ, ನವೆಂಬರ್, 10, 2022 (ಕರಾವಳಿ ಟೈಮ್ಸ್) : ಬಾಲಕನೊಂದಿಗೆ ಜಗಳವಾಡಿ ನಿರ್ಜನ ಪ್ರದೇಶದಲ್ಲಿ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ ಅಟೋ ರಿಕ್ಷಾ ಚಾಲಕ, ಬೋಳಂತೂರು ಗ್ರಾಮದ ಕೊಕ್ಕಪುಣಿ ನಿವಾಸಿ ಇಬ್ರಾಹಿಂ ಅವರ ಪುತ್ರ ಅಬ್ದುಲ್ ರಹಿಮಾನ್ @ ಅದ್ರಾಮ (40) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ಸ್ಥಳ ಮಹಜರು ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನನ್ನು 5 ದಿನಗಳ ಕಾಲ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.  



ಬೋಳಂತೂರು ಗ್ರಾಮದ ಕೊಕ್ಕಪುಣಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ, ಮೆಲ್ಕಾರಿನಲ್ಲಿ ಕ್ಲಿಕ್ ಮೊಬೈಲ್ ಅಂಗಡಿ ನಡೆಸುತ್ತಿರುವ ಸಲೀಂ (28) ಎಂಬವರು ಠಾಣೆಗೆ ದೂರು ನೀಡಿದ್ದು, ನನ್ನ ತಾಯಿಯ ತಮ್ಮ, ಅಟೋ ರಿಕ್ಷಾ ಚಾಲಕ ವೃತ್ತಿಯ ಅಬ್ದುಲ್ ರಹಿಮಾನ್ @ ಅದ್ರಾಮ ಅವರ ಮನೆಯು  ನಮ್ಮ ಮನೆಯ  ಸಮೀಪವಿದ್ದು, ನವೆಂಬರ್ 7 ರಂದು ರಾತ್ರಿ 8 ಗಂಟೆಗೆ ಅದ್ರಾಮ ನಮ್ಮ ಮನೆ ಬಳಿ ಬಂದು ಅಗತ್ಯದ ಕೆಲಸದ ಬಗ್ಗೆ ಒಂದು ಕಡೆಗೆ ಹೋಗಲಿಕ್ಕಿದೆ. ರಿಕ್ಷಾದಲ್ಲಿ ಪೆಟ್ರೋಲ್ ಇಲ್ಲ. ನಿನ್ನ ಬೈಕಿನಲ್ಲಿ ಜೊತೆಯಾಗಿ ಹೋಗೋಣವೆಂದು ತಿಳಿಸಿದಂತೆ, ನಾನು ಪಲ್ಸರ್  ಬೈಕ್ ಸಂಖ್ಯೆ ಕೆ ಎ 19 ಎಚ್ ಜೆ 3375 ಎಲ್ಲಿ ಅಬ್ದುಲ್ ರಹಿಮಾನ್ @ ಅದ್ರಾಮನನ್ನು ಹಿಂಬದಿ ಕುಳ್ಳಿರಿಸಿ, ಬೈಕನ್ನು ಬೋಳಂತೂರು-ಮಂಚಿಕಟ್ಟೆ- ಮೋಂತಿಮಾರು ದ್ವಾರದಿಂದಾಗಿ ಇರಾ ಸೋಮನಾಥ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಾ, ಬಲಕ್ಕೆ ಇರುವ ರಸ್ತೆಯಲ್ಲಿ ಸುಮಾರು 2 ಕಿ ಮೀ ದೂರ ಹೋಗುತ್ತಾ ಇರಾ ಪದವು ಮಣ್ಣು ರಸ್ತೆಯ ಪಕ್ಕ ಅಬ್ದುಲ್ ರಹಿಮಾನ್ @ ಅದ್ರಾಮ ಅವರು ಬೈಕ್ ನಿಲ್ಲಿಸಲು ತಿಳಿಸಿದ್ದಾರೆ. ಈ ಸಂದರ್ಭ ನಾನು ಬೈಕ್ ನಿಲ್ಲಿಸಿ, ಇಲ್ಲಿ ಯಾಕೆ ಬೈಕ್ ನಿಲ್ಲಿಸಬೇಕೆಂದು ಕೇಳಿದಾಗ ಅಬ್ದುಲ್ ರಹಿಮಾನ್ @ ಅದ್ರಾಮ ಬೈಕಿನಿಂದ ಇಳಿದು ನೆವಂಬರ್ 1 ರಂದು ರಾತ್ರಿ 8-30 ಗಂಟೆಗೆ ಸುರಿಬೈಲಿನ ಅಬ್ದುಲ್ ಸಮಾದ್ ನೊಂದಿಗೆ  ಜಗಳವಾಗಿ  ಸೀಮೆಎಣ್ಣೆ  ಹಾಕಿ, ಬೆಂಕಿ ಕೊಟ್ಟು ಪಕ್ಕದ ಗುಡ್ಡದಲ್ಲಿ ಸಾಯಿಸಿದ್ದೇನೆ. ಹೆಣವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕರಿಸುವಂತೆ  ಕೇಳಿಕೊಂಡಾಗ, ಗಾಬರಿಗೊಂಡ ನಾನು ಅಬ್ದುಲ್ ರಹಿಮಾನ್ @ ಅದ್ರಾಮನನ್ನು ಅಲ್ಲೇ ಬಿಟ್ಟು ತಪ್ಪಿಸಿ, ಬೈಕ್ ರೈಡ್ ಮಾಡಿಕೊಂಡು ನೇರವಾಗಿ ಮನೆಗೆ ಬಂದಿರುತ್ತೇನೆ. ಬಂದವನೇ ಭಯದಿಂದ ರಾತ್ರಿ ಜ್ವರ ಬಂದು ಮರು ದಿನ (ನ 8) ರಂದು ನನ್ನ ಅಣ್ಣ ಶರೀಫ್ ಅವರಿಗೆ ಅಬ್ದುಲ್ ರಹಿಮಾನ್ @ ಅದ್ರಾಮ ಅವರು ಅಬ್ದುಲ್ ಸಮಾದ್ ನನ್ನು ಇರಾದಲ್ಲಿ ಕೊಲೆ  ಮಾಡಿರುವ  ವಿಷಯ ತಿಳಿಸಿ, ಬಳಿಕ ಅವರೊಳಗೆ ಚರ್ಚಿಸಿ ದೂರು ನೀಡಿರುವುದಾಗಿದೆ ಎಂದು ಸಲೀಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2022 ಕಲಂ 302, 201  ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.



ನ 9 ರಂದು ಪ್ರಕರಣದ ತನಿಖಾ ಸಮಯ ಬಂಟ್ವಾಳ ಗ್ರಾಮಾಂತರ ಪೆÇಲೀಸರು ಬೆಳಿಗ್ಗೆ ಆರೋಪಿತ ಅಬ್ದುಲ್ ರಹಿಮಾನ್ @ ಅದ್ರಾಮ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಆತನ ಸ್ವ ಖುಷಿ ಹೇಳಿಕೆಯಂತೆ ಬಂಟ್ವಾಳ ತಾಲೂಕು ಇರಾ ಗ್ರಾಮದ ಇರಾ ಪದವು ಎಂಬಲ್ಲಿ ಆರೋಪಿ ಅಬ್ದುಲ್ ಸಮದ್ ನನ್ನು ಸೀಮೆ ಎಣ್ಣೆ ಹಾಕಿ ಸುಟ್ಟ ಸ್ಥಳವನ್ನು ಮತ್ತು ಮೃತದೇಹವನ್ನು ಯಾರಿಗೂ ಗೊತ್ತಾಗದೇ ಹಾಗೇ ಗುಡ್ಡ ಪ್ರದೇಶಕ್ಕೆ ಎಳೆದುಕೊಂಡು ಹೋಗಿ ಇಟ್ಟಿರುವ ಸ್ಥಳ ತೋರಿಸಿಕೊಟ್ಟಿದ್ದು, ಸ್ಥಳಕ್ಕೆ ಮಂಗಳೂರು ದೇರಳಕಟ್ಟೆ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಾಧಿಕಾರಿ ಮತ್ತು ತಂಡ ಶವ ಮಹಜರು ನಡೆಸಿದ್ದು, ಪ್ರಕರಣದ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಬರಮಾಡಿಸಿ ತಜ್ಞರ ಪರೀಕ್ಷೆಗೊಳಪಡಿಸಲಾಗಿರುತ್ತದೆ. 

ಪ್ರಕರಣದಲ್ಲಿ ಮೃತ ಅಬ್ದುಲ್ ಸಮದ್ ಕಾಣೆಯಾದ ಬಗ್ಗೆ ವಿಟ್ಲ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2022 ರಂತೆ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಯನ್ನು ಇದೀಗ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆತನನ್ನು 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. 

ಬಾಲಕನ ಮೃತದೇಹವನ್ನು ಬುಧವಾರ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನಡೆಸಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಾಲಕನ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ಪ್ರಕರಣ : ಆರೋಪಿ ರಿಕ್ಷಾ ಚಾಲಕ 5 ದಿನ ಪೊಲೀಸ್ ಕಸ್ಟಡಿಗೆ Rating: 5 Reviewed By: karavali Times
Scroll to Top