ಚಿಕ್ಕಮಗಳೂರು, ಮೇ 30, 2023 (ಕರಾವಳಿ ಟೈಮ್ಸ್) : ಚಿಕ್ಕಮಗಳೂರಿನ ಖ್ಯಾತ ಉರಗ ತಜ್ಞ ನರೇಶ್ (51) ಅವರು ಸ್ವತಃ ತಾನೇ ಹಿಡಿದು ಬ್ಯಾಗಿನಲ್ಲಿಟ್ಟಿದ್ದ ನಾಗರಹಾವು ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ.
ನರೇಶ್ ಅವರು ಚಿಕ್ಕಮಗಳೂರಿನಲ್ಲಿ ನೂರಾರು ಹಾವುಗಳನ್ನು ಹಿಡಿದು ಜನರಿಗೆ ಜಾಗೃತಿ ಮೂಡಿಸುತ್ತಿದ್ದರು. ಆದರೆ ವಿಧಿಯ ಲೀಲೆ ಬೇರೆಯೇ ಆಗಿತ್ತು. ತಾನೇ ಹಿಡಿದು ಬ್ಯಾಗಿನಲ್ಲಿಟ್ಟ ಹಾವೇ ಅವರನ್ನು ಕಚ್ಚಿದ ಪರಿಣಾಮ ಅವರು ಸಾವನ್ನಪ್ಪಿದ್ದಾರೆ.
ನರೇಶ್ ಅವರು ಮಂಗಳವಾರ ಬೆಳಗ್ಗೆ ನಾಗರ ಹಾವೊಂದನ್ನು ರಕ್ಷಣೆ ಮಾಡಿ ತಂದಿದ್ದರು. ನಂತರ ಮತ್ತೊಂದು ಹಾವಿನ ರಕ್ಷಣೆಗೆ ಕರೆ ಬಂದಿದ್ದು, ಈ ವೇಳೆ ಬೈಕಿನಲ್ಲಿದ್ದ ಹಾವಿನ ಚೀಲದ ಗಂಟು ಬಿಗಿ ಮಾಡಲು ಡಿಕ್ಕಿ ಓಪನ್ ಮಾಡಿದ ವೇಳೆ ನಾಗರಹಾವು ನರೇಶ್ ಅವರನ್ನು ಕಚ್ಚಿತ್ತು. ಹಾವು ಕಚ್ಚಿದ ಪರಿಣಾಮ ನರೇಶ್ ಅವರು ತೀವ್ರ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
0 comments:
Post a Comment