ಎಪ್ರಿಲ್ 16 ರಂದು ಬಿ.ಸಿ.ರೋಡಿನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4, 12 ತಂಡಗಳ ಕಾಮಿಡಿ ಶೋ - Karavali Times ಎಪ್ರಿಲ್ 16 ರಂದು ಬಿ.ಸಿ.ರೋಡಿನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4, 12 ತಂಡಗಳ ಕಾಮಿಡಿ ಶೋ - Karavali Times

728x90

13 April 2023

ಎಪ್ರಿಲ್ 16 ರಂದು ಬಿ.ಸಿ.ರೋಡಿನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4, 12 ತಂಡಗಳ ಕಾಮಿಡಿ ಶೋ

 ಬಂಟ್ವಾಳ, ಎಪ್ರಿಲ್ 14, 2023 (ಕರಾವಳಿ ಟೈಮ್ಸ್) : ತುಳು ಕೂಟ ಬಂಟ್ವಾಳ ಇದರ ಆಶ್ರಯದಲ್ಲಿ ವಿ4 ನ್ಯೂಸ್ 24*7 ಇದರ ಸಹಯೋಗದೊಂದಿಗೆ ಸನ್ ಪ್ರೀಮಿಯಂ ರಿಫೈಂಡ್ ಸನ್ ಫ್ಲವರ್ ಆಯಿಲ್ ಪ್ರೆಸೆಂಟ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4 ಎರಡನೇ ಸುತ್ತಿನ ಫರ್ಫಾಮೆನ್ಸ್ ಎಪ್ರಿಲ್ 16 ರಂದು ಬಿ ಸಿ ರೋಡಿನ ಸ್ಪರ್ಧಾ ಕಲಾ ಮಂದಿರಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು. 

ಸ್ಪರ್ಶ ಕಲಾಮಂದಿರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿ ಎನ್ ಆರ್ ಗೋಲ್ಡ್ ಮಾಲಕ ನಾಗೇಂದ್ರ ಬಾಳಿಗಾ, ಸಿದ್ದಕಟ್ಟೆ ಅನಂತ ಪದ್ಮ ಹೆಲ್ತ್ ಸೆಂಟರ್ ಇದರ ಡಾ ಸುದೀಪ್ ಕುಮಾರ್ ಭಾಗವಹಿಸಲಿದ್ದಾರೆ. ಅಖಿಲ ಭಾರತ ತುಳುಕೂಟದ ಬಂಟ್ವಾಳ ಅಧ್ಯಕ್ಷ ಎ ಸಿ ಭಂಡಾರಿ, ರಾಜ್ಯ ಪ್ರಶಸ್ತಿ ಪುರಸ್ಕøತ ಶಿಲ್ಪ ಗೊಂಬೆ ಬಳಗದ ರಮೇಶ್ ಕಲ್ಲಡ್ಕ, ಹಿರಿಯ ಯಕ್ಷಗಾನ ಕಲಾವಿದ ಜಯರಾಮ ಆಚಾರ್ಯ ಅವರಿಗೆ ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ವಿ2 ನ್ಯೂಸ್ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಸ್ಪರ್ಶ ಕಲಾ ಮಂದಿರದ ಮಾಲಕ ಸುಭಾಶ್ಚಂದ್ರ ಜೈನ್, ತುಳುಕೂಟ ಬಂಟ್ವಾಳ ಇದರ ಕಾರ್ಯದರ್ಶಿ ಎಚ್ ಕೆ ನಯನಾಡು ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್ಸೆನ್ ಕುಡ್ಲ, ಕ್ಲಿಂಗ್ ಕೃಷ್ಣ ಕೆಫೆ ಜೈ ಮಾತಾ, ಪಲ್ಲವಿಸ್ ನ್ಯೂಟ್ರಿಮಿಕ್ಸ್ ತೆಲಿಕೆದ ತೆನಾಲಿ, ಕಾರ್ ಡೆಕೋರ್ ಹರಿಣಿ, ವೆಸ್ಟ ಕೋಸ್ಟ್ ಬಂಗಾರ್ ಬಂಟ್ವಾಳ, ವಾಗ್ಮಿ ಕಲಾಶ್ರೀ ಕುಡ್ಲ, ಹ್ಯಾವೆನ್ ರೋಸ್ ವೈಷ್ಣವಿ, ವಿನ್‍ಸಂ ರಾಜಶ್ರೀ ಕುಡ್ಲ, ಎಸ್ ಎಲ್ ಶೇಟ್ ಹಂಪನಕಟ್ಟಾ ಗೋಲ್ಡನ್ ಪೋಪಿ, ಕಾಲ್ಗರಿ ತಾಂಬೂಲಾ ಕಲಾವಿದೆರ್, ಹೈಲೈಟ್ ಲೈಟಿಂಗ್ಸ್ ಸ್ಟುಡಿಯೋ ಕುಸಲ್ ಕಲಾವಿದೆರ್, ಬಿಡಿಜಿ ಎಂಟರ್ ಪ್ರೈಸಸ್ ವಿಧಾತ್ರಿ ಕಲಾವಿದೆರ್ ಈ 12 ತಂಡಗಳು ಭಾಗವಹಿಸಲಿದ್ದು, ಈ ತಂಡಗಳ ಪ್ರಾಯೋಜಕರಾಗಿ ವಿ ಎನ್ ಆರ್ ಗೋಲ್ಡ್ ಬಂಟ್ವಾಳ, ಗೂಡ್ಯೂಸ್ ಮಿನರಲ್ ವಾಟರ್ ಕರಿಯಂಗಳ, ಲೆವಿನ್ ಎಲೆಕ್ಟ್ರಿಕಲ್ಸ್ ಬೈಪಾಸ್-ಬಂಟ್ವಾಳ, ಅಡ್ವಕೇಟ್ ಲಯನ್ ರವೀಂದ್ರ ಕುಕ್ಕಾಜೆ ಹಾಗೂ ತಂಡ ಬಿ ಸಿ ರೋಡು, ಉಷಾ ಜ್ಯುವೆಲ್ಲರಿ ಬಿ ಸಿ ರೋಡು, ಜೈ ಹಿಂದ್ ಕ್ರಿಕೆಟರ್ಸ್ ಎನ್ ಗಣೇಶ್ ಶೆಣೈ ನಂದಿನಿ ಮಿಲ್ಕ್ ಏಜೆಂಟ್, ಜೆಸಿಐ ಬಂಟ್ವಾಳ ಬಿ ಸಿ ರೋಡು, ಪೊಳಲಿ ಇಲೆಕ್ಟ್ರಾನಿಕ್ಸ್ ಬೈಪಾಸ್-ಬಂಟ್ವಾಳ, ಸೋನಾ ಟಿವಿಎಸ್ ಮೋಟಾರ್ಸ್ ಬಿ ಸಿ ರೋಡು, ರೋಟರಿ ಕ್ಲಬ್ ಬಿ ಸಿ ರೋಡು ಸಿಟಿ, ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ ಘಟಕ ಹಾಗೂ ಸಿದ್ದಿ ವಿನಾಯಕ ಬೋರ್ ವೆಲ್ಸ್ ಆಂಡ್ ಅರ್ಥ್ ಮೂವರ್ಸ್ ಅಜೆಕಳ, ಬೈಪಾಸ್ ರಸ್ತೆ, ಬಂಟ್ವಾಳ ಇವರು ಪ್ರಾಯೋಜಕತ್ವ ವಹಿಸುವರು ಎಂದ ಸುದರ್ಶನ್ ಜೈನ್ ಬಂಟ್ವಾಳದ ಜನತೆಗೆ ಕಾರ್ಯಕ್ರಮ ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು. 

ಈ ಸಂದರ್ಭ ಪ್ರಮುಖರಾದ ಸುಭಾಶ್ಚಂದ್ರ ಜೈನ್, ಲಕ್ಷ್ಮಣ್ ಕುಂದರ್, ಎಚ್ ಕೆ ನಯನಾಡು, ನಾರಾಯಣ ಸಿ ಪೆರ್ನೆ, ಸೀತಾರಾಮ ಶೆಟ್ಟಿ, ಸೇಸಪ್ಪ ಮಾಸ್ಟರ್, ದಾಮೋದರ, ಹೃಷಿಕೇಶ್ ಮೊದಲಾದವರು ಉಪಸ್ಥಿತರಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 16 ರಂದು ಬಿ.ಸಿ.ರೋಡಿನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್-4, 12 ತಂಡಗಳ ಕಾಮಿಡಿ ಶೋ Rating: 5 Reviewed By: karavali Times
Scroll to Top