ಪುತ್ತೂರು, ಮೇ 16, 2023 (ಕರಾವಳಿ ಟೈಮ್ಸ್) : ಪುತ್ತೂರು ನಗರಸಭಾ ವ್ಯಾಪ್ತಿಯ ಕೆ ಎಸ್ ಆರ್ ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖಾ ಆವರಣ ಗೋಡೆ ಬಳಿ ಸೋಮವಾರ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ದಾಂಜಲಿ” ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಾಜಿ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರ ವಿರುದ್ದ ಅವಹೇಳನಕಾರಿ ಬರಹ ಇದ್ದ ಬ್ಯಾನರ್ ಪ್ರದರ್ಶಿಸಿಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಮತ್ತೆ 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನರಿಮೊಗರು ನಿವಾಸಿಗಳಾದ ಅಭಿ ಅಲಿಯಾಸ್ ಅವಿನಾಶ್ ಬಿನ್ ವೇಣುಗೋಪಾಲ್, ಶಿವರಾಮ್ ಬಿನ್ ಲಕ್ಷ್ಮಣ್, ಚೈತ್ರೇಶ್ ಬಿನ್ ಬಾಬು, ಈಶ್ವರ ಬಿನ್ ಪೂವಪ್ಪ, ನಿಶಾಂತ್ ಬಿನ್ ಪೂವಪ್ಪ, ದೀಕ್ಷಿತ್ ಬಿನ್ ಗುರುವಪ್ಪ, ಹಾಗೂ ಗುರುಪ್ರಸಾದ್ ಎಂದು ಗುರುತಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್ ನೀಡಿದ ದೂರಿನಂತೆ ಸೋಮವಾರವೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಪುತ್ತೂರು-ನರಿಮೊಗರು ನಿವಾಸಿ ಅಲಂಬರ್ ಎಂಬವರ ಪುತ್ರರಾದ ವಿಶ್ವನಾಥ ಹಾಗೂ ಮಾಧವ ಎಂಬವರನ್ನು ಬಂಧಿಸಿದ್ದರು. ಇದೀಗ ಮತ್ತೆ ಏಳು ಮಂದಿಯನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಧಿತರ ಒಟ್ಟು ಸಂಖ್ಯೆ 9ಕ್ಕೇರಿದಂತಾಗಿದೆ.
ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣಾ ಅಪರಾಧ ಕ್ರಮಾಂಕ 37/2023 ಕಲಂ 3 ಕರ್ನಾಟಕ ಬಹಿರಂಗ ಸ್ಥಳ ವಿರೂಪಗೊಳಿಸುವುದನ್ನು ಪ್ರತಿಬಂಧಿಸುವ ಅಧಿನಿಯಮ 1981 ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment