ಬಂಟ್ವಾಳ, ಮಾರ್ಚ್ 25, 2023 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕರಾವಳಿ ಪ್ರಜಾಧ್ವನಿ ಕಾರ್ಯಕ್ರಮವು ಮಾರ್ಚ್ 25 ರಂದು ಶನಿವಾರ (ಇಂದು) ನಡೆಯಲಿದೆ.
ಬೆಳಿಗ್ಗೆ 10.30 ಕ್ಕೆ ವಗ್ಗ-ಕಾರಿಂಜ ಕ್ರಾಸ್ ಜಂಕ್ಷನ್ನಿನಲ್ಲಿ ಹಾಗೂ ಸಂಜೆ 4 ಗಂಟೆಗೆ ಪಾಣೆಮಂಗಳೂರು ಸಾಗರ್ ಹಾಲ್ ಹೊರಾಂಗಣದಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ ಕೆ ಹರಿಪ್ರಸಾದ್, ರೋಜಿ ಎಂ ಜಾನ್, ಸಲೀಂ ಅಹ್ಮದ್, ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಬಿ ಇಬ್ರಾಹಿಂ, ಬಿ ರಮಾನಾಥ ರೈ ಮೊದಲಾದವರು ಭಾಗವಹಿಸಲಿದ್ದಾರೆ.
ಸಂಜೆ ವೇಳೆಗೆ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಸಾರ್ವಜನಿಕ ಸೌಹಾರ್ದ ಇಫ್ತಾರ್ ಕೂಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
0 comments:
Post a Comment