ಬಂಟ್ವಾಳ, ಮೇ 22, 2023 (ಕರಾವಳಿ ಟೈಮ್ಸ್) : ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನರ್ಸಿಂಗ್ ಹೋಂ ಸ್ಥಾಪಕ, ಮಾಲಕ ಹಾಗೂ ಎಂ ಡಿ ಡಾ ಮುಹಮ್ಮದ್ (80) ಅವರು ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಪರ್ಲಿಯಾದ ಸ್ವಗೃಹದಲ್ಲಿ ನಿಧನರಾದರು.
ಪರ್ಲಿಯಾ ನರ್ಸಿಂಗ್ ಹೋಂನ ಖ್ಯಾತ ಸ್ತ್ರೀ ತಜ್ಞೆ ಡಾ ಮೈಮೂನಾ ಅವರ ಪತಿಯಾಗಿರುವ ಇವರು ಸುದೀರ್ಘ ಕಾಲ ಪಾಣೆಮಂಗಳೂರು ಸಮೀಪದ ಆಲಡ್ಕದಲ್ಲಿ ಕ್ಲಿನಿಕ್ ಹೊಂದಿ ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡಿ ಮೊಮ್ಮೊದು ಡಾಕ್ಟರ್ ಎಂದೇ ಜನಾನುರಾಗಿಯಾಗಿದ್ದಾರೆ.
ಇವರಿಗೆ ಡಾ ಇರ್ಫಾನ್, ಡಾ ಇಮ್ರಾನ್, ಇಸಾನ್, ಹಾಗೂ ಡಾ ರಿಮಾ ಎಂಬ ಮಕ್ಕಳಿದ್ದಾರೆ. ಮಂಗಳೂರಿನ ಖ್ಯಾತ ಕ್ಯಾನ್ಸರ್ ತಜ್ಞ ಡಾ ಜಲಾಲುದ್ದೀನ್ ಅಕ್ಬರ್ ಅವರ ಚಿಕ್ಕಪ್ಪರಾಗಿದ್ದಾರೆ.
0 comments:
Post a Comment