ಸರಳ-ಸಜ್ಜನ ರಾಜಕಾರಣಿ, ಜನ ಸೇವೆಯಲ್ಲೇ ದಿನ ಕಳೆಯುವ ರಮಾನಾಥ ರೈ ಅವರು ಸೋತದ್ದೇ ಅಚ್ಚರಿ : ಎಂಎಲ್ಸಿ ಅಬ್ದುಲ್ ಜಬ್ಬಾರ್ - Karavali Times ಸರಳ-ಸಜ್ಜನ ರಾಜಕಾರಣಿ, ಜನ ಸೇವೆಯಲ್ಲೇ ದಿನ ಕಳೆಯುವ ರಮಾನಾಥ ರೈ ಅವರು ಸೋತದ್ದೇ ಅಚ್ಚರಿ : ಎಂಎಲ್ಸಿ ಅಬ್ದುಲ್ ಜಬ್ಬಾರ್ - Karavali Times

728x90

14 March 2023

ಸರಳ-ಸಜ್ಜನ ರಾಜಕಾರಣಿ, ಜನ ಸೇವೆಯಲ್ಲೇ ದಿನ ಕಳೆಯುವ ರಮಾನಾಥ ರೈ ಅವರು ಸೋತದ್ದೇ ಅಚ್ಚರಿ : ಎಂಎಲ್ಸಿ ಅಬ್ದುಲ್ ಜಬ್ಬಾರ್

ಬಂಟ್ವಾಳ, ಮಾರ್ಚ್ 15, 2023 (ಕರಾವಳಿ ಟೈಮ್ಸ್) : ಬಿಜೆಪಿ ನೀಡಿದ 15 ಲಕ್ಷ ಖಾತೆಗೆ, ಕಪ್ಪು ಹಣ ವಾಪಸ್, ಯುವಕರಿಗೆ ಎರಡು ಕೋಟಿ ಉದ್ಯೋಗದಂತಹ ಪೆÇಳ್ಳು ಭರವಸೆ ಕಾಂಗ್ರೆಸ್ ಎಂದೂ ನೀಡುವುದಿಲ್ಲ. ನುಡಿದಂತೆ ನಡೆಯಲು ಸಾಧ್ಯ ಇರುವ ಭರವಸೆಗಳನ್ನು ಮಾತ್ರ ಬಡವರ ಪರ, ಜನಸಾಮಾನ್ಯರ ಪರ ಪಕ್ಷವಾಗಿರುವ ಕೈ ಪಕ್ಷ ನೀಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಅಬ್ದುಲ್ ಜಬ್ಬಾರ್ ಸಾರಿದರು. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ “ಬಂಟ್ವಾಳ ಪ್ರಜಾಧ್ವನಿ” ಯಾತ್ರೆಯ 4ನೇ ದಿನ ಮಂಗಳವಾರ (ಮಾ 14) ಮಾವಿನಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕ-ಮಂತ್ರಿಯಾಗಿದ್ದರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಇರುವಂತಹ ಸರಳ-ಸಜ್ಜನ ರಾಜಕಾರಣಿ ರಮಾನಾಥ ರೈ ಅವರನ್ನು ಮತ್ತೊಮ್ಮೆ ಚುನಾಯಿಸಿ. ರಮಾನಾಥ ರೈ ಅವರಂತಹ ನಾಯಕರನ್ನು ಜನ ಸೋಲಿಸಿದ್ದಾರೆ ಎನ್ನುವುದು ಆಶ್ಚರ್ಯ ಆಗ್ತಿದೆ ಎಂದರು.


ಎಂಎಲ್ಸಿ ಸ್ಥಾನ ಕಾಲಡಿಗೆ ಬಂದಿದ್ದರೂ ತಿರಸ್ಕರಿಸಿ ಕ್ಷೇತ್ರದ ಜನರ ನಂಬಿ ಮತ್ತೆ ಚುನಾವಣಾ ಕಣಕ್ಕೆ ಬಂದಿದ್ದೇನೆ, ಜನ ಕೈಹಿಡಿಯುವ ನಂಬಿಕೆ ಇದೆ : ರೈ 


ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಬಿ ರಮಾನಾಥ ರೈ ಅವರು, ಚುನಾವಣೆಯಲ್ಲಿ ಸೋತು ಶಾಸಕ ಅಲ್ಲದಿದ್ದರೂ ಜನಸೇವೆಯಲ್ಲಿ ಯಾವುದೇ ಉದಾಸೀನತೆ ತೋರಿಲ್ಲ. ವರ್ಷಪೂರ್ತಿ ಜನರ ಮಧ್ಯೆ ಇದ್ದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸಿದ್ದೇನೆ. ಕೊರೋನಾ ಕಾಲದಲ್ಲೂ ಪಕ್ಷದ ಎಲ್ಲ ವಲಯಗಳ ಪ್ರಮುಖರ ಸಹಕಾರ ಪಡೆದು ಸುಮಾರು 35,000 ಮಂದಿಗೆ ಇಂದಿರಾ ಕ್ಷೇಮ ನಿಧಿ ಮೂಲಕ ರೇಶನ್ ಕಿಟ್ ವಿತರಿಸಲಾಗಿದೆ ಎಂದರು. 

ಬಂಟ್ವಾಳ ಕ್ಷೇತ್ರದ ಜನ ಆರು ಬಾರಿ ಗೆಲ್ಲಿಸಿದ್ದೀರಿ. ಮೂರು ಬಾರಿ ಮಂತ್ರಿಯಾಗಲು ಸಹಕಾರ ನೀಡಿದ್ದೀರಿ. ನಿಮ್ಮ ಋಣ ತೀರಿಸಲು ಸಾಧ್ಯ ಆಗದಿದ್ದರೂ ಕ್ಷೇತ್ರದ ಜನ ತಲೆ ತಗ್ಗಿಸುವ ಕೆಲಸವಂತೂ ಮಾಡಿಲ್ಲ ಎಂಬ ತೃಪ್ತಿ-ಸಂತೃಪ್ತಿ ಇದೆ. ಸಿದ್ದಾಂತದಲ್ಲಿ ರಾಜಿ ಮಾಡುವ ಕೀಳುಮಟ್ಟದ ರಾಜಕೀಯ ಯಾವತ್ತೂ ರಮಾನಾಥ ರೈ ಮಾಡಿಲ್ಲ. ಆಸೆ-ಆಕಾಂಕ್ಷೆ, ಆಮಿಷ, ಕಮಿಷನ್ ಇದ್ಯಾವುದಕ್ಕೂ ಬಗ್ಗದೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಮನಸ್ಸಿಗೆ ಸಮಾಧಾನ ತರುವ ಮಟ್ಟಿಗೆ ಅಭಿವೃದ್ದಿ ಮಾಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ಮನೆ ಬಾಗಿಲಿಗೆ ಕುಡಿಯುವ ನೀರು ಒದಗಿಸಿದ ತೃಪ್ತಿ ಇದೆ ಎಂದ ರಮಾನಾಥ ರೈ ಎಂಎಲ್ಸಿ ಆಗುವ ಅವಕಾಶವನ್ನು ಪಕ್ಷದ ನಾಯಕರು ನೀಡಿದ್ದು, ಅವಕಾಶ ಕಾಲಡಿಗೆ ಬಂದಿದ್ದರೂ ಕ್ಷೇತ್ರದ ಜನರನ್ನು ನಂಬಿ ಅದನ್ನು ತಿರಸ್ಕರಿಸಿ ಜನರಿಂದ ನೇರವಾಗಿ ಆಯ್ಕೆಯಾಗುವ ಅವಕಾಶಕ್ಕಾಗಿ ಮತ್ತೆ ಚುನಾವಣಾ ಕಣಕ್ಕೆ ಬಂದಿದ್ದೇನೆ. ಜನ ಮತ್ತೆ ಕೈ ಹಿಡಿಯುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಕ್ಷೇತ್ರದ ಜನ ಮತ್ತೊಮ್ಮೆ ಅವಕಾಶ ನೀಡಿದರೆ ನನ್ನ ಅವಧಿಯಲ್ಲಿ ಆರಂಭಗೊಂಡು ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಎಲ್ಲ ದೀರ್ಘದೃಷ್ಟಿಯ ಕೆಲಸ-ಕಾಮಗಾರಿಗಳನ್ನು ಪೂರ್ಣಗೊಳಿಸುವ ಭರವಸೆ ನೀಡುತ್ತೇನೆ. ಅಜಿಲಮೊಗರು-ಕಡೇಶ್ವಾಲ್ಯ ಸೌಹಾರ್ದ ಸೇತುವೆ, ಬೆಂಜನಪದವು ಕ್ರೀಡಾಂಗಣ, ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆ, ಬಿ ಸಿ ರೋಡಿನ ಅಂಬೇಡ್ಕರ್ ಭವನ, ಬಂಟ್ವಾಳದ ಪಂಜೆಮಂಗೇಶರಾಯರ ಭವನ ಇತ್ಯಾದಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುವ ಆಸೆ ಇದ್ದು ಅದೆಲ್ಲವನ್ನೂ ಪೂರ್ಣಗೊಳಿಸಿಯೇ ಸಿದ್ದ ರಂದು ಭರವಸೆ ನೀಡಿದರು. 

ಈ ಸಂದರ್ಭ ಯಾತ್ರಾ ಸಂಚಾಲಕ ಪಿಯೂಸ್ ಎಲ್ ರೋಡ್ರಿಗಸ್, ಪಕ್ಷ ಪ್ರಮುಖರಾದ ಬೇಬಿ ಕುಂದರ್, ಸುದೀಪ್ ಶೆಟ್ಟಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಸರಳ-ಸಜ್ಜನ ರಾಜಕಾರಣಿ, ಜನ ಸೇವೆಯಲ್ಲೇ ದಿನ ಕಳೆಯುವ ರಮಾನಾಥ ರೈ ಅವರು ಸೋತದ್ದೇ ಅಚ್ಚರಿ : ಎಂಎಲ್ಸಿ ಅಬ್ದುಲ್ ಜಬ್ಬಾರ್ Rating: 5 Reviewed By: karavali Times
Scroll to Top