ಎನ್.ಎಸ್.ಯು.ಐ. ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರದಾನ - Karavali Times ಎನ್.ಎಸ್.ಯು.ಐ. ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರದಾನ - Karavali Times

728x90

19 February 2023

ಎನ್.ಎಸ್.ಯು.ಐ. ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರದಾನ

 ಬೆಂಗಳೂರು, ಫೆಬ್ರವರಿ 19, 2023 (ಕರಾವಳಿ ಟೈಮ್ಸ್) : ಎನ್ ಎಸ್ ಯು ಐ ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ದೊರೆತಿದೆ. 

ನಗರದ ಶಿರೂರ್ ಪಾರ್ಕಿನಲ್ಲಿ ನಡೆದ ರಾಜ್ಯ ಎನ್ ಎಸ್ ಯು ಐ ಕಾರ್ಯಕಾರಿಣಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ರಾಜ್ಯ ಎನ್ ಎಸ್ ಯು ಐ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರಧಾನ ಮಾಡಿದರು.

2014 ರಿಂದ ನಗರ ಹಾಗೂ ತಾಲೂಕು ಮಟ್ಟದಲ್ಲಿ ಎನ್ ಎಸ್ ಯು ಐ ಸಂಘಟನೆಯಲ್ಲಿ ಸಕ್ರಿಯರಾಗಿ ವಿವಿಧ ಜವಾಬ್ದಾರಿ ನಿರ್ವಹಿಸಿರುವ ಫಾರೂಕ್ ಅವರು ರಾಜ್ಯ ಮಟ್ಟದ ಇಂದಿರಾ ಕಾರ್ಯಗಾರ, ಪ್ರೇರಣಾ ಜಿಲ್ಲಾ ಕಾರ್ಯಾಗಾರ ಆಯೋಜಿಸುವ ಮೂಲಕ ಎನ್ ಎಸ್ ಯು ಐ ಘಟಕಕ್ಕೆ ಹೊಸ ಹುರುಪು ನೀಡಿದ್ದರು.

ಇವರ ಉಸ್ತುವಾರಿಯಲ್ಲಿ ಬರುವ 6 ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಸಾಧನೆಗಾಗಿ ಅವರಿಗೆ “ರಾಜ್ಯ ಉತ್ತಮ ಪದಾಧಿಕಾರಿ” ಪ್ರಶಸ್ತಿ ನೀಡಲಾಗಿದೆ. ಅವರು 2021 ರಲ್ಲಿ ಎನ್ ಎಸ್ ಯು ಐ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದರು.

ಈ ಸಂದರ್ಭ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮುಲ್ಕಿ, ರಾಜ್ಯ ಎನ್ ಎಸ್ ಯು ಐ ಅಧ್ಯಕ್ಷ ಕೀರ್ತಿ ಗಣೇಶ್, ರಾಷ್ಟ್ರೀಯ ಕಾರ್ಯದರ್ಶಿ ಎರಿಕ್ ಸ್ಟಿಫನ್ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಎನ್.ಎಸ್.ಯು.ಐ. ರಾಜ್ಯ ಸಮಿತಿ ಉಪಾಧ್ಯಕ್ಷ ಫಾರೂಕ್ ಬಾಯಬೆ ಅವರಿಗೆ “ರಾಜ್ಯದ ಅತ್ಯುತ್ತಮ ಪದಾಧಿಕಾರಿ” ಪ್ರಶಸ್ತಿ ಪ್ರದಾನ Rating: 5 Reviewed By: karavali Times
Scroll to Top