ಮಂಗಳೂರು, ಡಿಸೆಂಬರ್ 03, 2022 (ಕರಾವಳಿ ಟೈಮ್ಸ್) : ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ನಿಧಿ ವಿತರಣಾ ಕಾರ್ಯಕ್ರಮ ಶುಕ್ರವಾರ (ಡಿಸೆಂಬರ್ 2) ನಡೆಯಿತು.
ಕಂಪೆನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ಬಿ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ಕುಟುಂಬ ಮತ್ತು ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವಿದ್ಯಾರ್ಥಿ ನಿಧಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಯು ಟಿ ಖಾದರ್, ಮಂಗಳೂರು ಮನಪಾ ಮೇಯರ್ ಜಯಾನಂದ ಅಂಚನ್, ಸಂಸ್ಥೆಯ ಝೋನಲ್ ಬಿಝಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ಪ್ರಮುಖರಾದ ರಾಜಾರಾಮ್ ಭಟ್, ಚಂದ್ರಕುಮಾರ್ ನಾಯಕ್, ಸ್ವರಾಜ್ ಶೆಟ್ಟಿ, ಡಾ ಜಯಪ್ರಕಾಶ್ ನಾರಾಯಣ, ಎಸ್ ಎಂ ವರ್ಣೇಕರ್, ಶ್ರೀಮತಿ ನಿಧಿ ಮಿಥುನ್, ನಂದಗೋಪಾಲ್, ಸತ್ಯನಾರಾಯಣ ಕೆ ವಿ, ನಾಗರಾಜ್ ಬಿ, ಉಲ್ಲಾಸ್ ನಾಯಕ್, ಸದಾಶಿವ, ಶ್ರೀನಿವಾಸ್ ತಂತ್ರಿ, ಉಮೇಶ್, ರಾಘವೇಂದ್ರ ಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.
ಶ್ರೀರಾಮ್ ಟ್ರಾನ್ಸ್‍ಪೋರ್ಟ್ ಫೈನಾನ್ಸ್ ಕಂಪೆನಿ ಲಿಮಿಟೆಡ್ ಸ್ಟೇಟ್ ಹೆಡ್ ಸದಾಶಿವ ಸ್ವಾಗತಿಸಿ, ರೀಜನಲ್ ಬಿಝಿನೆಸ್ ಹೆಡ್ ಚೇತನ್ ಅರಸ್ ವಂದಿಸಿದರು. ಪ್ರವೀಣ್ ಎಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 1940 ಮಂದಿ ವಿದ್ಯಾರ್ಥಿಗಳಿಗೆ ತಲಾ 3 ಸಾವಿರ ರೂಪಾಯಿಯಂತೆ ಸುಮಾರು 61,62,500/- ರೂಪಾಯಿ ವಿದ್ಯಾರ್ಥಿ ವೇತನ ನೀಡುತ್ತಿದೆ. ಈ ಪೈಕಿ 835 ಮಂದಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ 26,74,500/- ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಉಳಿದ 1105 ಮಂದಿ ವಿದ್ಯಾರ್ಥಿಗಳಿಗೆ ಡಿಸೆಂಬರ್ ಅಂತ್ಯದೊಳಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅಲ್ಲದೆ ಸಂಸ್ಥೆಯು ಸ್ವಚ್ಛ ಭಾರತ ಅಭಿಯಾನದಲ್ಲಿ ಕೈಜೋಡಿಸಿದೆ.
0 comments:
Post a Comment