ಬಂಟ್ವಾಳ, ಎಪ್ರಿಲ್ 14, 2023 (ಕರಾವಳಿ ಟೈಮ್ಸ್) : ಭಾರತರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ (ಎ 14) ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಅಣ್ಣು ಖಂಡಿಗ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಹಾಗೂ ಸಂವಿಧಾನದ ಬಗ್ಗೆ ಅವರ ಕಾಳಜಿಯನ್ನು ವಿವರಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ಧನ ಚೆಂಡ್ತಿಮಾರ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಾಬಲ ಬಂಗೇರ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕಾಧ್ಯಕ್ಷ ಮೋಹನ್ ಗೌಡ, ಬಂಟ್ವಾಳ ಬ್ಲಾಕ್ ಹಿಂದುಳಿದ ವರ್ಗದ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಕುಕ್ಕಿಪಾಡಿ, ಪ್ರಮುಖರಾದ ರಾಜೀವ ಕಕ್ಕೆಪದವು, ಜಗನ್ನಾಥ ತುಂಬೆ, ವೆಂಕಪ್ಪ ಪೂಜಾರಿ, ದಯಾನಂದ ನೇರಂಬೋಳ್, ಪದ್ಮನಾಭ ಮಡಿವಾಳ, ಜಗದೀಶ್ ಬಡ್ಡಕಟ್ಟೆ, ಪುರುಷೋತ್ತಮ ಮಂಡಾಡಿ, ಸತೀಶ್ ಅಮ್ಟಾಡಿ, ಅಮ್ಮು ಅರ್ಬಿಗುಡ್ಡೆ, ಚಿಕ್ಕ ಅರ್ಬಿಗುಡ್ಡೆ, ಲೋಕೇಶ್ ಕೃಷ್ಣಪುರ, ಬೋಜ ಪೂಜಾರಿ, ಹೊನ್ನಯ್ಯ ಪೂಜಾರಿ, ಇಕ್ಬಾಲ್ ಬಾಂಬಿಲ, ವಲಾರ್ ಬಡ್ಡಕಟ್ಟೆ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment