ಬಂಟ್ವಾಳ, ಎಪ್ರಿಲ್ 26, 2023 (ಕರಾವಳಿ ಟೈಮ್ಸ್) : ಅಕ್ರಮ ಗಾಂಜಾ ಸಂಗ್ರಹ ಪ್ರಕರಣ ಬೇಧಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಬುಧವಾರ ಅಪರಾಹ್ನ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಸಹಿತ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ, ಪೂರ್ಣಿಯಾ ಜಿಲ್ಲೆಯ, ರಾಜ್ ಘಾಟ್ ಗ್ರಾರೈಲ್, ಸಂಜಿಯಘಟ್ ನಿವಾಸಿ ಉತ£ಚಾಂದ್ ಮೊಹತ್ತೋ ಎಂಬವರ ಪುತ್ರ ಸು£ಲ್ ಮೊಹತ್ತೋ (28) ಎಂದು ಹೆಸರಿಸಲಾಗಿದ್ದು, ಬಂಧಿತನಿಂದ 1.5 ಲಕ್ಷ ರೂಪಾಯಿ ಮೌಲ್ಯದ ಒಂದೂವರೆ ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಠಾಣಾ ಪೊಲೀಸರು ಕೂಡಾ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ಸರಕಾರಿ ಪ್ರೌಢಶಾಲಾ ಬಳಿ ಕಾರ್ಯಾಚರಣೆ ನಡೆಸಿ ಅಕ್ರಮ ಗಾಂಜಾ ಪ್ರಕರಣ ಬೇಧಿಸಿದ್ದು, ಗಾಂಜಾ ಸಹಿತ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಬಂಧಿತರನ್ನು ಕುವೆಟ್ಟು ಗ್ರಾಮದ ನಿವಾಸಿ ಮನ್ಸೂರ್ ಎಂಬರ ಪುತ್ರ ಖೈಸ್ ಹಾಗೂ ಇಂತಿಯಾಝ್ ಎಂಬವರ ಪುತ್ರ ಮೊಹಮ್ಮದ್ ಅಶ್ರಫ್ ಎಂದು ಹೆಸರಿಸಲಾಗಿದೆ. ಬಂಧಿತರಿಂದ 10 ಸಾವಿರ ರೂಪಾಯಿ ಮೌಲ್ಯದ 294 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
0 comments:
Post a Comment