ನನ್ನ ಅವಧಿಯ ಅಭಿವೃದ್ದಿ ಕಾರ್ಯಗಳನ್ನು ನನ್ನ ಸೋಲಿನ ಬಳಿಕ ಜನ ಅರ್ಥ ಮಾಡಿಕೊಂಡಿದ್ದು, ಅದುವೇ ನನ್ನ ಗೆಲುವಿಗೆ ಪೂರಕ : ರಮಾನಾಥ ರೈ - Karavali Times ನನ್ನ ಅವಧಿಯ ಅಭಿವೃದ್ದಿ ಕಾರ್ಯಗಳನ್ನು ನನ್ನ ಸೋಲಿನ ಬಳಿಕ ಜನ ಅರ್ಥ ಮಾಡಿಕೊಂಡಿದ್ದು, ಅದುವೇ ನನ್ನ ಗೆಲುವಿಗೆ ಪೂರಕ : ರಮಾನಾಥ ರೈ - Karavali Times

728x90

23 April 2023

ನನ್ನ ಅವಧಿಯ ಅಭಿವೃದ್ದಿ ಕಾರ್ಯಗಳನ್ನು ನನ್ನ ಸೋಲಿನ ಬಳಿಕ ಜನ ಅರ್ಥ ಮಾಡಿಕೊಂಡಿದ್ದು, ಅದುವೇ ನನ್ನ ಗೆಲುವಿಗೆ ಪೂರಕ : ರಮಾನಾಥ ರೈ

ಬಂಟ್ವಾಳ, ಎಪ್ರಿಲ್ 23, 2023 (ಕರಾವಳಿ ಟೈಮ್ಸ್) : ನನ್ನ ಅಧಿಕಾರಾವಧಿಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿನ ಮೆಟ್ಟಿಲು. ನನ್ನ ಅವಧಿ ಹಾಗೂ ಕಳೆದ ಐದು ವರ್ಷದ ಹಾಲಿ ಶಾಸಕರ ಅಧಿಕಾರವಧಿಯ ಕೆಲಸಗಳ ಬಗ್ಗೆ ಕ್ಷೇತ್ರದ ಜನ ತುಲನೆ ಮಾಡಿ ಅರ್ಥ ಮಾಡಿಕೊಂಡಿದ್ದು, ಇದುವೇ ಈ ಬಾರಿ ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಬಿ ರಮಾನಾಥ ರೈ ವಿಶ್ವಾಸ ವ್ಯಕ್ತಪಡಿಸಿದರು. 

ಬರಿಮಾರ್ ಗ್ರಾಮದಲ್ಲಿ ಭಾನುವಾರ ಮನೆಮನೆ ಭೇಟಿ ಮಾಡಿ ಮತಯಾಚನೆ ಮಾಡಿದ ಸಂದರ್ಭ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನಾದ್ಯಂತ ಬಹುತೇಕ ಪ್ರಗತಿ ಕಾರ್ಯಗಳು ನನ್ನ ಆಡಳಿತ ಅವಧಿಯಲ್ಲೇ ನಡೆದಿವೆ. ಬಿ ಸಿ ರೋಡಿನಲ್ಲಿರುವ ತಾಲೂಕು ಆಡಳಿತ ಕಚೇರಿಯಾದ ಮಿನಿ ವಿಧಾನಸೌಧ, ಸುಸಜ್ಜಿತ ಕೆ ಎಸ್ ಆರ್ ಟಿ ಸಿ ಬಸ್ಸು ನಿಲ್ದಾಣ, ಬಸ್ ಡಿಪೋ, ಪ್ರವಾಸಿ ಮಂದಿರ, ಅಂಬೇಡ್ಕರ್ ಭವನ ಮುಂತಾದ ಹಲವು ಆಡಳಿತಾತ್ಮಕ ಕಚೇರಿಗಳು ನನ್ನ ಅವಧಿಯಲ್ಲಿ ನಿರ್ಮಿಸಲಾಗಿದೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಸುಸಜ್ಜಿತ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ನಿವೇಶನ ಹಂಚಿಕೆ, ಮನೆ ನಿರ್ಮಾಣ, ಗುಣಮಟ್ಟದ ಶಿಕ್ಷಣ ವ್ಯವಸ್ಥೆ, ಆರೋಗ್ಯ ಕೇಂದ್ರಗಳನ್ನೂ ದೊಡ್ಡ ಮೊತ್ತದ ಅನುದಾನಗಳನ್ನು ತಂದು ಅಭಿವೃದ್ಧಿ ಪಡಿಸಿದ್ದೇನೆ ಎಂದವರು ಹೇಳಿದರು. 

ಆದರೆ ಕಳೆದ ಐದು ವರ್ಷಗಳಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜನ ತಮ್ಮನ್ನು ಗೆಲ್ಲಿಸುವುದಿಲ್ಲ ಎಂದು ಅರಿತಿರುವ ಬಿಜೆಪಿ ಕಳೆದ ಬಾರಿಗಿಂತಲೂ ಹೆಚ್ಚು ಅಪಪ್ರಚಾರದಲ್ಲಿ ನಿರತವಾಗಿದೆ. ಆದರೆ, ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದೆ ಜನ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಭಾರೀ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ರೈ ಹೇಳಿದರು. 

ಚುನಾವಣಾ ಪ್ರಚಾರದ ನಡುವೆ ರಮಾನಾಥ ರೈ ಅವರು ಸಿದ್ದಕಟ್ಟೆಯ ಸಂತ ಪ್ಯಾಟ್ರಿಕ್ ಚರ್ಚ್‍ಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು. 

ಈ ಸಂದರ್ಭ ಕೆಪಿಸಿಸಿ ಸದಸ್ಯರಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ ಫಾ ಡೇನಿಯಲ್ ಡಿ’ಸೋಜ, ಕೆ ಪಾವ್ಲ್ ಲೋಬೊ, ರೋಶನ್ ಡೇಸಾ, ಪ್ರವೀಣ್ ಕ್ರಾಸ್ತಾ, ಫಿಲಿಪ್ ಮೀನೆಜಸ್, ಸಂತೋಷ್ ಮೊರಾಸ್, ಮೈಕಲ್ ಮೊರಾಸ್, ಅಂತೋನಿ ಡಿ’ಸೋಜ, ಪ್ರೀಮಲ್ ಬರೆಟ್ಟೊ, ರೀಟಾ ಮೀನೆಜಸ್, ಜೇಸನ್ ಫೆರ್ನಾಂಡಿಸ್, ಅಶೋಕ ಪೂಜಾರಿ, ವಸಂತ ಪೂಜಾರಿ, ಗಂಗಯ್ಯ ಪೂಜಾರಿ, ಅಶ್ವಿನ್ ಸಿಕ್ವೇರಾ, ಮ್ಯಾಕ್ಸಿಂ ಸಿಕ್ವೇರಾ, ಅರ್ವಿನ್ ಪಿಂಟೋ, ಜಯಕರ ಶೆಟ್ಟಿ, ಮೊಹಮ್ಮದ್ ಝುಬಿ, ಮೈಕಲ್ ಮೆಲ್ಡ್ರಿಸ್, ಕೇಶವ ಪೂಜಾರಿ, ಜಗದೀಶ್ ಜೈನ್ ಮೊದಲಾದವರು ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ನನ್ನ ಅವಧಿಯ ಅಭಿವೃದ್ದಿ ಕಾರ್ಯಗಳನ್ನು ನನ್ನ ಸೋಲಿನ ಬಳಿಕ ಜನ ಅರ್ಥ ಮಾಡಿಕೊಂಡಿದ್ದು, ಅದುವೇ ನನ್ನ ಗೆಲುವಿಗೆ ಪೂರಕ : ರಮಾನಾಥ ರೈ Rating: 5 Reviewed By: karavali Times
Scroll to Top