ಮಂಗಳೂರು, ಮಾರ್ಚ್ 15, 2023 (ಕರಾವಳಿ ಟೈಮ್ಸ್) : ಮಂಗಳೂರು, ಕಾಸರಗೋಡು ಹಾಗೂ ಕಣ್ಣೂರು ಪ್ರದೇಶಗಳ ವೈದ್ಯಕೀಯ ಸೇವೆ, ಮೆಡಿಕಲ್, ಆಂಬ್ಯುಲೆನ್ಸ್, ಆಸ್ಪತ್ರೆ ಇನ್ನಿತರ ಆರೋಗ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯುಳ್ಳ ಹೆಲ್ತ್ ಮಲಬಾರ್ ವೈದ್ಯರ ಡೈರೆಕ್ಟರಿ ಬಿಡುಗಡೆ ಸಮಾರಂಭ ಪಾವೂರು-ವರ್ಕಾಡಿಯ ಸ್ನೇಹಾಲಯ ಸೈಕೋ-ಸಾಮಾಜಿಕ ಪುನರ್ವಸತಿ ಕೇಂದ್ರದಲ್ಲಿ ಮಾರ್ಚ್ 11 ರಂದು ಶನಿವಾರ ನಡೆಯಿತು.
ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಚಿಕ್ಕಮಗಳೂರು ಪೆÇಲೀಸ್ ಇನ್ಸ್‍ಪೆಕ್ಟರ್ ಸಲೀಂ ಅಬ್ಬಾಸ್ ವಲಾಲ್ ಅವರು, ಇದೊಂದು ವಿಶೇಷ ಕಾರ್ಯಕ್ರಮವಾಗಿದ್ದು, ಅನಾಥ-ನಿರ್ಗತಿಕರೊಂದಿಗೆ ಬೆರೆಯಲು ದೊರೆತ ಅವಕಾಶ ಇದೆಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಹೆಲ್ತ್ ಮಲಬಾರ್ ಸಂಪಾದಕ ಹಮೀದ್ ಬೋರ್ಕಳ, ಎಕ್ಸ್‍ಟೆನ್ ಕನ್ಸ್ಟ್ರಕ್ಟನ್ಸ್ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಹಮೀದ್, ಸೈಂಟ್ ಮೇರಿಸ್ ಇಂಗ್ಲಿಷ್ ಸ್ಕೂಲ್ ಪ್ರಿನ್ಸಿಪಾಲ್ ಡಿ ಶಾಂತಿ ಡಬ್ಲ್ಯೂ ಅಲ್ಮೇಡಾ, ಸ್ನೇಹಾಲಯ ಸೈಕೋ-ಸಾಮಾಜಿಕ ಪುನರ್ವಸತಿ ಕೇಂದ್ರದ ಸಂಸ್ಥಾಪಕ ಜೋಸೆಫ್ ಕ್ರಾಸ್ತಾ, ಕಾಸರಗೋಡು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ವರ್ಕಾಡಿ ಪಂಚಾಯತ್ ಸದಸ್ಯ ಉಮ್ಮರ್ ಬೋರ್ಕಳ ಭಾಗವಹಿಸಿದ್ದರು.
ಇದೇ ವೇಳೆ ಹೆಲ್ತ್ ಮಲಬಾರ್ ಡೈರೆಕ್ಟರಿ ಪುಸ್ತಕದ ಗ್ರಾಫಿಕ್ ವಿನ್ಯಾಸಗೊಳಿಸಿದ ವಿಷನ್ ಗ್ರಾಫಿಕ್ಸ್ ಇದರ ಮುಹಮ್ಮದ್ ಹನೀಫ್ ಹಾಗೂ ಇರ್ಶಾದ್ ಡಿಎಸ್‍ಐಬಿ ಪಾಣೆಮಂಗಳೂರು ಇವರನ್ನು ಗೌರವಿಸಲಾಯಿತು.
0 comments:
Post a Comment