ಬಂಟ್ವಾಳ, ಫೆಬ್ರವರಿ 17, 2023 (ಕರಾವಳಿ ಟೈಮ್ಸ್) : ರಾಜ್ಯ ದಾರಿಮಿ ಉಲಮಾ ಒಕ್ಕೂಟದ ವತಿಯಿಂದ ಮಿಹ್ರಾಜ್ ಮಜ್ಲಿಸ್ ಹಾಗೂ ಸುನ್ನೀ ಸಮಾವೇಶವು ನಾಳೆ (ಫೆ 18) ಸಂಜೆ ಮಾಣಿ ಸಮೀಪದ ನೇರಳಕಟ್ಟೆ ಜನಪ್ರಿಯ ಗಾರ್ಡನ್ ಹೊರಾಂಗಣದಲ್ಲಿ ನಡೆಯಲಿದೆ ಎಂದು ದಾರಿಮಿ ಉಲಮಾ ಒಕ್ಕೂಟದ ಎಸ್ ಬಿ ಮುಹಮ್ಮದ್ ದಾರಿಮಿ ತಿಳಿಸಿದರು.
ಗುರುವಾರ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವಿಶ್ವೋತ್ತರ ಧಾರ್ಮಿಕ ಪಂಡಿತ ಶೈಖುನಾ ಶಂಸುಲ್ ಉಲಮಾರ ಜ್ಞಾನ ಧಾರೆಯಿಂದ ಧನ್ಯಗೊಂಡ ದಕ್ಷಿಣ ಭಾರತದ ಪ್ರಸಿದ್ಧ ವಿದ್ಯಾಕೇಂದ್ರ ಕಲ್ಲಿಕೋಟೆಯ ನಂದಿ ಜಾಮಿಯಾ ದಾರುಸ್ಸಲಾಮ್ ಇದರ 47ನೇ ವಾರ್ಷಿಕ ಹಾಗೂ 15ನೇ ಘಟಿಕೋತ್ಸವ ಫೆಬ್ರವರಿ 24 ರಿಂದ 26 ರವರೆಗೆ “ಶಾಂತಿಯೇ ಧರ್ಮ, ಸಂಘರ್ಷವೇ ಅಧರ್ಮ” ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯಲಿದ್ದು ಇದರ ಪೂರ್ವ ಪ್ರಚಾರವು ರಾಜ್ಯಾದ್ಯಂತ ನಡೆಯುತ್ತಿದೆ ಎಂದರು.
ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಹಾಜಿ ಇಸ್ಮಾಯಿಲ್ ಕಂಬಳಬೆಟ್ಟು ಧ್ವಜಾರೋಹಣಗೈಯುವರು. ದಾರುಸ್ಸಲಾಂ ಕಾಲೇಜಿನ ಕುಲಪತಿ ಶೈಖುನಾ ಎ ವಿ ಉಸ್ತಾದ್ ಉದ್ಘಾಟಿಸಲಿದ್ದು, ಸಮಸ್ತ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಯಾ ಆಲಿಕುಟ್ಟಿ ಉಸ್ತಾದ್ ದುವಾಶೀರ್ವಚನಗೈಯುವರು.
ಸಯ್ಯಿದ್ ಅಲೀ ತಂಙಳ್ ಕುಂಬೋಳ್, ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್, ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಶೈಖುನಾ ಮಾಹಿನ್ ಉಸ್ತಾದ್, ಅಬ್ದುಲ್ಲ ಉಸ್ತಾದ್ ಕೊಡಗು, ಬಂಬ್ರಾಣ ಅಬ್ದುಲ್ ಖಾದರ್ ಅಲ್ ಖಾಸಿಮಿ, ಉಸ್ಮಾನುಲ್ ಫೈಝಿ, ಪಾತೂರು ಖಾಝಿ ಅಹ್ಮದ್ ಮುಸ್ಲಿಯಾರ್, ಬೊಳ್ಳೂರು ಅಲ್ ಅಝ್ಹರ್ ಫೈಝಿ ಮೊದಲಾದವರು ಭಾಗವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪನಾಯಕ, ಮಂಗಳೂರು ಶಾಸಕ ಯು ಟಿ ಖಾದರ್, ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್, ಅಲ್ ಮುಝೈನ್ ಝಕರಿಯಾ ಹಾಜಿ ಜೋಕಟ್ಟೆ, ವೈಟ್ ಸ್ಟೋನ್ ಶರೀಫ್ ಜೋಕಟ್ಟೆ, ಅಬ್ದುರ್ರವೂಫ್ ಸುಲ್ತಾನ್ ಗೋಲ್ಡ್, ಉದ್ಯಮಿ ಬಿ ಎಂ ಉಮರ್ ಹಾಜಿ ಬೆಂಗಳೂರು ಮೊದಲಾದವರು ಭಾಗವಹಿಸಲಿದ್ದಾರೆ.
ಶಬೇ ಮಿಹ್ರಾಜ್ ದುಅಃ ಮಜ್ಲಿಸ್ ಸಾದಾತುಗಳ ಸಮಕ್ಷಮದಲ್ಲಿ ನಡೆಯಲಿದ್ದು, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸಯ್ಯಿದ್ ಮಹ್ಮೂದ್ ತಂಙಳ್, ಸಯ್ಯಿದ್ ಹಬೀಬುರ್ರಹ್ಮಾನ್ ತಂಙಳ್, ಸಯ್ಯಿದ್ ಅನಸ್ ತಂಙಳ್, ಸಯ್ಯಿದ್ ಶರಫುದ್ದೀನ್ ತಂಙಳ್, ಸಯ್ಯಿದ್ ಯಹ್ಯಾ ತಂಙಳ್, ಸಯ್ಯಿದ್ ಹುಸೈನ್ ತಂಙಳ್ ಕುಕ್ಕಾಜೆ, ಸಯ್ಯಿದ್ ಜುನೈದ್ ಜಿಫ್ರಿ ತಂಙಳ್, ಸಯ್ಯಿದ್ ಅಕ್ರಮ್ ಅಲಿ ತಂಙಳ್, ಸಯ್ಯಿದ್ ಬಾತಿಷ್ ತಂಙಳ್, ಸಯ್ಯಿದ್ ತ್ವಾಹಾ ತಂಙಳ್ ಭಾಗವಹಿಸಲಿದ್ದಾರೆ.
ವಾಗ್ಮಿಗಳಾದ ಆಶಿಕ್ ದಾರಿಮಿ ಆಲಪ್ಪುಝ ಹಾಗೂ ಶುಹೈಬ್ ಹೈತಮಿ ದಾರಿಮಿ ಮುಖ್ಯ ಭಾಷಣ ಗೈಯಲಿದ್ದಾರೆ. ಇದೇ ವೇಳೆ ಈ ವರ್ಷ ಸನದು ಪಡೆಯುವ ಯುವ ದಾರಿಮಿಗಳನ್ನು ಸನ್ಮಾನಿಸಲಾಗುವುದು ಎಂದವರು ವಿವರಿಸಿದರು.
ಈ ಸಂದರ್ಭ ಪ್ರಚಾರ ಸಮಿತಿ ಚೇರ್ಮನ್ ಎಲ್ ಟಿ ರಝಾಕ್ ಹಾಜಿ, ಪ್ರಚಾರ ಸಮಿತಿ ಕನ್ವೀನರ್ ಕೆ ಎಲ್ ಉಮರ್ ದಾರಿಮಿ, ಕೆ ಬಿ ಅಬ್ದುಲ್ ಖಾದರ್ ದಾರಿಮಿ, ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಜೊತೆಗಿದ್ದರು.
0 comments:
Post a Comment