ಪುತ್ತೂರು, ನವೆಂಬರ್, 12, 2022 (ಕರಾವಳಿ ಟೈಮ್ಸ್) : ಪುತ್ತೂರು ವಸತಿ ನಿಲಯವೊಂದರಿಂದ ಇಬ್ಬರು ಬಾಲಕರಾದ ತಿಪ್ಪೇಶ (15) ಹಾಗೂ ಅಭಿಷೇಕ್ (15) ಎಂಬವರು ನಾಪ್ತತೆಯಾದ ಬಗ್ಗೆ ದಕ ಮಹಿಳಾ ಪೆÇಲೀಸ್ ಠಾಣೆ, ಪುತ್ತೂರು ಇಲ್ಲಿ ನ 8 ರಂದು ಅಪರಾಧ ಕ್ರಮಾಂಕ 40/22 ಕಲಂ 360 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಾಣೆಯಾದ ಮಕ್ಕಳ ಪತ್ತೆಯ ಬಗ್ಗೆ ಪೆÇಲೀಸ್ ಅಧೀಕ್ಷಕರು ಹಾಗೂ ಮಾನ್ಯ ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು ಅವರ ನಿರ್ದೆಶನದಲ್ಲಿ, ಪುತ್ತೂರು ಪೆÇಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಪುತ್ತೂರು ಮಹಿಳಾ ಪೆÇಲೀಸ್ ಠಾಣಾ ಅಧಿಕಾರಿ ಸೇಸಮ್ಮ ಅವರ ನೇತೃತ್ವದಲ್ಲಿ ಪತ್ತೆ ಕಾರ್ಯ ನಡೆಸಿದ್ದು, ಬಾಲಕರಿಬ್ಬರು ಪುತ್ತೂರು ರೈಲ್ವೇ ನಿಲ್ದಾಣದ ಕಡೆಗೆ ಹೋಗುವುದು ಸಿಸಿ ಟಿವಿಯಿಂದ ಕಂಡು ಬಂದಿರುತ್ತದೆ. ಅದರಂತೆ ಪೊಲೀಸ್ ತಂಡಗಳನ್ನು ರಚಿಸಿ ಸಕಲೇಶಪುರ, ಮೈಸೂರು, ಬೆಂಗಳೂರು ಕಡೆ ತೆರಳಿ ಪತ್ತೆಗೆ ಪ್ರಯತ್ನಿಸಲಾಗುತ್ತಿತ್ತು. ಅಲ್ಲದೆ ಮಕ್ಕಳ ವಿವರಗಳನ್ನು ರೈಲ್ವೇ ಪೆÇಲೀಸ್, ಸಿಆರ್‍ಪಿಎಫ್, ರೈಲ್ವೇ ಅಧಿಕಾರಿಗಳಿಗೂ ನೀಡಲಾಗಿತ್ತು.
ಅದರಂತೆ ನ 11 ರಂದು ಬಾಲಕರು ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಪೆÇಲೀಸರಿಗೆ ಸಿಕ್ಕಿದ್ದು, ಅವರನ್ನು ಬೆಂಗಳೂರು ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿ ಬಳಿಕ ಅವರನ್ನು ವಿಚಾರಿಸಿ ಪೆÇೀಷಕರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment