ಬಾಲಕನೊಂದಿಗೆ ಜಗಳವಾಡಿ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ರಿಕ್ಷಾ ಚಾಲಕ : ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times ಬಾಲಕನೊಂದಿಗೆ ಜಗಳವಾಡಿ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ರಿಕ್ಷಾ ಚಾಲಕ : ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು - Karavali Times

728x90

8 November 2022

ಬಾಲಕನೊಂದಿಗೆ ಜಗಳವಾಡಿ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ರಿಕ್ಷಾ ಚಾಲಕ : ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ, ನವೆಂಬರ್, 09, 2022 (ಕರಾವಳಿ ಟೈಮ್ಸ್) : ಬಾಲಕನೊಂದಿಗೆ ಜಗಳವಾಡಿ ನಿರ್ಜನ ಪ್ರದೇಶದಲ್ಲಿ ಸೀಮೆ ಎಣ್ಣೆ ಸುರಿದು ಕೊಲೆ ಮಾಡಿದ ಅಟೋ ರಿಕ್ಷಾ ಚಾಲಕನ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಬೋಳಂತೂರು ಗ್ರಾಮದ ಕೊಕ್ಕಪುಣಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ, ಮೆಲ್ಕಾರಿನಲ್ಲಿ ಕ್ಲಿಕ್ ಮೊಬೈಲ್ ಅಂಗಡಿ ನಡೆಸುತ್ತಿರುವ ಸಲೀಂ (28) ಎಂಬವರು ಠಾಣೆಗೆ ದೂರು ನೀಡಿದ್ದು, ನನ್ನ ತಾಯಿಯ ತಮ್ಮ, ಅಟೋ ರಿಕ್ಷಾ ಚಾಲಕ ವೃತ್ತಿಯ ಅಬ್ದುಲ್ ರಹಿಮಾನ್ @ ಅದ್ರಾಮ ಅವರ ಮನೆಯು  ನಮ್ಮ ಮನೆಯ  ಸಮೀಪವಿದ್ದು, ನವೆಂಬರ್ 7 ರಂದು ರಾತ್ರಿ 8 ಗಂಟೆಗೆ ಅದ್ರಾಮ ನಮ್ಮ ಮನೆ ಬಳಿ ಬಂದು ಅಗತ್ಯದ ಕೆಲಸದ ಬಗ್ಗೆ ಒಂದು ಕಡೆಗೆ ಹೋಗಲಿಕ್ಕಿದೆ. ರಿಕ್ಷಾದಲ್ಲಿ ಪೆಟ್ರೋಲ್ ಇಲ್ಲ. ನಿನ್ನ ಬೈಕಿನಲ್ಲಿ ಜೊತೆಯಾಗಿ ಹೋಗೋಣವೆಂದು ತಿಳಿಸಿದಂತೆ, ನಾನು ಪಲ್ಸರ್  ಬೈಕ್ ಸಂಖ್ಯೆ ಕೆ ಎ 19 ಎಚ್ ಜೆ 3375 ಎಲ್ಲಿ ಅಬ್ದುಲ್ ರಹಿಮಾನ್ @ ಅದ್ರಾಮನನ್ನು ಹಿಂಬದಿ ಕುಳ್ಳಿರಿಸಿ, ಬೈಕನ್ನು ಬೋಳಂತೂರು-ಮಂಚಿಕಟ್ಟೆ- ಮೋಂತಿಮಾರು ದ್ವಾರದಿಂದಾಗಿ ಇರಾ ಸೋಮನಾಥ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಾ, ಬಲಕ್ಕೆ ಇರುವ ರಸ್ತೆಯಲ್ಲಿ ಸುಮಾರು 2 ಕಿ ಮೀ ದೂರ ಹೋಗುತ್ತಾ ಇರಾ ಪದವು ಮಣ್ಣು ರಸ್ತೆಯ ಪಕ್ಕ ಅಬ್ದುಲ್ ರಹಿಮಾನ್ @ ಅದ್ರಾಮ ಅವರು ಬೈಕ್ ನಿಲ್ಲಿಸಲು ತಿಳಿಸಿದ್ದಾರೆ. ಈ ಸಂದರ್ಭ ನಾನು ಬೈಕ್ ನಿಲ್ಲಿಸಿ, ಇಲ್ಲಿ ಯಾಕೆ ಬೈಕ್ ನಿಲ್ಲಿಸಬೇಕೆಂದು ಕೇಳಿದಾಗ ಅಬ್ದುಲ್ ರಹಿಮಾನ್ @ ಅದ್ರಾಮ ಬೈಕಿನಿಂದ ಇಳಿದು ನೆವಂಬರ್ 1 ರಂದು ರಾತ್ರಿ 8-30 ಗಂಟೆಗೆ ಸುರಿಬೈಲಿನ ಅಬ್ದುಲ್ ಸಮಾದ್ ನೊಂದಿಗೆ  ಜಗಳವಾಗಿ  ಸೀಮೆಎಣ್ಣೆ  ಹಾಕಿ, ಬೆಂಕಿ ಕೊಟ್ಟು ಪಕ್ಕದ ಗುಡ್ಡದಲ್ಲಿ ಸಾಯಿಸಿದ್ದೇನೆ. ಹೆಣವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕರಿಸುವಂತೆ  ಕೇಳಿಕೊಂಡಾಗ, ಗಾಬರಿಗೊಂಡ ನಾನು ಅಬ್ದುಲ್ ರಹಿಮಾನ್ @ ಅದ್ರಾಮನನ್ನು ಅಲ್ಲೇ ಬಿಟ್ಟು ತಪ್ಪಿಸಿ, ಬೈಕ್ ರೈಡ್ ಮಾಡಿಕೊಂಡು ನೇರವಾಗಿ ಮನೆಗೆ ಬಂದಿರುತ್ತೇನೆ. ಬಂದವನೇ ಭಯದಿಂದ ರಾತ್ರಿ ಜ್ವರ ಬಂದು ಮರು ದಿನ (ನ 8) ರಂದು ನನ್ನ ಅಣ್ಣ ಶರೀಫ್ ಅವರಿಗೆ ಅಬ್ದುಲ್ ರಹಿಮಾನ್ @ ಅದ್ರಾಮ ಅವರು ಅಬ್ದುಲ್ ಸಮಾದ್ ನನ್ನು ಇರಾದಲ್ಲಿ ಕೊಲೆ  ಮಾಡಿರುವ  ವಿಷಯ ತಿಳಿಸಿ, ಬಳಿಕ ಅವರೊಳಗೆ ಚರ್ಚಿಸಿ ದೂರು ನೀಡಿರುವುದಾಗಿದೆ ಎಂದು ಸಲೀಂ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 82/2022 ಕಲಂ 302, 201  ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಾಲಕನೊಂದಿಗೆ ಜಗಳವಾಡಿ ಸೀಮೆ ಎಣ್ಣೆ ಸುರಿದು ಕೊಲೆ ನಡೆಸಿದ ರಿಕ್ಷಾ ಚಾಲಕ : ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Rating: 5 Reviewed By: karavali Times
Scroll to Top