ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಭವನ ನಾಳೆ (ನ 21) ಮುಖ್ಯಮಂತ್ರಿಯಿಂದ ಲೋಕಾರ್ಪಣೆ - Karavali Times ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಭವನ ನಾಳೆ (ನ 21) ಮುಖ್ಯಮಂತ್ರಿಯಿಂದ ಲೋಕಾರ್ಪಣೆ - Karavali Times

728x90

19 November 2022

ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಭವನ ನಾಳೆ (ನ 21) ಮುಖ್ಯಮಂತ್ರಿಯಿಂದ ಲೋಕಾರ್ಪಣೆಬೆಂಗಳೂರು, ನವೆಂಬರ್ 20, 2022 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖಾ ವತಿಯಿಂದ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ಇವುಗಳ ನೂತನ ಕಚೇರಿಗಳ ಸಂಕೀರ್ಣ ಕೆಎಂಡಿಸಿ (ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ನಿ) ಭವನದ ಉದ್ಘಾಟನಾ ಸಮಾರಂಭ ನವೆಂಬರ್ 21 (ನಾಳೆ) ಸಂಜೆ 5 ಗಂಟೆಗೆ ಬೆಂಗಳೂರು-ಶೇಷಾದ್ರಿಪುರಂ, ಸುಬೇದಾರ್ ಛತ್ರಂ ರಸ್ತೆಯ ಸಂಖ್ಯೆ 39-821 ರಲ್ಲಿ ನಡೆಯಲಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಭವನ ಉದ್ಘಾಟಿಸಲಿದ್ದು, ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಕೇಂದ್ರ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲ ಇಲಾಖಾ ರಾಜ್ಯ ಸಚಿವ ಎಂ ರಾಜೀವ್ ಚಂದ್ರಶೇಖರ ಅವರು ಘನ ಉಪಸ್ಥಿತರಿರುವರು. ಗಾಂಧಿನಗರ ವಿಧಾನಸಭಾ ಕ್ಷೇತ್ರ ಶಾಸಕ ದಿನೇಶ್ ಗುಂಡೂರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. 

ಸಚಿವರುಗಳು, ಸಂಸದರುಗಳು, ಶಾಸಕರುಗಳು, ವಿರೋಧ ಪಕ್ಷದ ನಾಯಕರುಗಳು, ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಹಾಗೂ ವಕ್ಫ್ ಇಲಾಖಾ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಭವನ ನಾಳೆ (ನ 21) ಮುಖ್ಯಮಂತ್ರಿಯಿಂದ ಲೋಕಾರ್ಪಣೆ Rating: 5 Reviewed By: karavali Times
Scroll to Top