ಸಿದ್ದಕಟ್ಟೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಕಾಲ್ನಡಿಗೆ ಜಾಥಾ ನಡೆಸಿ ಮತಯಾಚನೆ - Karavali Times ಸಿದ್ದಕಟ್ಟೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಕಾಲ್ನಡಿಗೆ ಜಾಥಾ ನಡೆಸಿ ಮತಯಾಚನೆ - Karavali Times

728x90

26 April 2023

ಸಿದ್ದಕಟ್ಟೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಕಾಲ್ನಡಿಗೆ ಜಾಥಾ ನಡೆಸಿ ಮತಯಾಚನೆ

ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಬಂಟ್ವಾಳ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಯು ರಾಜೇಶ್ ನಾಯಕ್ ಅವರು, ಬುಧವಾರ ಸಂಜೆ ಬೆಂಬಲಿಗರೊಂದಿಗೆ ಸಿದ್ದಕಟ್ಟೆ ಚರ್ಚ್ ಬಳಿಯಿಂದ ಸಿದ್ದಕಟ್ಟೆ ಪೇಟೆವರಗೆ ಬೃಹತ್ ರೋಡ್ ಶೋ ನಡೆಸಿ ಮತಯಾಚಿಸಿದರು. 

ಬಂಟ್ವಾಳ ಮಂಡಲ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶೀ ಡೊಂಬಯ ಅರಳ, ರವೀಶ್ ಶೆಟ್ಟಿ, ಕೇರಳ ರಾಜ್ಯದ ಬಿಜೆಪಿ ಖಜಾಂಚಿ ಕೃಷ್ಣದಾಸ್, ಪಾಲಕ್ಕಾಡು ಬಿಜೆಪಿ ಜಿಲ್ಲಾಧ್ಯಕ್ಷ ಹರಿದಾಸ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ರವಿಶಂಕರ್ ಮಿಜಾರ್, ಸಂಗಬೆಟ್ಟು ಗ್ರಾ ಪಂ ಅಧ್ಯಕ್ಷ ಸತೀಶ್ ಪೂಜಾರಿ ಅಳಕೆ, ಕುಕ್ಕಿಪಾಡಿ ಗ್ರಾ ಪಂ ಅಧ್ಯಕ್ಷೆ ಸುಜಾತ, ಪಕ್ಷದ ಪ್ರಮುಖರಾದ ದೇವದಾಸ ಶೆಟ್ಟಿ, ಸುಲೋಚನಾ ಜಿ ಕೆ ಭಟ್, ಮಾಧವ ಮಾವೆ, ಪ್ರಭಾಕರ ಪ್ರಭು, ಪುರುಷೋತ್ತಮ ಶೆಟ್ಟಿ ವಾಮದಪದವು, ರಮಾನಾಥ ರಾಯಿ, ಉಮೇಶ್ ಗೌಡ, ರಂಜಿತ್ ಮೈರ, ರತ್ನಕುಮಾರ ಚೌಟ, ಹರೀಶ್ ಆಚಾರ್ಯ, ಮಂದಾರತಿ ಶೆಟ್ಟಿ, ಸಂದೇಶ್ ಶೆಟ್ಟಿ, ದೇವರಾಜ್ ಸಾಲಿಯಾನ್, ರಾಜೇಶ್ ಶೆಟ್ಟಿ, ಸುನಿಲ್ ಶೆಟ್ಟಿಗಾರ್, ಸುರೇಶ್ ಕುಲಾಲ್, ವಿಶ್ವನಾಥ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್, ಮೋನಪ್ಪ ದೇವಸ್ಯ, ಪುರುಷೋತ್ತಮ ಸಾಲಿಯಾನ್ ನರಿಕೊಂಬು, ಭೋಜ ಶೆಟ್ಟಿಗಾರ್,  ಯಶೋಧರ ಕರ್ಬೆಟ್ಟು, ದೇವಪ್ಪ ಗೌಡ, ಅಮ್ಮು ಕೋಟ್ಯಾನ್, ಓಬಯ್ಯ ಗೌಡ, ತೇಜಸ್ ಪೂಜಾರಿ, ನವೀನ್ ಪೂಜಾರಿ, ಸುರೇಶ್ ಅಂಚನ್, ಶೇಖರ ಶೆಟ್ಟಿ ಬದ್ಯಾರ್, ರತ್ನಾಕರ ಮದಂಗೋಡಿ, ಲಿಂಗಪ್ಪ ಪೂಜಾರಿ, ಸಂಜೀವ ಶೆಟ್ಟಿ ಮದಂಗೋಡಿ, ರಶ್ಮಿತ್ ಶೆಟ್ಟಿ, ದಿನೇಶ್ ಸುವರ್ಣ ರಾಯಿ, ವೀರೇಂದ್ರ ಸಿದ್ದಕಟ್ಟೆ, ನವೀನ್ ಆಯೋಧ್ಯೆ ಮೊದಲಾದವರು ಭಾಗವಹಿಸಿದ್ದರು.

ಬಳಿಕ ಸಿದ್ದಕಟ್ಟೆ ಜಂಕ್ಷನ್ನಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೇರಳ ಬಿಜೆಪಿ ಖಜಾಂಜಿ ಕೃಷ್ಣದಾಸ್ ಅವರು, ದೇಶವಿರೋಧಿ ಚಟುವಟಿಕೆಯಲ್ಲಿರುವವರನ್ನು ಕಾಂಗ್ರೆಸ್ ಸ್ಟಾರ್ ಪ್ರಚಾರಕರನ್ನಾಗಿ ಮಾಡಿಕೊಂಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು. ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಅವರು ಶಾಸಕರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದು, 2000ಕ್ಕೂ ಅಧಿಕ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಲ್ಲದೆ ಶಾಂತಿಯ ಬಂಟ್ವಾಳವನ್ನಾಗಿ ಪರಿವರ್ತಿಸಿದ್ದು, ಈ ಚುನಾವಣೆಯಲ್ಲಿಯು ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಂಟ್ವಾಳದಲ್ಲಿದ್ದ ಕೋಮುಗಲಭೆ, ಲವ್ ಜಿಹಾದ್, ಗೋ ಹತ್ಯೆ, ಮತಾಂತರ, ಮೊದಲಾದ ಅಕ್ರಮ ದಂಧೆಗಳ ಅಡ್ಡೆಗಳನ್ನು ಮಣ್ಣಿನಡಿಗೆ ಹಾಕಿದ ಕೀರ್ತಿ ಶಾಸಕ ರಾಜೇಶ್ ನಾಯ್ಕ್ ಅವರಿಗೆ ಸಲ್ಲುತ್ತದೆ. ಅಭಿವೃದ್ಧಿ, ಶಾಂತಿಯೇ ಬಿಜೆಪಿಯ ಬದ್ಧತೆಯಾಗಿದ್ದು, ಭಯಮುಕ್ತ, ನೆಮ್ಮದಿಯ ಬಂಟ್ವಾಳವನ್ನು  ಕಟ್ಟಲಾಗಿದೆ ಎಂದರು. 

ಅಭ್ಯರ್ಥಿ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ, ನಿತ್ಯವೂ ಗಲಭೆಯ ಗೂಡಾಗಿದ್ದ ಬಂಟ್ವಾಳವನ್ನು ಶಾಂತಿಯ ಬಂಟ್ವಾಳವನ್ನಾಗಿ ರೂಪಿಸಬೇಕು ಎಂಬ ಉದ್ದೇಶದಿಂದ ಶಾಸಕನಾಗಿ ಜವಾಬ್ದಾರಿ ಸ್ವೀಕರಿಸಿದ್ದು, ಎಲ್ಲರ ಸಹಕಾರದಿಂದ ಅದು ಕೈಗೂಡಿದ್ದು, ಜತೆಗೆ ಅಭಿವೃದ್ಧಿಯೂ ಸಾಕಾರಗೊಂಡಿದೆ. ಬಿಜೆಪಿಯು ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ಕೊಡುವ ಕಾರ್ಯವನ್ನು ಮಾಡುತ್ತಿದ್ದು, ಇದು ಕಾರ್ಯಕರ್ತರ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈಗ ಪಕ್ಷ ಮತ್ತೊಮ್ಮೆ ಅವಕಾಶ ನೀಡಿದ್ದು, ಜನತೆ ಅವಕಾಶ ನೀಡಿದರೆ ಬಂಟ್ವಾಳವನ್ನು ಮಾದರಿ ಕ್ಷೇತ್ರವನ್ನು ರೂಪಿಸುತ್ತೇನೆ ಎಂದರು.


  • Blogger Comments
  • Facebook Comments

0 comments:

Post a Comment

Item Reviewed: ಸಿದ್ದಕಟ್ಟೆಯಲ್ಲಿ ಬಂಟ್ವಾಳ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಕಾಲ್ನಡಿಗೆ ಜಾಥಾ ನಡೆಸಿ ಮತಯಾಚನೆ Rating: 5 Reviewed By: karavali Times
Scroll to Top