ತುಳು ಭಾಷೆ ಉಳಿವಿಗೆ ಸತತ ಪ್ರಯತ್ನ ಅಗತ್ಯ : ಸುದರ್ಶನ್ ಸುರತ್ಕಲ್ - Karavali Times ತುಳು ಭಾಷೆ ಉಳಿವಿಗೆ ಸತತ ಪ್ರಯತ್ನ ಅಗತ್ಯ : ಸುದರ್ಶನ್ ಸುರತ್ಕಲ್ - Karavali Times

728x90

13 February 2023

ತುಳು ಭಾಷೆ ಉಳಿವಿಗೆ ಸತತ ಪ್ರಯತ್ನ ಅಗತ್ಯ : ಸುದರ್ಶನ್ ಸುರತ್ಕಲ್

ಬಂಟ್ವಾಳ ಕುಲಾಲ ಸೇವಾದಳದದಿಂದ ಚೈತನ್ಯ 2.0 ನಿರಂತರ ಕಾರ್ಯಾಗಾರಕ್ಕೆ ಚಾಲನೆ


ಬಂಟ್ವಾಳ, ಫೆಬ್ರವರಿ 14, 2023 (ಕರಾವಳಿ ಟೈಮ್ಸ್) :  ತಳು ಭಾಷೆ ನಮ್ಮ ಮಾತೃ ಭಾಷೆ. ಅದನ್ನು ಉಳಿಸುವ ನಿಟ್ಟಿನಲ್ಲಿ ತುಳುವರಾದ ನಮ್ಮ ಪ್ರಯತ್ನ ಬಹಳ ಅಗತ್ಯ ಎಂದು ತುಳು ಹೋರಾಟಗಾರ ಸುದರ್ಶನ್ ಸುರತ್ಕಲ್ ತಿಳಿಸಿದರು.

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಕುಲಾಲ ಸೇವಾದಳದ ವತಿಯಿಂದ ಪೆÇಸಳ್ಳಿಯ ಕುಲಾಲ ಸಮುದಾಯ ಭವನದಲ್ಲಿ ನಡೆದ ನಿರಂತರ ಕಾರ್ಯಾಗಾರ ಚೈತನ್ಯ 2.0 ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಲ್ಲೂ ತುಳು ಭಾಷೆಯ ಬಗ್ಗೆ ಅಭಿಮಾನ ಇರಬೇಕು. ಬೇರೆ ಭಾಷೆಯೊಂದಿಗೆ ತುಳುವಿಗೂ ಮಾನ್ಯತೆ ನೀಡಬೇಕು ಎಂದರು.

ಬಣ್ಣ ತುಂಬಿಸುವ ಮೂಲಕ ಉದ್ಘಾಟಿಸಿದ ಯಕ್ಷಗುರು ಯಕ್ಷಗಾನ ಕಲಾವಿದ ಅಶ್ವಥ್ ಕುಲಾಲ್ ಮಾತನಾಡಿ, ಯಕ್ಷಗಾನವನ್ನು ಉದ್ಯೋಗವನ್ನಾಗಿ ಮಾಡಿಕೊಂಡು ಬದುಕುವ ಸಾಧ್ಯತೆ ಈಗಿನ ಕಾಲದಲ್ಲಿ ಇದೆ. ಮಕ್ಕಳನ್ನು ಮೊಬೈಲಿನಿದ ದೂರ ಇಟ್ಟರೆ ಅವರ ಬುದ್ದಿಯ ಬೆಳವಣಿಗೆ ಸಾಧ್ಯ ಎಂದರು. 

ಪತ್ರಕರ್ತ ಸಂದೀಪ್ ಸಾಲ್ಯಾನ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದರು. ಕಳೆದ ನಾಲ್ಕು ತಿಂಗಳಿನಿಂದ ಉಚಿತವಾಗಿ ತರಬೇತಿ ನೀಡುತ್ತಿರುವ ಚೆನ್ನಕೇಶವ ಡಿ ಆರ್ ದಂಪತಿ ಮತ್ತು ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶ್ವಾಲ್ಯ ಇವರುಗಳನ್ನು ಸನ್ಮಾನಿಲಾಯಿತು.

ಸಂಘದ ಅಧ್ಯಕ್ಷ ನಾರಾಯಣ ಸಿ ಪೆರ್ನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾತೃ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಜಲಜಾಕ್ಷಿ, ಬಂಟ್ವಾಳ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುಶೀಲಾ ಲಿಂಗಪ್ಪ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಅನ್ವಿತಾ ಸಿದ್ದಕಟ್ಟೆ, ಲಿಖಿತಾ ಬಂಟ್ವಾಳ ಮತ್ತು ರಾಹುಲ್ ಕೆ ಮೈರಾನ್‍ಪಾದೆ ಅವರುಗಳನ್ನು ಸನ್ಮಾನಿಸಲಾಯಿತು.

ಸೇವಾಧಳದ ಕಾರ್ಯದರ್ಶಿ ಗಣೇಶ್ ಬೆದ್ರಗುಡ್ಡೆ ಸ್ವಾಗತಿಸಿ, ದಳಪತಿ ಯಾದವ ಅಗ್ರಬೈಲ್ ಪ್ರಸ್ತಾವನೆಗೈದರು. ದೇವದಾಸ ಅಗ್ರಬೈಲು, ರಾಜೇಶ್ ರಾಯಿ, ತಾರನಾಥ ಮೊಡಂಕಾಪು, ರಾಘವೇಂದ್ರ ಮೈರಾನ್ ಪಾದೆ, ಗಣೇಶ ದುಗನಕೋಡಿ ಸನ್ಮಾನ ಪತ್ರವಾಚಿಸಿದರು. ರೇಷ್ಮಾ ಕಿಶೋರ್, ಹರಿಣಾಕ್ಷಿ, ನೀತಾ, ರಾಜೇಶ್ ಭಂಡಾರಿಬೆಟ್ಟು ಅತಿಥಿ ಪರಿಚಯ ಮಾಡಿದರು. ಜಯಂತ ಅಗ್ರಬೈಲ್ ವಂದಿಸಿ, ದರ್ಶನ್ ಮೊಡಂಕಾಪು, ವೈಷ್ಣವಿ, ಶಶಿಕಲಾ, ಸವಿತಾ ಪೆರ್ನೆ, ಸುಕನ್ಯ, ಸೌಮ್ಯ ಸಹಕರಿಸಿದರು. ಗೌತಮಿ, ಚಿರಾಗ್ ಮಯ್ಯರಬೈಲು, ಹೇಮಂತ್ ಮಯ್ಯರಬೈಲು, ಅನ್ನಪೂರ್ಣ ವಗ್ಗ ವಿವಿಧ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ತುಳು ಭಾಷೆ ಉಳಿವಿಗೆ ಸತತ ಪ್ರಯತ್ನ ಅಗತ್ಯ : ಸುದರ್ಶನ್ ಸುರತ್ಕಲ್ Rating: 5 Reviewed By: karavali Times
Scroll to Top