ಧ್ರುವನಾರಾಯಣ ನಿಧನ ಹಿನ್ನಲೆಯ : ರಾಜ್ಯದ್ಯಂತ ಪ್ರಜಾಧ್ವನಿ ಸಹಿತ ಎಲ್ಲ ಕಾರ್ಯಾಕ್ರಮ ರದ್ದುಗೊಳಿಸಿದ ಕಾಂಗ್ರೆಸ್ ನಾಯಕರು, ಸಿಎಂ, ಪಿಎಂ ಸಹಿತ ರಾಜಕೀಯ ನಾಯಕರ ಕಂಬನಿ - Karavali Times ಧ್ರುವನಾರಾಯಣ ನಿಧನ ಹಿನ್ನಲೆಯ : ರಾಜ್ಯದ್ಯಂತ ಪ್ರಜಾಧ್ವನಿ ಸಹಿತ ಎಲ್ಲ ಕಾರ್ಯಾಕ್ರಮ ರದ್ದುಗೊಳಿಸಿದ ಕಾಂಗ್ರೆಸ್ ನಾಯಕರು, ಸಿಎಂ, ಪಿಎಂ ಸಹಿತ ರಾಜಕೀಯ ನಾಯಕರ ಕಂಬನಿ - Karavali Times

728x90

10 March 2023

ಧ್ರುವನಾರಾಯಣ ನಿಧನ ಹಿನ್ನಲೆಯ : ರಾಜ್ಯದ್ಯಂತ ಪ್ರಜಾಧ್ವನಿ ಸಹಿತ ಎಲ್ಲ ಕಾರ್ಯಾಕ್ರಮ ರದ್ದುಗೊಳಿಸಿದ ಕಾಂಗ್ರೆಸ್ ನಾಯಕರು, ಸಿಎಂ, ಪಿಎಂ ಸಹಿತ ರಾಜಕೀಯ ನಾಯಕರ ಕಂಬನಿ

ಬೆಂಗಳೂರು, ಮಾರ್ಚ್ 11, 2023 (ಕರಾವಳಿ ಟೈಮ್ಸ್) : ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಶನಿವಾರ ಕಾಂಗ್ರೆಸ್ ವತಿಯಿಂದ ನಡೆಯಲಿದ್ದ ಪ್ರಜಾಧ್ವನಿ ಕಾರ್ಯಕ್ರಮ ಸಹಿತ ಎಲ್ಲ ಕಾರ್ಯಾಕ್ರಮಗಳನ್ನು ಕಾಂಗ್ರೆಸ್ ನಾಯಕರು ರದ್ದುಗೊಳಿಸಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರಲ್ಲದೆ ನೇರವಾಗಿ ಧ್ರುವನಾರಾಯಣ ಅವರ ನಿವಾಸದತ್ತ ಹೊರಟಿದ್ದು, ಅಂತ್ಯಕ್ರಿಯೆಗೆ ಸಿದ್ದತೆ ನಡೆಸಲಾಗುತ್ತಿದೆ. 

ಚಾಮರಾಜನಗರದ ಸಂಸದರಾಗಿ ಎರಡು ಬಾರಿ, ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರ ಮತ್ತು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಧ್ರುವನಾರಾಯಣ ಅವರು ಕಾಂಗ್ರೆಸ್ ಕಾರ್ಯಕರ್ತರ ನಡುವೆ ‘ಕಾಯಕ ಯೋಗಿ’ ಎಂದೇ ಗುರುತಿಸಿಕೊಂಡಿದ್ದವರು. 

ಮೂರು ಬಾರಿ ವಿಧಾನಸಭೆಗೆ, ಮೂರು ಬಾರಿ ಲೋಕಸಭೆಗೆ ಸ್ಪರ್ಧಿಸಿದ್ದ ಅವರು ನಾಲ್ಕು ಬಾರಿ ಗೆದ್ದಿದ್ದರೆ, ಇನ್ನೆರಡು ಬಾರಿ ಸೋತಿದ್ದರು. 

1999ರಲ್ಲಿ ಅವರು ಬಿಜೆಪಿಯಿಂದ ಸ್ಪರ್ಧಿಸಿ ಎ.ಆರ್. ಕೃಷ್ಣಮೂರ್ತಿ ಎದುರು ಸೋಲು ಕಂಡಿದ್ದರು. ಆ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡು, ರಾಜಕೀಯವಾಗಿ ಉನ್ನತಿಗೇರಿದ್ದರು. 

ಧ್ರುವನಾರಾಯಣ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸಹಿತ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿ ಕಂಬನಿ ಮಿಡಿದಿದ್ದಾರೆ. ಮೃತರ ಅಂತ್ಯಕ್ರಿಯೆ ಮೈಸೂರಿನ ಸ್ವನಿವಾಸದಲ್ಲಿ ಸಕಲ ಸಕಾರಿ ಗೌರವದೊಂದಿಗೆ ನೆರವೇರಲಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಧ್ರುವನಾರಾಯಣ ನಿಧನ ಹಿನ್ನಲೆಯ : ರಾಜ್ಯದ್ಯಂತ ಪ್ರಜಾಧ್ವನಿ ಸಹಿತ ಎಲ್ಲ ಕಾರ್ಯಾಕ್ರಮ ರದ್ದುಗೊಳಿಸಿದ ಕಾಂಗ್ರೆಸ್ ನಾಯಕರು, ಸಿಎಂ, ಪಿಎಂ ಸಹಿತ ರಾಜಕೀಯ ನಾಯಕರ ಕಂಬನಿ Rating: 5 Reviewed By: karavali Times
Scroll to Top