ಬಂಟ್ವಾಳ, ನವೆಂಬರ್ 12, 2022 (ಕರಾವಳಿ ಟೈಮ್ಸ್) : ವಿಟ್ಲಪಡ್ನೂರು ಗ್ರಾಮ ಪಂಚಾಯತ್, ಕಾನೂನು ಸೇವೆಗಳ ಸಮಿತಿ ಹಾಗೂ ಬಂಟ್ವಾಳ ವಕೀಲರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು ಕಾನೂನಿನ ಅಜ್ಞಾನಕ್ಕೆ ಕ್ಷಮೆಯಿಲ್ಲ. ಪ್ರತಿಯೊಬ್ಬರೂ ಕಾನೂನನ್ನು ತಿಳಿದುಕೊಳ್ಳಲೇಬೇಕು ಎಂದರು.
ತಾಲೂಕು ಕಾನೂನು ಸಲಹಾ ಸಮಿತಿಯ ಪ್ಯಾನಲ್ ನ್ಯಾಯವಾದಿ ತುಳಸಿದಾಸ್ ವಿಟ್ಲ ಹಾಗೂ ಕೃಷ್ಣ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾನೂನು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರೇಮಲತಾ, ರೇಖಾ, ಅಮಿತ, ಜಯಲಕ್ಷ್ಮೀ, ಪೊಲೀಸ್ ಸಿಬ್ಬಂದಿ ಅರ್ಪಿತಾ, ಒಕ್ಕೂಟದ ಎಂ ಬಿ ಕೆ ವನಿತಾ, ಹಿರಿಯ ಅರೋಗ್ಯ ಸಹಾಯಕಿ ಗೀತಾ, ಎಲ್ ಸಿ ಆರ್ ಪಿ ಸದಸ್ಯರು, ಆಶಾ ಕಾರ್ಯಕರ್ತರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.
0 comments:
Post a Comment