ಬಂಟ್ವಾಳ, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರ ಹಠಾತ್ ಅಗಲಿಕೆಗೆ ಬಂಟ್ವಾಳ ಕಾಂಗ್ರೆಸ್ ತೀವ್ರ ಸಂತಾಪ ಸೂಚಿಸಿದೆ. ನಿಧನದ ಶೋಕಾರ್ಥ ಶನಿವಾರ ಮುಂದುವರಿಯಬೇಕಾಗಿದ್ದ “ಬಂಟ್ವಾಳ ಪ್ರಜಾಪ್ರತಿನಿಧಿ” ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಮಾಜಿ ಶಾಸಕ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಬ್ರಹ್ಮರಕೊಟ್ಲು ಭಜನಾ ಮಂದಿರಲ್ಲಿ ಧ್ರುವನಾರಾಯಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಸಂಪತ್ ಕುಮಾರ್ ಶೆಟ್ಟಿ, ಶಬೀರ್ ಸಿದ್ದಕಟ್ಟೆ, ಲೋಲಾಕ್ಷ ಶೆಟ್ಟಿ, ದೇವಿಪ್ರಸಾದ್ ಪೂಂಜಾ, ಸ್ಟೀವನ್ ಡಿ’ಸೋಜ, ಆಲ್ಬರ್ಟ್ ಮೆನೆಜಸ್, ವೆಂಕಪ್ಪ ಪೂಜಾರಿ, ಜಗದೀಶ ಕೊಯಿಲ ಮೊದಲಾದವರು ಭಾಗವಹಿಸಿದ್ದರು.
ಧ್ರುವನಾರಾಯಣ ನಿಧನದ ಪ್ರಯುಕ್ತ ಶನಿವಾರ ದಿನದ ಬಂಟ್ವಾಳ ಪ್ರಜಾಧ್ವನಿ ಯಾತ್ರೆ ಸ್ಥಗಿತಗೊಳಿಸಲಾಗಿದ್ದು, ಭಾನುವಾರದ ಯಾತ್ರಾ ಕಾರ್ಯಕ್ರಮ ಯಥಾಪ್ರಕಾರ ನಿಗದಿಯಂತೆ ನಡೆಯಲಿದೆ. ಶನಿವಾರದ ಯಾತ್ರಾ ಕಾರ್ಯಕ್ರಮ ಕೊನೆಯಲ್ಲಿ ಅಂದರೆ ಮಾ 24 ರಂದು ನಡೆಸಲಾಗುವುದು ಎಂದು ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್ ತಿಳಿಸಿದ್ದಾರೆ.
0 comments:
Post a Comment