ಬಂಟ್ವಾಳ, ಜನವರಿ 08, 2023 (ಕರಾವಳಿ ಟೈಮ್ಸ್) : ಹಿದಾಯ ಫೌಂಡೇಶನ್ ಮಂಗಳೂರು ಇದರ ಅಧೀನದಲ್ಲಿ ಬಂಟ್ವಾಳ ತಾಲೂಕಿನ ಕಾವಳಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲಾ ವಾರ್ಷಿಕ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವು ಭಾನುವಾರ (ಜ 8) ನಡೆಯಿತು.
ಮಂಗಳೂರು ಹಿದಾಯ ಫೌಂಡೇಶನ್ ಚೆಯರ್‍ಮೆನ್ ಮನ್ಸೂರ್ ಅಹ್ಮದ್ ಅವರು ಹಿದಾಯ ಶೇರ್ ಆಂಡ್ ಕೇರ್ ಕಾಲೋನಿಯಲ್ಲಿ ತಯಾರಿಸಲಾದ ವಸ್ತ್ರ ಹಾಗೂ ಕೈಚೀಲವನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. 2006ರಲ್ಲಿ 5 ಮಕ್ಕಳೊಂದಿಗೆ ಆರಂಭಗೊಂಡ ಈ ಸಂಸ್ಥೆಯಲ್ಲಿ ಇದೀಗ 35 ವಿಶೇಷ ಮಕ್ಕಳು ವಿದ್ಯಾರ್ಜನೆಗೈಯುತ್ತಿದ್ದಾರೆ.
ಹಿದಾಯ ಫೌಂಡೇಶನ್ ಕೇಂದ್ರೀಯ ಸಮಿತಿ ಅಧ್ಯಕ್ಷ ಹಾಜಿ ಜಿ ಮುಹಮ್ಮದ್ ಹನೀಫ್ ಗೋಳ್ತಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಟೆಕಲ್ ಕುನಿಲ್ ಇಲ್ಮ್ ಅಕಾಡೆಮಿ ವೈಸ್ ಚೆಯರ್‍ಮೆನ್ ಹಾಜಿ ಪಿ ಎಸ್ ಮೊಯಿದಿನ್ ಕುಂಞÂ, ಉದ್ಯಮಿ ಹಂಝ ಪರ್ಲಿಯ, ಹಿದಾಯ ಫೌಂಡೇಶನ್ ಸದಸ್ಯರುಗಳಾದ ಸಾದಿಕ್ ಹಸನ್, ಆಸಿಫ್ ಇಕ್ಬಾಲ್, ಅನ್ವರ್, ಇಬ್ರಾಹಿಂ, ಮೇಲ್ವಿಚಾರಕ ರವೂಫ್, ಶಿಕ್ಷಕಿಯರಾದ ಶಬೀನಾ, ನೌಶೀನಾ, ನಾಸಿರಾ, ನಾಫಿಲಾ, ಫಾತಿಮಾ, ಆಫಿಯಾ, ಹಫೀಫಾ, ಸಿಬ್ಬಂದಿಗಳಾದ ಐಶಾಬಿ, ಝೀನತ್, ಆಯಿಷಾ ಬಿ, ಹಸೀನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಕೀಂ ಕಲಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಶಾಲಾ ಮುಖ್ಯ ಶಿಕ್ಷಕಿ ಆಶಾಲತಾ ವಾರ್ಷಿಕ ವರದಿ ವಾಚಿಸಿದರು. ಬಿ ಎಂ ತುಂಬೆ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿಶೇಷ ಮಕ್ಕಳ ವಿವಿಧ ಪ್ರತಿಬಾ ಪ್ರದರ್ಶನ ನಡೆಯಿತು.
0 comments:
Post a Comment