ಬಂಟ್ವಾಳ, ನವೆಂಬರ್ 20, 2022 (ಕರಾವಳಿ ಟೈಮ್ಸ್) : ಇರ್ವತ್ತೂರು ವಲಯ ಕಾಂಗ್ರೆಸ್ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಮೆಚೂರ್ ಕಬಡ್ಡಿ ಎಸೋಸಿಯೇಶನ್ ಸಹಯೋಗದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಇರ್ವತ್ತೂರು-ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ನಡೆಯುವ 65 ಕೆಜಿ ವಿಭಾಗದ ಹೊನಲು ಬೆಳಕಿನ ಪ್ರಿಯದರ್ಶಿನಿ ಟ್ರೋಫಿ-2022 ಕಬಡ್ಡಿ ಪಂದ್ಯಾಟವನ್ನು ರಮಾನಾಥ ರೈ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ನಲಪಾಡ್ ಶನಿವಾರ ಉದ್ಘಾಟಿಸಿದರು.
ಈ ಸಂದರ್ಭ ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಬೇಬಿ ಕುಂದರ್, ಗಿರೀಶ್ ಆಳ್ವಾ, ನಾಸಿರ್, ಸುರೇಶ್ ಜೋರ, ಇಬ್ರಾಹಿಂ ನವಾಝ್, ಪ್ರಸಾದ್ ಪಾಣಾಜೆ, ಸುಧಾಕರ್ ಶಣೈ, ಸುರೇಶ್ ಶೆಟ್ಟಿ, ಪ್ರಶಾಂತ್ ಕೋಟ್ಯಾನ್, ಸದಾನಂದ ಶೆಟ್ಟಿ, ನೆಲ್ವಿಸ್ಟರ್ ಪಿಂಟೋ, ಬಲರಾಜ್ ರಾವು, ಪುಷ್ಪಲತಾ ಮೋಹನ್, ರಹಮತುಲ್ಲಾ, ವಿಜಯ, ಸುಚಿತ್ರ, ಜಯಶ್ರೀ, ಪದ್ಮನಾಭ ಸಾಮಂತ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment