ಕಲ್ಲಡ್ಕ : ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ - Karavali Times ಕಲ್ಲಡ್ಕ : ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ - Karavali Times

728x90

26 January 2023

ಕಲ್ಲಡ್ಕ : ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ, ಜನವರಿ 26, 2023 (ಕರಾವಳಿ ಟೈಮ್ಸ್) : ನಮ್ಮ ಹಿರಿಯರು, ಪೂರ್ವಿಕರು ಬ್ರಿಟಿಷರ ದಬ್ಬಾಳಿಕೆಯ   ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿ ಪಡೆದ ದೇಶದ ಸ್ವಾತಂತ್ರ್ಯವನ್ನು, ಸುಂದರ ಸಂವಿಧಾನವನ್ನು ಇನ್ನಷ್ಟು ಶಕ್ತಿ ಪಡಿಸೋಣ, ಸಂವಿಧಾನ ಅಮರ ಎಂದು ಕಲ್ಲಡ್ಕ ಮುನೀರುಲ್ ಇಸ್ಲಾಂ ಮದ್ರಸದ ಮುಖ್ಯ ಶಿಕ್ಷಕ ಅಬ್ದುಲ್ ಲತೀಫ್ ದಾರಿಮಿ ಹೇಳಿದರು. ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ಗುರುವಾರ  ನಡೆದ ಗಣರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ಹಿರಿಯ ವ್ಯಕ್ತಿ ಚೆರೆಮೋನು ಮುಕ್ರಿಕ ಧ್ವಜಾರೋಹಣಗೈದರು. ಈ ಸಂದರ್ಭ ಮುಹಿಯ್ಯುದ್ದೀನ್ ಜುಮಾ ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್, ಜತೆ ಕಾರ್ಯದರ್ಶಿ ಸಾದಿಕ್, ಕೋಶಾಧಿಕಾರಿ ನವಾಝ್ ಮೊದಲಾದವರು ಭಾಗವಹಿಸಿದ್ದರು. ಹಾಫಿಳ್ ಇಸ್ಮಾಯಿಲ್ ಹನೀಫಿ ಸ್ವಾಗತಿಸಿ, ಅಬ್ದುಲ್ ಹಮೀದ್ ಗೋಳ್ತಮಜಲು ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ : ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಗಣರಾಜ್ಯೋತ್ಸವ ಆಚರಣೆ Rating: 5 Reviewed By: karavali Times
Scroll to Top