ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಭೂಯಾ |
ಬಂಟ್ವಾಳ, ಜನವರಿ 19, 2023 (ಕರಾವಳಿ ಟೈಮ್ಸ್) : ರಾಜ್ಯದ ಕಾಂಗ್ರೆಸ್ ನಾಯಕರ ಜಂಟಿ ನೇತೃತ್ವದಲ್ಲಿ ರಾಜ್ಯವ್ಯಾಪಿ ಸಂಚಾರ ಮಾಡುತ್ತಿರುವ ಪ್ರಜಾಧ್ವನಿ ಯಾತ್ರೆಯ ಪ್ರಯುಕ್ತ ಜನವರಿ 22 ರ ಭಾನುವಾರ ಮಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಬಂಟ್ವಾಳದಿಂದ ಮಾಜಿ ಸಚಿವ ಬಿ ರಮಾನಾಥ ರೈ ನೇತೃತ್ವದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರ ಜೊತೆ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಜಿಲ್ಲೆಯಲ್ಲಿ ಕೈ ಪಕ್ಷವನ್ನು ಬಲಪಡಿಸುವಂತೆ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಭೂಯಾ ಕರೆ ನೀಡಿದ್ದಾರೆ.
ಈ ರಾಜ್ಯ ಕಂಡ ಸಜ್ಜನ, ಶುಭ್ರ ಹಾಗೂ ಜನಸ್ನೇಹಿ ರಾಜಕಾರಣಿ, ಭ್ರಷ್ಟಾಚಾರ ರಹಿತ ಆಡಳಿತವನ್ನು ನಾಡಿಗೆ ತೋರಿಸಿಕೊಟ್ಟು, ರಾಜ್ಯದ ಎಲ್ಲ ವಿಭಾಗದ, ಎಲ್ಲ ಜಾತಿ, ಮತ, ಭಾಷೆ, ವರ್ಗದ ಜನರನ್ನು ಏಕಪ್ರಕಾರವಾಗಿ ಕಂಡು ಸಮಾನತೆಯ ಹರಿಕಾರರಾಗಿ, ಶಾಂತಿ-ಸೌಹಾರ್ದತೆಯ ಪ್ರತೀಕವಾಗಿ, ಅನುದಾನದಿಂದಲೂ, ಸ್ವ ಹಿತದಿಂದಲೂ ಎಲ್ಲರಲ್ಲಿ ಒಂದಾಗಿ ಬೆರೆತು ಅಭಿವೃದ್ದಿಯನ್ನೇ ತನ್ನ ಮೂಲಮಂತ್ರವಾಗಿಸಿದ್ದಲ್ಲದೆ, ತನ್ನ ಜೀವಮಾನದ ಬಹುಪಾಲು ಸಮಯವನ್ನು ರಾಜ್ಯದ ಜನರ ಹಿತಕ್ಕಾಗಿ, ಸ್ವಹಿತ, ಸ್ವ ಆರೋಗ್ಯ, ಕುಟುಂಬದ ಹಿತ ಎಲ್ಲವನ್ನೂ ಕನಿಷ್ಠವಾಗಿ ಕಂಡು ಜೀವನದ ಉಳಿದ ಭಾಗವನ್ನು ಜನಹಿತಕ್ಕಾಗಿಯೇ ಬಳಸಿಕೊಂಡು ಆಹೋ-ರಾತ್ರಿ ಸಂಚರಿಸಿ ಜನ-ಮನ ಗೆದ್ದು ತನ್ನನ್ನು ಸಂಪೂರ್ಣವಾಗಿ ಸಮಾಜಕ್ಕಾಗಿ ಅರ್ಪಿಸಿ ಎಲ್ಲ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾದ ಮಾಜಿ ಸಚಿವ ಬಿ.ರಮಾನಾಥ ರೈ ಅವರ ಸಾಧನೆ, ವ್ಯಕ್ತಿತ್ವ ಹಾಗೂ ಅಭಿವೃದ್ದಿಪರ ಯೋಜನೆ, ಕಾರ್ಯಕ್ರಮಗಳನ್ನು ಹಾಗೂ ಪಕ್ಷಕ್ಕಾಗಿ ಶಿಸ್ತಿನ ಸಿಪಾಯಿಯಾಗಿ ಸದಾ ಮುಂಚೂಣಿಯಲ್ಲಿ ನಿಂತುಕೊಂಡು ಜನಸೇವೆ ಮಾಡುತ್ತಿರುವ ಅವರ ಕಾರ್ಯವೈಖರಿಯನ್ನು ನೆಚ್ಚಿಕೊಂಡು ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಾಜ್ಯದಲ್ಲಿರುವ ಕಾಂಗ್ರೆಸ್ ಪರವಾದ ಅಲೆಯನ್ನು ಯಶಸ್ವಿಗೊಳಿಸುವಂತೆ ಶರೀಫ್ ಭೂಯಾ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
0 comments:
Post a Comment