ಪುತ್ತೂರು : “ಒಳಿತು ಮಾಡು ಮನುಷ್ಯ” ತಂಡದ 18ನೇ ಕಾರ್ಯಕ್ರಮ. - Karavali Times ಪುತ್ತೂರು : “ಒಳಿತು ಮಾಡು ಮನುಷ್ಯ” ತಂಡದ 18ನೇ ಕಾರ್ಯಕ್ರಮ. - Karavali Times

728x90

3 December 2022

ಪುತ್ತೂರು : “ಒಳಿತು ಮಾಡು ಮನುಷ್ಯ” ತಂಡದ 18ನೇ ಕಾರ್ಯಕ್ರಮ.

ಪುತ್ತೂರು, ಡಿಸೆಂಬರ್ 03, 2022 (ಕರಾವಳಿ ಟೈಮ್ಸ್) : ಇಲ್ಲಿನ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ಇದರ  ಆಶ್ರಯದಲ್ಲಿ ರೋಟರಿ ಕ್ಯಾಂಪೆÇ್ಕೀ ಬ್ಲಡ್ ಸೆಂಟರ್ ಪುತ್ತೂರು, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಕ್ಷಮ ಪುತ್ತೂರು ಘಟಕದ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾ£ಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ £ರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ವಿತರಿಸುವ 18ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ಇತ್ತೀಚೆಗೆ ಪುತ್ತೂರಿನ ರೋಟರಿ ಟ್ರಸ್ಟ್ ಸಭಾಂಗಣದಲ್ಲಿ ನಡೆಯಿತು.  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕ ದಂಬೆಕ್ಕನ ಸದಾಶಿವ ರೈ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಮಾನವೀಯತೆ ಮತ್ತು ಮನುಷ್ಯತ್ವ ಕಂಡುಬರುತ್ತಿದೆ. ಯಾರು ಕಷ್ಟದಲ್ಲಿದ್ದಾರೋ, ಯಾರು ಕಣ್ಣೀರಲ್ಲಿದ್ದಾರೋ, ಯಾರು ದುಃಖದಲ್ಲಿದ್ದಾರೋ ಅವರಿಗೆ ಒಂದು ಸಹಾಯ ಹಸ್ತ ಇಲ್ಲಿ ಎದ್ದು ಕಾಣುತ್ತಿದೆ. ಈ ತಂಡದ ಕಾರ್ಯವೈಖರಿ ಉತ್ತಮವಾಗಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಾಡ್ಕ, ಪೆರ್ಲಂಪಾಡಿ ಹರಿ ಪ್ರಸಾದ್ ಮೊದಲಾದವರು  ಭಾಗವಹಿಸಿದ್ದರು. 

ಕಾರ್ಯಕ್ರಮದಲ್ಲಿ 40 ಮಂದಿಯ ಬಿಪಿ, ಶುಗರ್ ತಪಾಸಣೆ ಮಾಡಲಾಯಿತು ಹಾಗೂ ಇಬ್ಬರು ಸ್ವಯಂಪ್ರೇರಿತ ರಕ್ತದಾನ ಮಾಡಿದರು. ಟ್ರಸ್ಟ್ ಪದಾಧಿಕಾರಿಗಳಾದ ಕಲಾವಿದ ಕೃಷ್ಣಪ್ಪ ಶಿವನಗರ, ಚೇತನ್ ಕುಮಾರ್ ಪುತ್ತೂರು, ಶ್ರೀಮತಿ ಶೋಭಾ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು : “ಒಳಿತು ಮಾಡು ಮನುಷ್ಯ” ತಂಡದ 18ನೇ ಕಾರ್ಯಕ್ರಮ. Rating: 5 Reviewed By: karavali Times
Scroll to Top