ಬಂಟ್ವಾಳ, ನವೆಂಬರ್ 25, 2022 (ಕರಾವಳಿ ಟೈಮ್ಸ್) : ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಿಲ್ಲೆ 317ರ ಪ್ರಾಂತೀಯ ಸಮ್ಮಿಲನ "ಧನ್ಯ" ಕಾರ್ಯಕ್ರಮವು ನವೆಂಬರ್ 26 ರಂದು ಶನಿವಾರ 5 ಗಂಟೆಗೆ ಸಜಿಪಮೂಡ ಗ್ರಾಮದ ಕಂದೂರು ಬಜಾರ್ ಅಡಿಟೋರಿಯಂ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಂತ್ಯಾಧ್ಯಕ್ಷ ಲಕ್ಷ್ಮಣ ಕುಲಾಲ್ ಅಗ್ರಬೈಲು ತಿಳಿಸಿದರು.
ಗುರುವಾರ ಸಂಜೆ ಬಿ ಸಿ ರೋಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಹಾಗೂ ಬರಹಗಾರ ಚಟ್ಟಳ್ಳಿ ಮಹೇಶ್ ದಿಕ್ಸೂಚಿ ಭಾಷಣಗೈಯುವರು. ಮುಖ್ಯ ಅತಿಥಿಯಾಗಿ ಅಶ್ವನಿ ಕುಮಾರ್ ರೈ ಹಾಗೂ ರೋಟರಿ ಕ್ಲಬ್ ಪೂರ್ವ ರಾಜ್ಯಪಾಲರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಶಾಶ್ವತ ಸೇವಾ ಯೋಜನೆ ಜಾರಿ ಮಾಡಲಾಗುವುದು, ಲಯನ್ಸ್ ಸೇವಾ ಮಂದಿರಲ್ಲಿ ನಡೆಯುತ್ತಿರುವ ವಿಶೇಷ ಮಕ್ಕಳ ಫಿಸಿಯೋಥೆರಪಿ ಕೇಂದ್ರವನ್ನು ವಿಸ್ತರಿಸುವ ಬಗ್ಗೆ ಹಾಗೂ ಅದಕ್ಕೆ ಬೇಕಾದ ಕಟ್ಟಡವನ್ನು ಪೂರ್ಣಗೊಳಿಸುವ ಬಗ್ಗೆ ಸಹಾಯ ಹಸ್ತ ನೀಡಲಾಗುವುದು ಎಂದವರು ತಿಳಿಸಿದರು.
0 comments:
Post a Comment