ದ.ಕ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳು ಈ ಬಾರಿ ಜೆಡಿಎಸ್ ಪರವಾಗಿದೆ, ಮಂಗಳೂರು ಉತ್ತರದಲ್ಲಿ ಬಾವಾ, ದಕ್ಷಿಣದಲ್ಲಿ ಸುಮತಿ ಜಯಭೇರಿ ಖಚಿತ : ಹಾರೂನ್ ರಶೀದ್ ವಿಶ್ವಾಸ - Karavali Times ದ.ಕ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳು ಈ ಬಾರಿ ಜೆಡಿಎಸ್ ಪರವಾಗಿದೆ, ಮಂಗಳೂರು ಉತ್ತರದಲ್ಲಿ ಬಾವಾ, ದಕ್ಷಿಣದಲ್ಲಿ ಸುಮತಿ ಜಯಭೇರಿ ಖಚಿತ : ಹಾರೂನ್ ರಶೀದ್ ವಿಶ್ವಾಸ - Karavali Times

728x90

8 May 2023

ದ.ಕ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳು ಈ ಬಾರಿ ಜೆಡಿಎಸ್ ಪರವಾಗಿದೆ, ಮಂಗಳೂರು ಉತ್ತರದಲ್ಲಿ ಬಾವಾ, ದಕ್ಷಿಣದಲ್ಲಿ ಸುಮತಿ ಜಯಭೇರಿ ಖಚಿತ : ಹಾರೂನ್ ರಶೀದ್ ವಿಶ್ವಾಸ

ಮಂಗಳೂರು, ಮೇ 08, 2023 (ಕರಾವಳಿ ಟೈಮ್ಸ್) : ಕಾಂಗ್ರೆಸ್ ಹಾಗೂ ಬಿಜೆಪಿಯ ಭಾವನಾತ್ಮಕ ವಿಚಾರಗಳು ಹಾಗೂ ನಾಟಕೀಯ ರಾಜಕೀಯದ ಬಗ್ಗೆ ರೋಸಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತ ವರ್ಗ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪತ್ರಿಕೆ ಹೇಳಿಕೆ ಬಿಡುಗಡೆ ಮಾಡಿದ ಅವರು, ಜನರ ಸಮಸ್ಯೆಗಳು ಹಲವಾರು ಇರುವಾಗ ಕಾಂಗ್ರೆಸ್ ಪಕ್ಷದವರು ಭಾವನಾತ್ಮ ವಿಷಯಗಳಾದ ಭಜರಂಗದಳದ ವಿಚಾರದಲ್ಲಿ ಕಣ್ಷಾಮುಚ್ಚಾಲೆ ರಾಜಕೀಯ ಮಾಡಿ ಮುಸ್ಲಿಮರ ಮತಗಳನ್ನು ಪಡೆಯುವ ಕನಸು ಕಾಣುತ್ತಿದ್ದಾರೆ. ಆದರೆ ಈ ಬಾರಿ ಅವರ ಲೆಕ್ಕಾಚಾರಗಳು ತಲೆಕೆಳಗಾಗಲಿದ್ದು ಮಂಗಳೂರು ನಗರ ಉತ್ತರದಲ್ಲಿ ಮೊಯಿದೀನ್ ಬಾವಾ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮತಿ ಹೆಗ್ಡೆ ಅವರು ಗೆದ್ದು ಬರುವುದು ಖಚಿತ ಎಂದಿದ್ದಾರೆ. 

ಮಂಗಳೂರು ಉತ್ತರದಲ್ಲಿ ಮೊಯಿದಿನ್ ಬಾವಾರವರನ್ನು ಜನರು ಜನನಾಯಕರಾಗಿ ಗುರುತಿಸಿಕೊಂಡಿದ್ದು ತುರ್ತು ಪರಿಸ್ಥಿತಿಯಲ್ಲಿ ಜನರ ಕಣ್ಣೀರು ಒರೆಸಿದ್ದಾರೆ. ಸಂಘ ಪರಿವಾರದ ಯುವಕರಿಂದ ಹತ್ಯೆಗೀಡಾದ ಯುವಕರ ಬಗ್ಗೆ  ಅಪಾರ ಕಾಳಜಿ ಹೊಂದಿದ್ದ ಮೊಯಿದಿನ್ ಬಾವಾ ಕೊರೊನಾ ನಿಮಿತ್ತ ಲಾಕ್ ಡೌನ್ ಸಮಯದಲ್ಲೂ ಇವರು ಜಾತಿ ಮತ ಭೇದ ಮಾಡದೇ ಎಲ್ಲರಿಗೂ ಸಮಾನವಾಗಿ ಆಹಾರದ ಕಿಟ್ ಗಳನ್ನು ಹಂಚಿದ್ದು ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮಜಾ ಮಾಡುತ್ತಿದ್ದರು. ರಾಷ್ಟ್ರೀಯ ಪಕ್ಷಗಳಿಗೆ  ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದಿರುವ ಹಾರೂನ್ ರಶೀದ್ ದಕ್ಷಿಣ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಸುಮತಿ ಹೆಗ್ಡೆ ಸುಮಾರು ನಾಲ್ಕು ವರ್ಷಗಳಿಂದ ಜನರ ಸೇವೆ ಮಾಡುತ್ತಿದ್ದು ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಈ ಬಾರಿ ಕರ್ನಾಟಕದ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದ್ದು, ಈ ನಿಟ್ಟಿನಲ್ಲಿ ಜೆಡಿಎಸ್ ಶಾಸಕರು ಆಯ್ಕೆಯಾದಲ್ಲಿ ಜಿಲ್ಲೆಯನ್ನು ಅಭಿವೃಧ್ಧಿಗೊಳಿಸಲು ಸುಲಭ ಸಾಧ್ಯವಾಗುವುದು. ಆದ್ದರಿಂದ ಕ್ಷೇತ್ರದ ಅಲ್ಪಸಂಖ್ಯಾತ ಮತದಾರ ಬಾಂಧವರು ಜೆಡಿಎಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಲಿದ್ದಾರೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.  

  • Blogger Comments
  • Facebook Comments

0 comments:

Post a Comment

Item Reviewed: ದ.ಕ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಮತಗಳು ಈ ಬಾರಿ ಜೆಡಿಎಸ್ ಪರವಾಗಿದೆ, ಮಂಗಳೂರು ಉತ್ತರದಲ್ಲಿ ಬಾವಾ, ದಕ್ಷಿಣದಲ್ಲಿ ಸುಮತಿ ಜಯಭೇರಿ ಖಚಿತ : ಹಾರೂನ್ ರಶೀದ್ ವಿಶ್ವಾಸ Rating: 5 Reviewed By: karavali Times
Scroll to Top