ಕಡಬ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) : ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಎಂಬಲ್ಲಿ ಸೋಮವಾರ (ಫೆ 13) ಮರ್ಧಾಳದ ಕಡೆಯಿಂದ ಆರೋಪಿ ಕಾರು ಚಾಲಕ ವಾಹನವೊಂದನ್ನು ಓವರ್ ಟೇಕ್ ಮಾಡಿಕೊಂಡು ರಸ್ತೆಯ ತೀರಾ ಬಲಬದಿಗೆ ತೀರಾ ಅಜಾಗರೂಕತೆ ಮತ್ತು ತೀರ್ವ ನಿರ್ಲಕ್ಷ್ಯತನದಿಂದ ಕಾರನ್ನು ಚಲಾಯಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ 12 ವರ್ಷ ಪ್ರಾಯದ ಬಾಲಕ ಮೃತಪಟ್ಟು ಇತರ ಆರು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆಯಿಂದ ಕಾರು ಸಂಪೂರ್ಣ ಜಖಂಗೊಂಡಿದೆ. ಅಪಘಾತವಾದ ವೇಳೆ ಕಾರಿನಲ್ಲಿ 3 ಜನ ಮಹಿಳೆಯರು ಮತ್ತು 3 ಜನ ಗಂಡಸರು ಹಾಗೂ 1 ಚಿಕ್ಕ ಹುಡುಗ ಇದ್ದು ಎಲ್ಲರಿಗೂ ರಕ್ತಗಾಯವಾಗಿದ್ದು ಎಲ್ಲಾ ಗಾಯಾಳುಗಳನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ. ಬಸ್ ಚಾಲಕ ಮತ್ತು ಬಸ್ ನಲ್ಲಿದ್ದ 1 ಗಂಡಸು ಮತ್ತು 2 ಜನ ಹೆಂಗಸರಿಗೆ ಸಣ್ಣಪುಟ್ಟ ಗಾಯವಾದುದರಿಂದ ಅವರುಗಳನ್ನು ಸಹ 108 ಅಂಬ್ಯುಲೆನ್ಸ್ ವಾಹನದಲ್ಲಿ ಕಡಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಕಾರಿನಲ್ಲಿದ್ದ ಎಲ್ಲಾ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಡಬ ಆಸ್ಪತ್ರೆಯಿಂದ ಪುತ್ತೂರು ಸರ್ಕಾರಿ ಆಸ್ಪತ್ರೆಗೆ 108 ಅಂಬ್ಯುಲೆನ್ಸ್ ವಾಹನದಲ್ಲಿ ಸಾಗಿಸಲಾಗಿದೆ. ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಕಾರಿನಲ್ಲಿದ್ದ ಚಿಕ್ಕ ಹುಡುಗ ಪೃಥ್ವಿ (12) ಎಂಬಾತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2023 ಕಲಂ 279, 337, 338, 304 (ಎ) ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment