ಮಂಗಳೂರು, ನವೆಂಬರ್ 26, 2022 (ಕರಾವಳಿ ಟೈಮ್ಸ್) : ಸುಕನ್ಯಾ ಸಮೃದ್ಧಿ ಯೋಜನೆಯು 2015ರ ಜನವರಿ 22 ರಂದು ಜಾರಿಗೆ ಬಂದಿದ್ದು, ಆ ಸಂದರ್ಭ 10 ವರ್ಷ ವಯಸ್ಸಿನಲ್ಲಿ ಈ ಖಾತೆ ತೆರೆದ ಹೆಣ್ಣು ಮಕ್ಕಳಿಗೆ ಮುಂದಿನ ತಿಂಗಳುಗಳಲ್ಲಿ 18 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ 18 ವರ್ಷ ತಲುಪುವ ಖಾತೆದಾರರು, ತಮ್ಮ ಖಾತೆಯನ್ನು ಹೊಂದಿರುವ ಅಂಚೆ ಕಛೇರಿಗೆ ಅಥವಾ ತಮ್ಮ ಈಗಿನ ವಾಸ ಸ್ಥಳದ ಸಮೀಪದ ಅಂಚೆ ಕಛೇರಿಗೆ ಭೇಟಿ ನೀಡಿ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ.
ಖಾತೆಯನ್ನು ಪ್ರೌಢ ವಯಸ್ಕ ಖಾತೆಯಾಗಿ ಪರಿವರ್ತಿಸಲು ಅರ್ಜಿ. ಈ ಅರ್ಜಿ ಫಾರ್ಮ್ ಅಂಚೆ ಕಛೇರಿಯಲ್ಲಿ ಲಭ್ಯ ಹಾಗೂ ಮಂಗಳೂರು ಅಂಚೆ ವಿಭಾಗದ ಫೇಸ್ ಬುಕ್ ಪುಟ @Mangaluru Postal Division ನಲ್ಲೂ ಲಭ್ಯವಿದೆ.
ಖಾತೆದಾರರ ಆಧಾರ್ ಪ್ರತಿ ಹಾಗೂ ಪಾನ್ ಕಾರ್ಡ್ ಪ್ರತಿ. ಪಾನ್ ಹೊಂದಿಲ್ಲದ್ದಲ್ಲಿ ಫಾರ್ಮ್ ನಂಬ್ರ 60ನ್ನು ನೀಡಿ ಬಳಿಕ ಮುಂದಿನ 6 ತಿಂಗಳೊಳಗಾಗಿ ಪಾನ್ ನೀಡಬಹುದು., ಖಾತೆದಾರರ 2 ಫೆÇೀಟೋ, ಪರಿಷ್ಕೃತ ಖಾತೆ ತೆರೆಯುವ ಫಾರಂ ಹಾಗೂ ಕೆ ವೈ ಸಿ ಫಾರಂ (ಅಂಚೆ ಕಛೇರಿಗಳಲ್ಲಿ ಲಭ್ಯವಿರುತ್ತದೆ)., ತಮ್ಮದೇ ಆದ ಮೊಬೈಲ್ ಸಂಖ್ಯೆ ಹೊಂದಿದ್ದರೆ, ಆ ಸಂಖ್ಯೆಯನ್ನು ಖಾತೆಯೊಂದಿಗೆ ಜೋಡಿಸುವುದು.
ಸುಕನ್ಯಾ ಸಮೃದ್ಧಿ ಖಾತೆಯನ್ನು ಹೊಂದಿರುವ ಹೆಣ್ಣು ಮಕ್ಕಳು 18 ವರ್ಷ ತುಂಬಿದ ನಂತರ, ಈ ಮೇಲಿನ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇದ್ದಲ್ಲಿ ಆ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗದ ಕಾರಣ 18 ವರ್ಷ ತುಂಬಿದ ಖಾತೆದಾರರು ಆದಷ್ಟು ಶೀಘ್ರ ತಾವು ಖಾತೆಯನ್ನು ಹೊಂದಿರುವ ಅಂಚೆ ಕಛೇರಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೋರಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿಯ ಮೊಬೈಲ್ ಸಂಖ್ಯೆ 9448291072ಯನ್ನು ಸಂಪರ್ಕಿಸಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment