ಅಂಚೆ ಕಚೇರಿ ಖಾತೆದಾರರಿಗೆ ಪಾಸ್ ಪುಸ್ತಕ ಇನ್ನು ಮುಂದೆ ಮನೆ ಬಾಗಿಲಿಗೆ : ಮಂಗಳೂರು ಅಂಚೆ ಇಲಾಖೆಯಿಂದ ಮತ್ತೊಂದು ಜನಪರ ಸೇವೆ - Karavali Times ಅಂಚೆ ಕಚೇರಿ ಖಾತೆದಾರರಿಗೆ ಪಾಸ್ ಪುಸ್ತಕ ಇನ್ನು ಮುಂದೆ ಮನೆ ಬಾಗಿಲಿಗೆ : ಮಂಗಳೂರು ಅಂಚೆ ಇಲಾಖೆಯಿಂದ ಮತ್ತೊಂದು ಜನಪರ ಸೇವೆ - Karavali Times

728x90

20 February 2023

ಅಂಚೆ ಕಚೇರಿ ಖಾತೆದಾರರಿಗೆ ಪಾಸ್ ಪುಸ್ತಕ ಇನ್ನು ಮುಂದೆ ಮನೆ ಬಾಗಿಲಿಗೆ : ಮಂಗಳೂರು ಅಂಚೆ ಇಲಾಖೆಯಿಂದ ಮತ್ತೊಂದು ಜನಪರ ಸೇವೆ

ಮಂಗಳೂರು, ಫೆಬ್ರವರಿ 20, 2023 (ಕರಾವಳಿ ಟೈಮ್ಸ್) : ಅಂಚೆ ಕಛೇರಿಗಳಲ್ಲಿ  ತೆರೆಯುವ ಹೊಸ ಖಾತೆಗಳ  ಪಾಸ್ ಪುಸ್ತಕವನ್ನು ಖಾತೆದಾರರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನು ಮಂಗಳೂರು ಅಂಚೆ ವಿಭಾಗ ಕೈಗೊಂಡಿದೆ. 

ಅಂಚೆ ಇಲಾಖೆಯ ನಿಯಮಾವಳಿಯಂತೆ  ಗ್ರಾಹಕರು ತೆರೆದ ಹೊಸ ಖಾತೆಯ ಪಾಸ್ ಪುಸ್ತಕವನ್ನು  ಖಾತೆ ತೆರೆದ ದಿನವೇ ಅವರಿಗೆ ನೀಡಬೇಕು. ಆದರೆ, ಕೆಲವೊಮ್ಮೆ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆಗಳ ಕಾರಣದಿಂದಾಗಿ ಅದೇ ದಿನ ಪಾಸ್ ಪುಸ್ತಕ ವಿತರಿಸಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಗ್ರಾಹಕರು  ಪುನ: ಅಂಚೆ ಕಛೇರಿಗೆ ಬಂದು ಪಾಸ್ ಪುಸ್ತಕ ಪಡೆಯಬೇಕಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಮಂಗಳೂರು ಅಂಚೆ ವಿಭಾಗವು ನೂತನ ವ್ಯವಸ್ಥೆಯೊಂದನ್ನು   ಜಾರಿಗೆಗೊಳಿಸುತ್ತಿದೆ. 

ಇನ್ನು ಮುಂದೆ ಮಂಗಳೂರು ಅಂಚೆ ವಿಭಾಗದ ಅಂಚೆ ಕಛೇರಿಗಳಲ್ಲಿ ಗ್ರಾಹಕರು ಹೊಸ ಖಾತೆಗಳನ್ನು ತೆರೆದಾಗ ಪಾಸ್ ಪುಸ್ತಕಗಳನ್ನು ಖಾತೆ ತೆರೆದ ದಿನವೇ ನೀಡಲು ಸಾಧ್ಯವಾಗದಿದ್ದರೆ, ಒಂದು ಅರ್ಜಿ ಫಾರಂ ನೀಡಲಾಗುತ್ತದೆ. ಅದನ್ನು ತುಂಬಿಸಿ ಅಂಚೆ ಕಛೇರಿಗೆ ನೀಡಿದಾಗ ಪಾಸ್ ಪುಸ್ತಕಗಳನ್ನು ಮನೆ ಬಾಗಿಲಿಗೆ ಸೇವಾ  ರಿಜಿಸ್ಟರ್ಡ್ ಅಂಚೆಯ ಮೂಲಕ ತಲುಪಿಸಲಾಗುತ್ತದೆ. 

ಖಾತೆದಾರರು ಯಾವ ವಿಳಾಸಕ್ಕೆ ಪಾಸ್ ಪುಸ್ತಕ ಬೇಕೆಂದು ಈ ಫಾರಂನಲ್ಲಿ ತಿಳಿಸಬೇಕು ಮತ್ತು ಅದೇ  ವಿಳಾಸಕ್ಕೆ  ಕಳುಹಿಸಲಾಗುತ್ತದೆ. ಈ ಸೇವೆಗೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಇದರಿಂದ  ಗ್ರಾಹಕರಿಗೆ ಸಮಯ ಹಾಗೂ ಪ್ರಯಾಣ ವೆಚ್ಚದ ಉಳಿತಾಯವಾಗುತ್ತದೆ. ಅಂಚೆ ಗ್ರಾಹಕರು ಈ ಸೇವೆಯನ್ನು  ಬಳಸಿಕೊಳ್ಳುವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಅಂಚೆ ಕಚೇರಿ ಖಾತೆದಾರರಿಗೆ ಪಾಸ್ ಪುಸ್ತಕ ಇನ್ನು ಮುಂದೆ ಮನೆ ಬಾಗಿಲಿಗೆ : ಮಂಗಳೂರು ಅಂಚೆ ಇಲಾಖೆಯಿಂದ ಮತ್ತೊಂದು ಜನಪರ ಸೇವೆ Rating: 5 Reviewed By: karavali Times
Scroll to Top