ಮಂಗಳೂರು ಉತ್ತರದಲ್ಲಿ ಜೋರಾಗಿ ಬೀಸುತ್ತಿದೆ ಜೆಡಿಎಸ್ ಹವಾ : ಮೊಯಿದಿನ್ ಬಾವಾ ಜನಪರ ಸೇವಾ ಕಾರ್ಯಗಳ ಫಲ ಉಣ್ಣಲಿದೆಯೇ ಜೆಡಿಎಸ್? ದಕ್ಷಿಣ ಕನ್ನಡದಲ್ಲಿ ಖಾತೆ ತೆರೆಯುವ ಉತ್ಸಾಹದಲ್ಲಿ ಪ್ರಾದೇಶಕ ಪಕ್ಷ! - Karavali Times ಮಂಗಳೂರು ಉತ್ತರದಲ್ಲಿ ಜೋರಾಗಿ ಬೀಸುತ್ತಿದೆ ಜೆಡಿಎಸ್ ಹವಾ : ಮೊಯಿದಿನ್ ಬಾವಾ ಜನಪರ ಸೇವಾ ಕಾರ್ಯಗಳ ಫಲ ಉಣ್ಣಲಿದೆಯೇ ಜೆಡಿಎಸ್? ದಕ್ಷಿಣ ಕನ್ನಡದಲ್ಲಿ ಖಾತೆ ತೆರೆಯುವ ಉತ್ಸಾಹದಲ್ಲಿ ಪ್ರಾದೇಶಕ ಪಕ್ಷ! - Karavali Times

728x90

7 May 2023

ಮಂಗಳೂರು ಉತ್ತರದಲ್ಲಿ ಜೋರಾಗಿ ಬೀಸುತ್ತಿದೆ ಜೆಡಿಎಸ್ ಹವಾ : ಮೊಯಿದಿನ್ ಬಾವಾ ಜನಪರ ಸೇವಾ ಕಾರ್ಯಗಳ ಫಲ ಉಣ್ಣಲಿದೆಯೇ ಜೆಡಿಎಸ್? ದಕ್ಷಿಣ ಕನ್ನಡದಲ್ಲಿ ಖಾತೆ ತೆರೆಯುವ ಉತ್ಸಾಹದಲ್ಲಿ ಪ್ರಾದೇಶಕ ಪಕ್ಷ!

ಮಂಗಳೂರು, ಮೇ 08, 2023 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಜೆಡಿಸ್ ಹವಾ ಜೋರಾಗಿ ಬೀಸಲಾರಂಭಿಸಿದೆ. ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಮಾಡಿಕೊಂಡಿರುವ ಎಡವಟ್ಟು ಇದೀಗ ಪಕ್ಷಕ್ಕೆ ಭಾರೀ ನಷ್ಟ ತಂದುಕೊಡುವ ಸಾಧ್ಯತೆ ಕ್ಷೇತ್ರದಲ್ಲಿ ಕಂಡು ಬರುತ್ತಿದೆ.  ಕ್ಷೇತ್ರದ ಜನ ಮಾಜಿ ಶಾಸಕ ಮೊಯಿದಿನ್ ಬಾವಾ ಪಕ್ಷ ಬದಲಾಯಿಸಿದರೂ ಇನ್ನೂ ಅವರ ಬಗ್ಗೆ ವಿಶೇಷ ಒಲವು ತೋರುತ್ತಿರುವುದು ಕ್ಷೇತ್ರದಲ್ಲಿ ಕಂಡು ಬರುತ್ತಿದೆಯಲ್ಲದೆ ದಿನದಿಂದ ದಿನಕ್ಕೆ ಮೊಯಿದಿನ್ ಬಾವಾ ಪರ ಜನರ ಅನುಕಂಪ ಹೆಚ್ಚಾಗುತ್ತಿದೆ. ಬಾವಾ ಹೋದಲ್ಲೆಲ್ಲಾ ಜನ ಹಿಂಬಾಲಿಸುತ್ತಿದ್ದಾರೆ. 

ಮೊಯಿದಿನ್ ಬಾವಾ ಅವರು ಕಳೆದೆರಡು ಬಾರಿ ಕ್ಷೇತ್ರದ ಜನರ ಮೇಲೆ ತೋರಿರುವ ಪ್ರೀತಿ, ಮಾಡಿರುವ ಅಭಿವೃದ್ದಿ ಕಾರ್ಯಗಳು ಇದೀಗ ಕ್ಷೇತ್ರದಲ್ಲಿ ಪಕ್ಷ ಬದಲಾಯಿಸಿದರೂ ಬಾವಾ ಪರ ಅಲೆಯೆಬ್ಬಿಸುತ್ತಿದ್ದು, ಬಾವಾ ಅವರ ಜನಸೇವಾ ಕಾರ್ಯಗಳ ಫಲವನ್ನು ಈ ಬಾರಿ ಜೆಡಿಎಸ್ ಪಕ್ಷ ಉಣ್ಣುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾದೇಶಕ ಪಕ್ಷದ ಖಾತೆ ಆರಂಭವಾಗಲಿದೆಯೇ ಎಂಬ ಸನ್ನಿವೇಶ ನಿರ್ಮಾಣವಾಗಿದೆ. 

ಕಳೆದ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಸ್ಥಾನಗಳನ್ನು ಕಾಂಗ್ರೆಸ್ ಕಳೆದುಕೊಂಡ ಪೈಕಿ ಬಾವಾ ಕೂಡಾ ಸೋಲುಂಡಿದ್ದರು. ಆದರೂ ಕೂಡಾ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವಿನ ಒಡನಾಟವನ್ನು ಒಂದು ದಿನವೂ ಬಿಟ್ಟಿರಲಿಲ್ಲ. ಐದು ವರ್ಷಗಳಲ್ಲೂ ಕ್ಷೇತ್ರ ವ್ಯಾಪ್ತಿಯ ಎಲ್ಲ ಕಾರ್ಯಕ್ರಮಗಳು, ಜನರ ಬೇಕು-ಬೇಡಗಳಿಗೆ ಸದಾ ಸ್ಪಂದಿಸುವ ಮೂಲಕ ಜನರ ಮಧ್ಯೆಯೇ ತೊಡಗಿಸಿಕೊಂಡಿದ್ದರು. ರಾಜಕೀಯ ಸ್ಥಾನಮಾನಕ್ಕಿಂತ ಹೆಚ್ಚಾಗಿ ಜನರ ಮಧ್ಯೆ ಸೇವಾ ಮನೋಭಾವದೊಂದಿಗೆ ಬೆರೆತುಕೊಂಡ ಹಿನ್ನಲೆಯಲ್ಲಿ ಬಾವಾ ಸಹಜವಾಗಿ ಮತ್ತೊಮ್ಮೆ ಕಾಂಗ್ರೆಸ್ ಬಿ ಫಾರಂ ಪಡೆಯುತ್ತಾರೆ ಎಂದೇ ಕೊನೆಕ್ಷಣದವರೆಗೂ ಭಾವಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಾವಾಗೆ ಮೋಸ ಮಾಡಿ ಹೊಸಬರಿಗೆ ಪಕ್ಷದ ಟಿಕೆಟ್ ದಯಪಾಲಿಸಿತ್ತು. ಅದೂ ಕೂಡಾ ನಾಮಪತ್ರ ಸಲ್ಲಿಕೆಯ ಮುನ್ನಾ ದಿನ ಮಧ್ಯರಾತ್ರಿ 2 ಗಂಟೆ ವೇಳೆಗೆ ಕಾಂಗ್ರೆಸ್ ಹೈಕಮಾಂಡ್ ಬಿ ಫಾರಂ ಬಿಕರಿ ಮಾಡಿಕೊಂಡಿತ್ತು. ಇದೊಂದು ಅಕ್ಷರಶಃ ಮೋಸ ಹಾಗೂ ತುಳಿಯುವ ಕ್ರಮ ಎಂದು ಆಕ್ರೋಶಿತರಾದ ಕ್ಷೇತ್ರದ ಜನ ಬಾವಾ ಅವರು ಏನೇ ಹೆಜ್ಜೆ ಹಾಕಿದರೂ ಅವರ ಜೊತೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದರು. 

ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದ ಮೊಯಿದಿನ್ ಬಾವಾ ನಾಮಪತ್ರ ಸಲ್ಲಿಕೆಯ ಕೊನೆ ದಿನ ಹಠಾತ್ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷದ ಬಿ ಫಾರಂ ಪಡೆದುಕೊಂಡು ನಾಮಪತ್ರವನ್ನೂ ಸಲ್ಲಿಸಿ ತಕ್ಷಣದಿಂದಲೇ ಚುನಾವಣಾ ಪ್ರಚಾರ ಆಖಾಡಕ್ಕೆ ಇಳಿದಿದ್ದು, ಇದುವರೆಗೂ ದಣಿವರಿಯದೆ ಕ್ಷೇತ್ರ ಪರ್ಯಟನೆ ಮಾಡುತ್ತಿದ್ದಾರೆ. ಬಾವಾ ಅವರೊಂದಿಗೆ ಕ್ಷೇತ್ರ ಜನ ಕೂಡಾ ಹೆಜ್ಜೆಗೆ ಹೆಜ್ಜೆ ಹಾಕಿ ಬಾವಾ ಅವರನ್ನು ಗೆಲ್ಲಿಸುವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. 

ಕಳೆದ ಬಾರಿ ಬಿಜೆಪಿ ಅಲೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಕೊಚ್ಚಿ ಹೋಗಿದ್ದರೂ ಬಳಿಕ ಮೊಯಿದಿನ್ ಬಾವಾ ಅವರು ಕ್ಷೇತ್ರದಲ್ಲಿ ಸರ್ವ ಜನಾಂಗದ ಜನರ ಮನಸ್ಸನ್ನು ಗೆದ್ದುಕೊಳ್ಳುವ ಮೂಲಕ ಮತ್ತೆ ಕಾಂಗ್ರೆಸ್ ಪರ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ಐದು ವರ್ಷಗಳಲ್ಲೂ ಎಲ್ಲೂ ಪಕ್ಷದ ಹಿರಿಯ ನಾಯಕರ ಹಿಂದಿನಿಂದ ಓಡಾಡಲು ಸಮಯ ವ್ಯರ್ಥ ಮಾಡದೆ ಕ್ಷೇತ್ರದ ಜನರ ಮನಸ್ಸನ್ನು ಮತ್ತೆ ಕಾಂಗ್ರೆಸ್ ಪರವಾಗಿ ಗೆದ್ದುಕೊಳ್ಳುವ ನಿಟ್ಟಿನಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ರೂಪಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದರು. ಆದರೆ ಬಾವಾ ಅವರ ಪಕ್ಷದ ಪರವಾದ ಪ್ರಯತ್ನವನ್ನು ಪಕ್ಷದ ನಾಯಕರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿ ಝಣ ಝಣ ಕಾಂಚಾನದ ಹಿಂದೆ ಬಿದ್ದು ಇದೀಗ ಕೈ ಸುಟ್ಟುಕೊಳ್ಳುವ ಹಂತಕ್ಕೆ ಪರಿಸ್ಥಿತಿ ಬಂದು ನಿಂತಿದೆ. 

ಮೊಯಿದಿನ್ ಬಾವ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದತ್ತ ಪಯಣ ಮುಂದುವರಿಸಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ಮನೋಭಾವ ತೋರಿದ್ದರು. ಕಳೆದ ಬಾರಿ ಅಪಪ್ರಚಾರದಿಂದಲೇ ಸೋಲಾಗಿದೆ ಎಂದು ಬಾವಾ ಹೇಳಿಕೊಳ್ಳುತ್ತಿದ್ದರೂ ಅದನ್ನೇ ನಂಬಿಕೊಂಡು ಕೂರದೆ ಕಳೆದ ಬಾರಿ ಎಲ್ಲಿಯಾದರೂ ತನ್ನ ವರ್ತನೆ, ಕಾರ್ಯ ಚಟುವಟಿಕೆಯಿಂದ ಎಡವಿದ್ದೇನೆಯೇ ಎಂಬ ಪರಾಮರ್ಶೆ ಮಾಡುತ್ತಾ ಅದೆಲ್ಲವನ್ನೂ ಸರಿಪಡಿಸಿ ಈ ಬಾರಿ ಕ್ಷೇತ್ರದ ಪ್ರತಿಯೊಬ್ಬ ಮತದಾರನ ಮನದಾಳ ಅರಿತುಕೊಂಡು ಗರಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರು. ಬಿಜೆಪಿ ಶಾಸಕರ ವೈಫಲ್ಯ ಕೂಡಾ ಈ ಬಾರಿ ಬಾವಾ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿತ್ತು. ಬಾವಾ ಪಕ್ಷದ ನಾಯಕರ ನಿರಂತರ ಒಡನಾಟ ಇಟ್ಟುಕೊಂಡು ಕ್ಷೇತ್ರದಲ್ಲಿದ್ದುಕೊಂಡೇ ಪಕ್ಷಕ್ಕಾಗಿ ತ್ಯಾಗಪೂರ್ಣ ಕಾರ್ಯಚಟುವಟಿಕೆಗಳನ್ನು ಕೈಗೊಂಡು ಓಡಾಡುತ್ತಿದ್ದರು. 

ಕಳೆದ ಚುನಾವಣೆಯ ಸೋಲಿನ ಬಳಿಕ ಮೊಯಿದಿನ್ ಬಾವಾ ಅವರು ಕ್ಷೇತ್ರದ ಜನರ ನಡುವೆ ನಿರಂತರ ಒಡನಾಟ ಇಟ್ಟುಕೊಂಡಿದ್ದಲ್ಲದೆ ಶಾಸಕ ಅಲ್ಲದಿದ್ದರೂ ವಿಧಾನ ಪರಿಷತ್ ಸದಸ್ಯ ಬಿ ಎಂ ಫಾರೂಕ್ ಅವರ ಅನುದಾನವನ್ನು ಕ್ಷೇತ್ರಕ್ಕೆ ತರಿಸಿ ಅಭಿವೃದ್ದಿ ಕಾಮಗಾರಿಗಳನ್ನೂ ನಡೆಸಿದ್ದಲ್ಲದೆ, ಕೊರೋನಾ ಲಾಕ್ ಡೌನ್ ಸಂದರ್ಭ ತನ್ನ ಸ್ವಂತ ದುಡ್ಡಿನಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆರೋಗ್ಯ ಸಂಬಂಧಿ ಸೇವೆ ಸಹಿತ ಇತರ ಮಾನವೀಯ ಸೇವೆಗಳನ್ನು ಜಾತಿ-ಧರ್ಮ, ಪಕ್ಷ ಬೇಧ ನೋಡದೆ ನಡೆಸಿದ್ದಾರೆ. ಸ್ವತಃ ಮುಂದಾಳುತ್ವ ವಹಿಸಿ ಶವ ಸಂಸ್ಕಾರದಂತಹ ಕಾರ್ಯಗಳನ್ನೂ ನಡೆಸಿರುವ ಮೊಯಿದಿನ್ ಬಾವಾ ಅವರಿಗೆ ಈ ಎಲ್ಲಾ ಸೇವಾ ಕಾರ್ಯಗಳೂ ಬೆನ್ನ ಹಿಂದೆ ಇದ್ದು, ಇದೀಗ ಮಾಜಿ ಪ್ರಧಾನ ಮಂತ್ರಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯ, ಬಾವಾ ಅವರ ಸಹೋದರ ಬಿ ಎಂ ಫಾರೂಕ್ ಸಹಿತ ಜೆಡಿಎಸ್ ಘಟಾನುಘಟಿಗಳು ಕ್ಷೇತ್ರಕ್ಕೆ ಆಗಮಿಸಿ ಬಾವಾ ಪರ ಅಬ್ಬರದ ಪ್ರಚಾರ ಕೈಗೊಂಡು ಒಂದು ರೀತಿಯಲ್ಲಿ ಬಾವಾ ಹವಾ ಇದೀಗ ಜೆಡಿಎಸ್ ಹವಾ ಆಗಿ ಮಾರ್ಪಾಟು ಆಗಿದ್ದು, ಬಾವಾ ಅವರು ಭರ್ಜರಿ ಮತ ಭೇಟೆ ನಡೆಸುವುದರಲ್ಲಿ ಸಂಶಯವಿಲ್ಲ. ಬಾವಾ ಅವರ ಜನಬೆಂಬಲ ಕಂಡು ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಡಾ ಭರತ್ ಶೆಟ್ಟಿ ಕೂಡಾ ಒಂದು ರೀತಿಯಲ್ಲಿ ಮಂಕಾಗಿ ಹೋಗಿದ್ದಾರೆ ಎನ್ನಲಾಗುತ್ತಿದೆ. 

ಮಂಗಳೂರು ಉತ್ತರದಲ್ಲಿ ಜೆಡಿಎಸ್ ಬಿ ಫಾರಂನಿಂದ ಸ್ಪರ್ಧಿಸುತ್ತಿರುವ ಮೊಯಿದಿನ್ ಬಾವಾ ಅವರ ಅಬ್ಬರ ಕಂಡು ಇದೀಗ ಕಾಂಗ್ರೆಸ್ ನಾಯಕರು ಸ್ವತಃ ಕೈ ಕೈ ಹಿಸುಕುವಂತಾಗಿದೆ. ಆದರೆ ಕಾಲ ಮಿಂಚಿ ಹೋಗಿದ್ದು, ಕಾಂಗ್ರೆಸ್ ಕೈ ಸುಟ್ಟುಕೊಳ್ಳುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ. 

ಒಟ್ಟಿನಲ್ಲಿ ಮೊಯಿದಿನ್ ಬಾವಾ ಅವರ ಸೇವಾ ಕಾರ್ಯಗಳು ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಶಾಸಕ ಸ್ಥಾನ ತಂದುಕೊಡುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಉತ್ತರದಲ್ಲಿ ಜೋರಾಗಿ ಬೀಸುತ್ತಿದೆ ಜೆಡಿಎಸ್ ಹವಾ : ಮೊಯಿದಿನ್ ಬಾವಾ ಜನಪರ ಸೇವಾ ಕಾರ್ಯಗಳ ಫಲ ಉಣ್ಣಲಿದೆಯೇ ಜೆಡಿಎಸ್? ದಕ್ಷಿಣ ಕನ್ನಡದಲ್ಲಿ ಖಾತೆ ತೆರೆಯುವ ಉತ್ಸಾಹದಲ್ಲಿ ಪ್ರಾದೇಶಕ ಪಕ್ಷ! Rating: 5 Reviewed By: karavali Times
Scroll to Top