ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಸರಕಾರ ಅಸ್ತು, ಮಾಸಿಕ ಗೌರವ ಧನ ಇನ್ನು ಡಬ್ಬಲ್ - Karavali Times ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಸರಕಾರ ಅಸ್ತು, ಮಾಸಿಕ ಗೌರವ ಧನ ಇನ್ನು ಡಬ್ಬಲ್ - Karavali Times

728x90

18 December 2022

ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಸರಕಾರ ಅಸ್ತು, ಮಾಸಿಕ ಗೌರವ ಧನ ಇನ್ನು ಡಬ್ಬಲ್

ಬೆಂಗಳೂರು, ಡಿಸೆಂಬರ್ 19, 2022 (ಕರಾವಳಿ ಟೈಮ್ಸ್) : ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣಗೊಳಿಸಿ ರಾಜ್ಯ ಸರಕಾರ ಭಾನುವಾರ (ಡಿ 18) ಆದೇಶ ಹೊರಡಿಸಿದೆ. ಈ ಹಿಂದೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ 3 ಸಾವಿರ ರೂಪಾಯಿ ಗೌರವ ಧನವಿದ್ದರೆ, ಉಪಾಧ್ಯಕ್ಷರಿಗೆ 2 ಸಾವಿರ ರೂಪಾಯಿ ಹಾಗೂ ಸದಸ್ಯರಿಗೆ 1 ಸಾವಿರ ರೂಪಾಯಿ ಮಾಸಿಕ ಗೌರವ ಧನ ನೀಡಲಾಗುತ್ತಿತ್ತು. ಇದೀಗ ಈ ಮೊತ್ತವು ಡಬ್ಬಲ್ ಆಗಿದ್ದು, ಅಧ್ಯಕ್ಷರಿಗೆ 6 ಸಾವಿರ ರೂಪಾಯಿ, ಉಪಾಧ್ಯಕ್ಷರಿಗೆ 4 ಸಾವಿರ ರೂಪಾಯಿ ಹಾಗೂ ಸದಸ್ಯರಿಗೆ 2 ಸಾವಿರ ರೂಪಾಯಿ ಗೌರವ ಧನ ನಿಗದಿಪಡಿಸಿ ಸರಕಾರ ಭಾನುವಾರ ಆದೇಶ ಹೊರಡಿಸಿದೆ. ಗೌರಧನ ಹೆಚ್ಚಳ ಬೇಡಿಕೆಗೆ ಕೊನೆಗೂ ಸರಕಾರ ಅಸ್ತು ಎಂದಿದ್ದು, ಗ್ರಾಮೀಣ ಸರಕಾರದ ಪ್ರತಿನಿಧಿಗಳು ಇದೀಗ ಸಕತ್ ಖುಷಿಯಾಗಿದ್ದು, ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ, ಸದಸ್ಯರ ಗೌರವ ಧನ ಹೆಚ್ಚಳಕ್ಕೆ ಸರಕಾರ ಅಸ್ತು, ಮಾಸಿಕ ಗೌರವ ಧನ ಇನ್ನು ಡಬ್ಬಲ್ Rating: 5 Reviewed By: karavali Times
Scroll to Top