ಬಿಜೆಪಿಯಲ್ಲಿರುವವರು ಬರೀ ಕುತಂತ್ರಿಗಳು, ಇಡೀ ರಾಜ್ಯವನ್ನು ಬಿಜೆಪಿ ಸರ್ವನಾಶ ಮಾಡಿಬಿಟ್ಟಿದೆ : ಬಿಜೆಪಿ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ - Karavali Times ಬಿಜೆಪಿಯಲ್ಲಿರುವವರು ಬರೀ ಕುತಂತ್ರಿಗಳು, ಇಡೀ ರಾಜ್ಯವನ್ನು ಬಿಜೆಪಿ ಸರ್ವನಾಶ ಮಾಡಿಬಿಟ್ಟಿದೆ : ಬಿಜೆಪಿ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ - Karavali Times

728x90

6 May 2023

ಬಿಜೆಪಿಯಲ್ಲಿರುವವರು ಬರೀ ಕುತಂತ್ರಿಗಳು, ಇಡೀ ರಾಜ್ಯವನ್ನು ಬಿಜೆಪಿ ಸರ್ವನಾಶ ಮಾಡಿಬಿಟ್ಟಿದೆ : ಬಿಜೆಪಿ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ

ಕೆ ಆರ್ ಪಿ ಪಕ್ಷಕ್ಕೆ ಭರವಸೆ ನೀಡಿದರೆ ಸಿದ್ದರಾಮಯ್ಯ ಸಿಎಂ ಆಗುವುದಾದ್ರೆ ಬೆಂಬಲಿಸುತ್ತೇನೆ : ಸಿದ್ದು ನೇತೃತ್ವದ ಕೈ ಸರಕಾರಕ್ಕೆ ಬೆಂಬಲ ಘೋಷಿಸಿದ ಮಾಜಿ ಸಚಿವ 


ರಾಯಚೂರು, ಮೇ 07, 2023 (ಕರಾವಳಿ ಟೈಮ್ಸ್) : ಬಿಜೆಪಿ ನಾಯಕರಿಂದಲೇ ದೇಶದ ರಕ್ಷಣೆಯಾಗುತ್ತೆ ಅನ್ನೋ ರೀತಿ ಮಾತನಾಡುತ್ತಾರೆ. ಬಿಜೆಪಿ ದೊಡ್ಡ ದೊಡ್ಡ ನಾಯಕರು ದೆಹಲಿಯಿಂದ ಬಂದು ಮಾತನಾಡುತ್ತಿದ್ದಾರೆ. ರಾಜ್ಯಕ್ಕೆ ಡಬಲ್ ಇಂಜಿನ್ ಸರಕಾರ ಬೇಕು ಅಂತ ಹೇಳುತ್ತಿದ್ದಾರೆ. ರಾಜ್ಯದಲ್ಲಿ, ಕೇಂದ್ರದಲ್ಲಿ ಇದ್ದದ್ದು ಬಿಜೆಪಿ ಸರಕಾರವೇ, ಆದ್ರೂ ಏನ್ ಮಾಡಿದ್ದೀರಿ ನೀವು. ಒಳ್ಳೊಳ್ಳೆ ನಾಯಕರನ್ನ ಮನೆಯಲ್ಲಿ ಕೂಡಿಸಿದ್ದೀರಿ. ಯಡಿಯೂರಪ್ಪನವರಿಗೆ ಜನ ಚಪ್ಪಾಳೆ ಹೊಡೀತಾರೆ ಅಂತ ವಯಸ್ಸಾಗಿದೆ ಅಂದ್ರಿ. ಯಡಿಯೂರಪ್ಪ, ಅಡ್ವಾಣಿನ ಮೂಲೆಗುಂಪು ಮಾಡಿದ್ರಿ. ಇವತ್ತು ಕೇವಲ ಡಮ್ಮಿಗಳು, ಕೂಡು ಅಂದ್ರೆ ಕೂಡುವ ಏಳು ಅಂದ್ರೆ ಏಳುವ ಸಿಎಂಗಳನ್ನು ಇಟ್ಟುಕೊಂಡು ದೇಶ ಆಳಲು ಬಿಜೆಪಿ ಹೊರಟಿದೆ. ಯಾವುದೇ ಕಾರಣಕ್ಕೂ ನಿಮ್ಮ ಆಟ ನಡೆಯಲ್ಲ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ವಿರುದ್ದ ಸಕತ್ ವಾಗ್ದಾಳಿ ನಡೆಸಿದರು. 

ರಾಯಚೂರಿನ ಲಿಂಗಸುಗೂರಿನಲ್ಲಿ ಕೆ ಆರ್ ಪಿ ಪಕ್ಷದ ಅಭ್ಯರ್ಥಿ ಆರ್ ರುದ್ರಯ್ಯ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿ ಯಾವುದೇ ಅಭಿವೃದ್ಧಿಯನ್ನ ಮಾಡಿಲ್ಲ ಬರೀ ಸುಳ್ಳು, ಮೋಸ, ಬರೀ ಕುತಂತ್ರಿಗಳು. ಕುತಂತ್ರಿಗಳಿಂದಲೇ ಬಿಜೆಪಿ ರಾಜಕೀಯಕ್ಕೆ ಬಂದಿದೆ. ಇಡೀ ರಾಜ್ಯವನ್ನು ಬಿಜೆಪಿ ಸರ್ವನಾಶ ಮಾಡಿಬಿಟ್ಟಿದೆ. ಬಿಜೆಪಿ ಸರಕಾರ ರಾಜ್ಯದಲ್ಲಿ ಒಂದೂ ಒಳ್ಳೆಯ ಕೆಲಸ ಮಾಡಿಲ್ಲ. ದೊಡ್ಡ ದೊಡ್ಡ ಕನಸುಗಳನ್ನ ತೋರಿಸಿ ಅಭಿವೃದ್ಧಿ ಮಾಡುತ್ತೇವೆ ಅಂತ ಹೇಳಿ, ಹಿಂದುತ್ವದ ಆಧಾರದ ಮೇಲೆ ಮತಗಳನ್ನ ಕೇಳಿ, ಸಮಾಜವನ್ನ ಒಡೆದು ಆಳಲು ಬಿಜೆಪಿ ದೇಶದಲ್ಲಿದೆ. ಹಿಂದೂ ಮುಸ್ಲಿಂ ಭಾಯಿ ಭಾಯಿ ಭಾರತ ಮಾತೆ ನಮ್ಮ ತಾಯಿ ಅನ್ನೋ ಸಂದೇಶದಲ್ಲಿ ಕೆ ಆರ್ ಪಿ ಪಕ್ಷ ಕಟ್ಟಿದ್ದೇನೆ ಎಂದು ವಿವರಿಸಿದರು.

ಇವತ್ತಿನ ಬಿಜೆಪಿಗೆ ತತ್ವ ಸಿದ್ಧಾಂತ ಯಾವುದು ಇಲ್ಲಾ, ಎಲ್ಲಾ ಮಣ್ಣು ಪಾಲಾಗಿದೆ. ಬಿಜೆಪಿಯಲ್ಲಿ ಇವತ್ತು ಎಲ್ಲವೂ ವ್ಯಾಪಾರ ಆಗಿಬಿಟ್ಟಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದು ಯಡಿಯೂರಪ್ಪರನ್ನ ಸಿಎಂ ಮಾಡಲು ಶ್ರಮಿಸಿದ್ದೇವೆ. ವಾಜಪೇಯಿ, ಅಡ್ವಾಣಿ, ಸುಷ್ಮಾಸ್ವರಾಜ್ ನಮ್ಮನ್ನ ಮಕ್ಕಳ ರೀತಿ ನೋಡುತ್ತಿದ್ದರು ಎಂದು ಜನಾರ್ದನ ರೆಡ್ಡಿ ತಿಳಿಸಿದರು.

ಕೆ ಆರ್ ಪಿ ಪಕ್ಷದ ಪ್ರಣಾಳಿಕೆಯ ಭರವಸೆಗಳನ್ನ ಒಪ್ಪಿದರೆ ಹಾಗೂ ನನ್ನ ಜೊತೆ ಭರವಸೆ ಪೂರೈಸುತ್ತೇನೆ ಅಂತ ಸಿದ್ದರಾಮಯ್ಯ ಹೇಳಿದರೆ, ಅವರು ಮುಖ್ಯಮಂತ್ರಿಯಾಗ್ತಾರೆ ಅಂದ್ರೆ ಅವರನ್ನು ನಾನು ಬೆಂಬಲಿಸುತ್ತೇನೆ ಎಂದವರು ಪರೋಕ್ಷವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿಜೆಪಿಯಲ್ಲಿರುವವರು ಬರೀ ಕುತಂತ್ರಿಗಳು, ಇಡೀ ರಾಜ್ಯವನ್ನು ಬಿಜೆಪಿ ಸರ್ವನಾಶ ಮಾಡಿಬಿಟ್ಟಿದೆ : ಬಿಜೆಪಿ ವಿರುದ್ದ ಜನಾರ್ದನ ರೆಡ್ಡಿ ವಾಗ್ದಾಳಿ Rating: 5 Reviewed By: karavali Times
Scroll to Top