ರಮಾನಾಥ ರೈ ಮತ್ತೆ ರಾಜ್ಯದಲ್ಲಿ ಮಂತ್ರಿಗಳಾಗಿ ಮಿಂಚಲಿದ್ದಾರೆ : ಮಾಜಿ ಸಚಿವ ಯು ಟಿ ಖಾದರ್ ವಿಶ್ವಾಸ - Karavali Times ರಮಾನಾಥ ರೈ ಮತ್ತೆ ರಾಜ್ಯದಲ್ಲಿ ಮಂತ್ರಿಗಳಾಗಿ ಮಿಂಚಲಿದ್ದಾರೆ : ಮಾಜಿ ಸಚಿವ ಯು ಟಿ ಖಾದರ್ ವಿಶ್ವಾಸ - Karavali Times

728x90

12 April 2023

ರಮಾನಾಥ ರೈ ಮತ್ತೆ ರಾಜ್ಯದಲ್ಲಿ ಮಂತ್ರಿಗಳಾಗಿ ಮಿಂಚಲಿದ್ದಾರೆ : ಮಾಜಿ ಸಚಿವ ಯು ಟಿ ಖಾದರ್ ವಿಶ್ವಾಸ

ಬಂಟ್ವಾಳ, ಎಪ್ರಿಲ್ 12, 2023 (ಕರಾವಳಿ ಟೈಮ್ಸ್) : ಮಾಜಿ ಸಚಿವ ಬಿ ರಮಾನಾಥ ರೈ ಅವರು ಮುಂದಿನ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸಿ ಮತ್ತೊಮ್ಮೆ ಈ ರಾಜ್ಯದಲ್ಲಿ ಸಚಿವರಾಗಿ ಮಿಂಚಲಿದ್ದಾರೆ ಎಂದು ಮಾಜಿ ಸಚಿವ, ಮಂಗಳೂರು ವಿಧಾನಸಭಾ ಕ್ಷೇತ್ರದ ಕೈ ಅಭ್ಯರ್ಥಿ ಯು ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು. 

ಬಿ ಸಿ ರೋಡಿನ ಪದ್ಮ ಪೆಟ್ರೋಲ್ ಬಂಕ್ ಮುಂಭಾಗದಲ್ಲಿರುವ ಧನಲಕ್ಷ್ಮಿ ಕಾಂಪ್ಲೆಕ್ಸಿನಲ್ಲಿ ಬುಧವಾರ ಉದ್ಘಾಟನೆಗೊಂಡ ಈ ಬಾರಿಯ ವಿಧಾನಸಭಾ ಚುನಾವಣೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ಅವರ ಚುನಾವಣಾ ಕಚೇರಿಗೆ ಭೇಟಿ ನೀಡಿ ಶುಭ ಹಾರೈಸಿ ಮಾತನಾಡಿದ ಅವರು, ರಮಾನಾಥ ರೈ ಅವರು ಶುದ್ದ ಹಸ್ತದ ಪ್ರಾಮಾಣಿಕ ಹಾಗೂ ಜನಸೇವೆಯನ್ನೇ ಜೀವನವನ್ನಾಗಿ ಮಾಡಿಕೊಂಡ ಅಭಿಮಾನದ ರಾಜಕಾರಣಿಯಾಗಿದ್ದು ಮುಂದಿನ ದಿನಗಳಲ್ಲೂ ಅವರ ಸೇವೆ ಕ್ಷೇತ್ರದ ಹಾಗೂ ರಾಜ್ಯದ ಜನತೆಗೆ ದೊರೆಯುವಂತಾಗಲಿ ಎಂದು ಹಾರೈಸಿದರು. 

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಮೊಡಂಕಾಪುಗುತ್ತು ಜನಾರ್ದನ ಶೆಟ್ಟಿ, ಕಂಗಿಹಿತ್ಲು ರಾಮಣ್ಣ ಪೂಜಾರಿ, ಜಿನರಾಜ ಆರಿಗ, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ನಿವೃತ್ತ ಯೋಧ ವಲೇರಿಯನ್ ಡಿ’ಸೋಜ, ಶ್ರೀಮತಿ ಬೇಬಿ ನಾಯ್ಕ ಸಜಿಪಮುನ್ನೂರು, ಬಾಳಪ್ಪ ಶೆಟ್ಟಿ ಹೊಗೆನಾಡು-ಕರೋಪಾಡಿ ಅವರುಗಳು ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ವಿಶಿಷ್ಟ ಶೈಲಿಯಲ್ಲಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಅಭ್ಯರ್ಥಿ ಬಿ ರಮಾನಾಥ ರೈ ಮಾತನಾಡಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನ ಹಲವು ಬಾರಿ ನನಗೆ ಆಶೀರ್ವಾದ ಮಾಡಿದ್ದು, ಅವರ ಬೇಡಿಕೆಗೆ ಪೂರಕವಾಗಿ ಶಕ್ತಿ ಮೀರಿ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯ ಕೈಗೊಂಡಿದ್ದೇನೆ. ಇನ್ನೂ ಹಲವು ಅಭಿವೃದ್ದಿ ಕಾರ್ಯಗಳ ಕನಸು ನನ್ನಲ್ಲಿದ್ದು ಅದೆಲ್ಲವನ್ನೂ ಮಾಡಿ ಕ್ಷೇತ್ರದ ಜನರ ಮೇಲಿನ ಋಣವನ್ನು ಒಂದಷ್ಟಾದರೂ ತೋರಿಸುವ ಹೆಬ್ಬಯಕೆ ನನಗೆ ಇದ್ದು, ಅದಕ್ಕಾಗಿ ಜನ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಕೋರಿದರು. 

ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಸಪಲ್ಯ, ರೈ ಅವರ ಧರ್ಮಪತ್ನಿ ಧನಭಾಗ್ಯ ಆರ್ ರೈ, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿ ಪದ್ಮಶೇಖರ ಜೈನ್, ಎಂ ಎಸ್ ಮುಹಮ್ಮದ್, ಬಂಟ್ವಾಳ ಪುರಸಭಾಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿಅಂಗಡಿ, ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜ, ಸದಸ್ಯರುಗಳಾದ ಅಬೂಬಕ್ಕರ್ ಸಿದ್ದೀಕ್, ಲುಕ್ಮಾನ್ ಬಿ ಸಿ ರೋಡು, ಹಸೈನಾರ್ ತಾಳಿಪಡ್ಪು, ಲೋಲಾಕ್ಷ ಶೆಟ್ಟಿ, ವಾಸು ಪೂಜಾರಿ, ಜನಾರ್ದನ ಚೆಂಡ್ತಿಮಾರ್, ಮುಹಮ್ಮದ್ ನಂದರಬೆಟ್ಟು, ನ್ಯಾಯವಾದಿಗಳಾದ ಚಂದ್ರಶೇಖರ್ ಪೂಜಾರಿ, ಚಿದಾನಂದ ಕಡೇಶ್ವಾಲ್ಯ, ಸುರೇಶ್ ನಾವೂರು, ಎ ಪಿ ಮೊಂತೆರೋ, ಉಮಾಕರ, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಅಬ್ದುಲ್ ರಝಾಕ್ ಕುಕ್ಕಾಜೆ, ಸುದರ್ಶನ್ ಜೈನ್, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, ಮಲ್ಲಿಕಾ ವಿ ಶೆಟ್ಟಿ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಕೆ ಕೆ ಶಾಹುಲ್ ಹಮೀದ್, ಅರ್ಶದ್ ಸರವು, ಆಲ್ಬರ್ಟ್ ಮೆನೇಜಸ್, ಪಿ ಎ ರಹೀಂ ಬಿ ಸಿ ರೋಡು, ಬಾಲಕೃಷ್ಣ ಆಳ್ವ, ಉಮೇಶ್ ನೆಲ್ಲಿಗುಡ್ಡೆ, ಶರೀಫ್ ಭೂಯಾ, ಪ್ರೀತಂ ರಾಜ್, ಇಬ್ರಾಹಿಂ ಕೈಲಾರ್, ಜಿ ಎ ಅಮಾನುಲ್ಲಾ ಮೊದಲಾದವರು ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ರಮಾನಾಥ ರೈ ಮತ್ತೆ ರಾಜ್ಯದಲ್ಲಿ ಮಂತ್ರಿಗಳಾಗಿ ಮಿಂಚಲಿದ್ದಾರೆ : ಮಾಜಿ ಸಚಿವ ಯು ಟಿ ಖಾದರ್ ವಿಶ್ವಾಸ Rating: 5 Reviewed By: karavali Times
Scroll to Top