ಬೆಳ್ತಂಗಡಿ, ಎಪ್ರಿಲ್ 09, 2023 (ಕರಾವಳಿ ಟೈಮ್ಸ್) : ತಾಲೂಕಿನ ನಾಳ ಹಿದಾಯತುಲ್ ಇಸ್ಲಾಂ ಮದ್ರಸ (2833) ಸಮಸ್ತ ಕೇರಳ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಸ್ತುತ ವರ್ಷ ನಡೆಸಿದ ಪದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ.
ಬೆಳ್ತಂಗಡಿ ರೇಂಜ್ ವ್ಯಾಪ್ತಿಗೊಳಪಟ್ಟ ನಾಳ ಹಿದಾಯತುಲ್ ಇಸ್ಲಾಂ ಮದ್ರಸದ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 7ನೇ ತರಗತಿಯ ಒಟ್ಟು 10 ವಿದ್ಯಾರ್ಥಿಗಳ ಪೈಕಿ ಐದು ಮಂದಿ ಡಿಸ್ಟಿಂಕ್ಷನ್ ಹಾಗೂ ಉಳಿದ ಐದು ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
5ನೇ ತರಗತಿಯ ಒಟ್ಟು ಮೂವರು ವಿದ್ಯಾರ್ಥಿಗಳ ಪೈಕಿ ಇಬ್ಬರು ಪ್ರಥಮ ದರ್ಜೆ ಹಾಗೂ ಓರ್ವ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಮದ್ರಸ ಮುಖ್ಯೋಪಾಧ್ಯಾಯಾ ಅಬ್ದುಲ್ ಅಝೀಝ್ ಅಶ್ಶಾಫಿ ಕೊಯ್ಯೂರು ತಿಳಿಸಿದ್ದಾರೆ.
0 comments:
Post a Comment