ಬಂಟ್ವಾಳ, ಮಾರ್ಚ್ 15, 2023 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಬಿ ಸಿ ರೋಡು ನಗರ ಪೆÇಲೀಸ್ ಠಾಣೆ, ನ್ಯಾಯಾಲಯದ ಸಮೀಪದಲ್ಲೆ ಕಳೆದ ಕೆಲ ದಿನಗಳಿಂದ ತ್ಯಾಜ್ಯ ರಾಶಿ ಬಿದ್ದು ದುರ್ನಾತ ಬೀರುತ್ತಿದೆ. ನಿತ್ಯ ಸಾರ್ವಜನಿಕರು ಪೆÇಲೀಸ್ ಠಾಣೆ, ನ್ಯಾಯಾಲಯಗಳಿಗೆ ಸಾಗಿ ಬರುವ ರಸ್ತೆಯ ಬದಿಯಲ್ಲೇ ಈ ತ್ಯಾಜ್ಯಗಳು ರಾಶಿ ಬಿದ್ದು, ನರಿ-ನಾಯಿಗಳು, ಜಾನುವಾರುಗಳು ಎಳೆದಾಡಿಕೊಂಡು ಎಲ್ಲೆಂದರಲ್ಲಿ ಕಲುಷಿತಗೊಳಿಸುತ್ತಿದೆ. ಪುರಸಭಾ ವ್ಯಾಪ್ತಿಯ ಹೃದಯ ಪಟ್ಟಣದ ಪ್ರಮುಖ ಕಚೇರಿಗಳು ಇರುವ ಜಾಗದಲ್ಲೇ ತ್ಯಾಜ್ಯ ವಿಲೇವಾರಿ ಮಾಡಲು ಆಗದೆ ಇರುವಾಗ ಇನ್ನೆಲ್ಲಿ ಮಾಡಿಯಾರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಸ್ಥಳೀಯ ಶಾಸಕರ ಸುಂದರ ಬಿ ಸಿ ರೋಡು ಪರಿಕಲ್ಪನೆಗೂ ಇದು ಸವಾಲಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
14 March 2023
- Blogger Comments
- Facebook Comments
Subscribe to:
Post Comments (Atom)
0 comments:
Post a Comment